CM ಹೆಚ್ಡಿ.ಕುಮಾರಸ್ವಾಮಿ ರವರ ೫೯ ನೇ ಹುಟ್ಟು ಹಬ್ಬ: ಗವಿಮಠದಲ್ಲಿ ಪೂಜೆ

koppal CM ಹೆಚ್_ಡಿ_ಕುಮಾರಸ್ವಾಮಿ ರವರ ೫೯ ನೇ ಹುಟ್ಟು ಹಬ್ಬದ ಕಾರ್ಯಕ್ರಮ ಬೆಳಗ್ಗೆ ೯-೦೦ ಗಂಟೆಗೆ ಶ್ರೀ ಗವಿಮಠದಲ್ಲಿ ಪೂಜೆ ಸಲ್ಲಿಸಿ ನಂತರ ಮಧ್ಯಾನ್ಹ ೨-೦೦ ಗಂಟೆಗೆ ಶ್ರೀ ಗವಿಮಠದ ವಿಧ್ಯಾರ್ಥಿಗಳ ನಿಲಯದಲ್ಲಿ ವಿಧ್ಯಾರ್ಥಿಗಳಿಂದ ಕೆಕ್ ಕತ್ತರಿಸಿ ಸಿಹಿಯನ್ನು ಹಂಚಲಾಯಿತು ಮತ್ತು ಜಿಲ್ಲಾ ಕಾರ್ಯಾಧ್ಯಕ್ಷ ವಿರೇಶ ಮಹಾಂತಯ್ಯನಮಠ ರವರಿಂದ ವಿಧ್ಯಾರ್ಥಿಗಳಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು ಈ ಸಂದರ್ಭದಲ್ಲಿ ವಿರೇಶ ಮಹಾಂತಯ್ಯನಮಠ ಮಾತನಾಡಿ ಮಾನ್ಯ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿರವರ ೫೯ ನೇ ಹುಟ್ಟು ಹಬ್ಬದ ಅಂಗವಾಗಿ ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಕುಮಾರಸ್ವಾಮಿರವರಿಗೆ ಶ್ರೀ ಗವಿಸಿದ್ದೇಶ್ವರನು ಆರೋಗ್ಯ ಮತ್ತು ಹೆಚ್ಚಿನ ಆಯಸ್ಸು ಕೊಡಲಿ ರಾಜ್ಯದ ಜನತೆಗೆ ಕುಮಾರಸ್ವಾಮಿರವರು ಒಳ್ಳೆಯದು ಮಾಡಲಿ ರೈತರಿಗೆ ಕೂಲಿ ಕಾರ್ಮಿಕರಿಗೆ ಎಲ್ಲಾ ಸಮುದಾಯದವರಿಗೆ ಹೆಚ್ಚಿನ ಆದ್ಯತೆ ಕೊಡಲಿ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರ ಕಷ್ಟಕ್ಕೆ ಸ್ಪಂದಿಸಲಿ ದೇವರು ಕುಮಾರಣ್ಣನಿಗೆ ಭಗವಂತನು ಹೆಚ್ಚಿನ ಶಕ್ತಿಯನ್ನು ಕೊಟ್ಟು ಕಾಪಾಡಲಿ ಎಂದು ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಅಮರೇಗೌಡ ಪಾಟೀಲ್, ಜಿಲ್ಲಾ ವಕ್ತಾರ ಮೌನೇಶ ವಡ್ಡಟ್ಟಿ, ಮುಖಂಡರಾದ ಸಿ.ಎಂ ಹಿರೆಮಠ, ಮಂಜುನಾಥ್ ಸೊರಟುರ, ಶರಣಪ್ಪ ಕುಂಬಾರ, ವೆಂಕಟೇಶ ಬೆಲ್ಲದ, ಪ್ರಭಾಕರ್ ಬಡಿಗೆರ, ಅಯುಬ ಅಡ್ಡವಾಲೆ, ಮಹೆಮುದ, ಸೊಮಲಿಂಗ , ವಿಠಲ್ , ದೆವಪ್ಪ, ಕುಮಾರ ಮತ್ತಿತರರಿದ್ದರು.

Please follow and like us: