You are here
Home > Koppal News > C.C ರಸ್ತೆ ಕಾಮಗಾರಿಗೆ ಭೂಮಿ ಪೂಜೆ

C.C ರಸ್ತೆ ಕಾಮಗಾರಿಗೆ ಭೂಮಿ ಪೂಜೆ


ಕೊಪ್ಪಳ: ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಸಿ ಸಿ ರಸ್ತೆ, ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಆಧ್ಯತೆ ನೀಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಇಕ್ಬಾಲ್ ಅನ್ಸಾರಿ ಹೇಳಿದರು. ಕೊಡದಾಳ ಗ್ರಾಮದಲ್ಲಿ 40 ಲಕ್ಷ ವೆಚ್ಚದ ಸಿ ಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ಮುಖ್ಯಮಂತ್ರಿ ಸಿದ್ಧರಾಮಯ್ಯರೊಂದಿಗೆ ಪರಸ್ಪರ ಸಹಕಾರದಿಂದ ಕ್ಷೇತ್ರಕ್ಕೆ ಅನುದಾನ ತರುತ್ತಿದ್ದು ಹಾಸಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿಯೇ ಅಂದಾಜು ಒಂದು ಕೋಟಿ ರೂ.ಗಳ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು. ನಂತರ ಅರಶಿನಕೇರಿ ಗ್ರಾಮದಲ್ಲಿ 40 ಲಕ್ಷ ವೆಚ್ಚದ ಸಿ ಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ, 7 ಲಕ್ಷ ವೆಚ್ಚದ ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಜನರ ಕುಂದು ಕೊರತೆ ಆಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ  ಶೀಘ್ರ ಪರಿಹಾರಕ್ಕೆ ಸೂಚಿಸಿದರು. ನಂತರ ಹಾಸಗಲ್, ವೆಂಕಟಾಪುರ, ಹಿರೇಸೂಳಿಕೇರಿ, ಹಿರೇಸೂಳಿಕೇರಿ ತಾಂಡಾದಲ್ಲಿ ಒಟ್ಟು 65 ಲಕ್ಷ ವೆಚ್ಚದ ಸಿ ಸಿ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ, ಎರಡು ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾರುತಿ ಚಾಮಲಾಪುರು, ಸಂಗಮೇಶ ಬಾದವಾಡಗಿ, ಮಲ್ಲೇಶಪ್ಪ ಗುಮಗೇರಿ, ಪಕೀರಪ್ಪ ಎಮ್ಮಿ, ಗ್ರಾ.ಪಂ. ಅಧ್ಯಕ್ಷ ತುಕಾರಾಮ ಬಡಿಗೇರ, ಪರಮೇಶ ಬಡಿಗೇರ, ಬಸವಕುಮಾರ, ಕೊಟ್ರೇಶ, ಇತರರು ಉಪಸ್ಥಿತರಿದ್ದರು.   

               

              

Leave a Reply

Top