fbpx

ಇತಿಹಾಸ ಸೃಷ್ಟಿಸಿದ ರಾಘವೇಂದ್ರ ಹಿಟ್ನಾಳ

ಕೊಪ್ಪಳ : ಮೇ-೦೮, ಕೊಪ್ಪಳ ವಿಧಾನಸಭಾ ಐತಿಹಾಸಿಕ ಚುನಾವಣೆಯಲ್ಲಿ ಭರ್ಜರಿಗೆಲುವು ಸಾದಿಸಿದ ಕೆ. ರಾಘವೇಂದ್ರ ಹಿಟ್ನಾಳ ಈ ಗೆಲುವಿನೊಂದಿಗೆ ಕೊಪ್ಪಳ ವಿಧಾನ ಸಭಾ ಕ್ಷೇತ್ರದ ಮಾಜಿ ಎಂ.ಎಲ್. ಎ ಗಳ ಚಿರಂಜೀವಿಗಳಲ್ಲಿ ಗೆಲುವು ಸಾಧಿಸಿದ ಏಕೈಕ ಅಭ್ಯರ್ಥಿ ಕೆ. ರಾಘವೇಂದ್ರ ಹಿಟ್ನಾಳ ರವರು ಈ ಚುನಾವಣೆಯಲ್ಲಿ ಕರಡಿ ಸಂಗಣ್ಣನವಿರುದ್ದ ೨೬೦೦೦ ಅಧಿಕ ಮತಗಳಿಂದ ಜಯಬೇರಿ ಭಾರಿಸಿ ಮಾಜಿ ಶಾಸಕರ ಹೆಮ್ಮೆಯ ಪುತ್ರನಾಗಿ ಕೊಪ್ಪಳ  ಕ್ಷೇತ್ರದಲ್ಲಿ ವಿಜಯ ಶಾಲಿಯಾಗಿ ಹೊರಹೊಮ್ಮಿದ್ದಾನೆ. 
ಕಾಂಗ್ರೆಸ ವಲಯದಲ್ಲಿ ಹರ್ಷ ೧ ದಶಕದಿಂದ ಸೋತು ಬಸವಳಿದಿದ್ದ ಕಾಂಗ್ರೆಸ ಕಾರ್ಯಕರ್ತರಲ್ಲಿ ರಾಘವೇಂದ್ರ ಹಿಟ್ನಾಳರವರ ಗೆಲುವು ಕಾಂಗ್ರೆಸ ಪಕ್ಷದ ಎಲ್ಲಾ ಪದಾಧಿಕಾರಿಗಳು ಕಾರ್ಯಕರ್ತರು ಅಭಿಮಾನಿಗಳಲ್ಲಿ ಹರ್ಷದ ಹೊನಲು ಮೂಡಿಸಿದೆ ಈ ಸಂದರ್ಭದಲ್ಲಿ ಕಾಂಗ್ರೆಸ ಪಕ್ಷವನ್ನು ಬೆಂಬಲಿಸಿದ ಕ್ಷೇತ್ರದ ಎಲ್ಲಾ ಜನತೆಗೆ ಜಿಲ್ಲಾ ಅಧ್ಯಕ್ಷರಾದ ಕೆ. ಬಸವರಾಜ ಹಿಟ್ನಾಳ, ಎಸ್. ಬಿ ನಾಗರಳ್ಳಿ, ಅಂದಾನಪ್ಪ ಅಗಡಿ, ಜುಲ್ಲು ಖಾದರಿ, ಹೆಚ್. ಎಲ್. ಹಿರೇಗೌಡರ್, ಈಶಪ್ಪ ಮಾದಿನೂರ, ಶರಣಪ್ಪ ಸಜ್ಜನ್, ಸುರೇಶ ದೇಸಾಯಿ, ಮಹೇಂದ್ರ ಚೋಪ್ರಾ, ಪ್ರಸನ್ನ ಗಡಾದ, ದ್ಯಾಮಣ್ಣ ಚಿಲವಾಡಗಿ ನಾಗರಾಜ ಬಳ್ಳಾರಿ, ಮಲ್ಲಪ್ಪ ಕವಲೂರ, ಖಾಟನ್ ಪಾಷಾ , ಜುಬೇರ ಹುಸೇನಿ, ಮಾನ್ವಿ ಪಾಷಾ, ರಾಮಣ್ಣ ಕಲ್ಲನ್ನವರ, ಯಮನೂರಪ್ಪ ಕಲ್ಲನ್ನವರ್, ಮುತ್ತುರಾಜ ಕುಷ್ಠಗಿ, ಮೌಲಾಹುಸೇನ್ ಜಮಾದಾರ, ಗಾಳೆಪ್ಪ ಪುಜಾರ ಇನ್ನು ಅನೇಕರು ಹರ್ಷ ವ್ಯಕ್ತ ಪಡಿಸಿದರೆಂದು ಪಕ್ಷದ ವಕ್ತಾರ ಅಕ್ಬರ್ ಪಾಷಾ ಪಲ್ಟನ್  ತಿಳಿಸಿದ್ದಾರೆ. 
Please follow and like us:
error

Leave a Reply

error: Content is protected !!