You are here
Home > Koppal News > ಯಶಸ್ವಿಯಾಗಿ ಜರುಗಿದ ಬಡೇಸಾಬ್ ತಾತನ ತುಲಭಾರ.

ಯಶಸ್ವಿಯಾಗಿ ಜರುಗಿದ ಬಡೇಸಾಬ್ ತಾತನ ತುಲಭಾರ.

ಹೊಸಪೇಟೆ: ಸಂಡೂರು ತಾಲೂಕಿನ ತಾರಾನಗರದಲ್ಲಿ ಇತ್ತೀಚಿಗೆ ಕರ್ನಾಟಕ ರಾಜ್ಯ ನದಾಫ್, ಪಿಂಜಾರ್ ಸಂಘವು ಬಡೇಸಾಬ್ ತಾತನವರ ತುಲಭಾರ ನಡೆಸಿಕೊಟ್ಟಿತು. ಅಂದು ಬಡೇಸಾಬ್ ತಾತನವರ ಗದ್ದುಗೆ ಬಳಿ ಈ ತುಲಾಭಾರ ಕಾರ್ಯಕ್ರಮ ನಡೆಯಿತು. ಕರ್ನಾಟಕ ರಾಜ್ಯ ನದಾಫ್, ಪಿಂಜಾರ್ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಪಿ.ಬಾಲೇಸಾಬ್, ವಾಲ್ಮೀಕಿ ಸಂಘದ ತಾಲೂಕು ಉಪಾಧ್ಯಕ್ಷ ಎನ್.ಗೋವಿಂದಪ್ಪ ಹಾಜರಿದ್ದರು. ಸಾವಿರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಾತನವರ ಆರ್ಶೀವಾದ ಪಡೆದರು.

Leave a Reply

Top