ತ್ರಿಸ್ಟಾರ್‍ಸ್ ಹುಟ್ಟುಹಬ್ಬ-ಚಿತ್ರಗೀತೆ ಸ್ಪರ್ಧೆ.

ಕೊಪ್ಪಳ, ಸೆ. ೧೮. ನಗರದ ಸರಕಾರಿ ಬಾಲಕಿಯರ ಪ.ಪೂ. ಕಾಲೇಜಿನಲ್ಲಿ ಶನಿವಾರ ಬೆಳಿಗ್ಗೆ ೧೧ ಗಂಟೆಗೆ ಖ್ಯಾತ ಚಲನಚಿತ್ರ ನಟರಾದ ಡಾ|| ವಿಷ್ಣುವರ್ಧನ್, ಉಪೇಂದ್ರ ಮತ್ತು ಶೃತಿರವರ ಹುಟ್ಟುಹಬ್ಬ ನಿಮಿತ್ಯ ಚಲನಚಿತ್ರ ಗೀತೆ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಬೆಳ್ಳಿ ಮಂಡಲ, ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ಯುವಚೇತನ ಶಿವರಾಜ ತಂಗಡಗಿ ಅಭಿಮಾನಿಗಳ ವೇದಿಕೆ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಚಲನಚಿತ್ರ ಗೀತೆ ಸ್ಪರ್ಧೆಯಲ್ಲಿ ವಿಜೇತರಾದ ಮೂವರಿಗೆ ಪ್ರಶಸ್ತಿ ನೀಡಲಾಗುವದು ಎಂದು ತಿಳಿಸಿದ್ದಾರೆ. ಚಲನಚಿತ್ರ ರಂಗದಲ್ಲಿ ಜನರ ನಿರೀಕ್ಷೆ ಕುರಿತು ವಿಚಾರವಾದಿ ವಿಜಯ ಅಮೃತ್‌ರಾಜ್ ಮಾತನಾಡುವರು, ಚಿತ್ರ ರಂಗದ ಸೇವೆಗೆ ಮಂಜುನಾಥ ಪೂಜಾರರನ್ನು ಸನ್ಮಾನಿಸಲಾಗುವದು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಪೂಜಾರ, ಪ್ರಭಾರಿ ಮುಖ್ಯ ಗುರು ಸುನಿತಾ, ಡಾ|| ಮಹಾಂತೇಶ ಮಲ್ಲನಗೌಡರ, ಸದಾಶಿವ ಪಾಟೀಲ, ಬಸವರಾಜ ಮಾಲಗಿತ್ತಿ, ರಂಗನಾಥ ಕೋಳೂರು, ಬಸವರಾಜ ಭೋವಿ, ಬಸವರಾಜ ಕೊಪ್ಪಳ ಇತರರು ಪಾಲ್ಗೊಳ್ಳುವರು.
 
Please follow and like us:
error