ಸಿಂಧನೂರು, ಮಸ್ಕಿ, ಕನಕಗಿರಿ, ಯಲಬುರ್ಗಾ ಕ್ಷೇತ್ರಗಳಲ್ಲಿ ಬಿಜೆಪಿ ನಿರಂತರ ಮುನ್ನಡೆ

 ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಪೂರ್ಣಗೊಂಡು, ವಿಧಾನಸಭಾ ಕ್ಷೇತ್ರವಾರು ಅಭ್ಯರ್ಥಿಗಳು ಗಳಿಸಿದ ಮತಗಳನ್ನು ಗಮನಿಸಿದಾಗ, ಸಿಂಧನೂರು, ಮಸ್ಕಿ, ಕನಕಗಿರಿ ಮತ್ತು ಯಲಬುರ್ಗಾ ಸೇರಿದಂತೆ ೦೪ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಮುನ್ನಡೆಯನ್ನು ಪಡೆದರೆ, ಕುಷ್ಟಗಿ, ಗಂಗಾವತಿ, ಕೊಪ್ಪಳ ಮತ್ತು ಸಿರಗುಪ್ಪಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಹಿಟ್ನಾಳ್ ಅವರು ಮುನ್ನಡೆ ಪಡೆದುಕೊಂಡರು.  ಆದರೆ ಒಟ್ಟಾರೆ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಗೆಲುವು ಸಾಧಿಸಿದರು.
  ವಿಧಾನಸಭಾ ಕ್ಷೇತ್ರವಾರು ಮುನ್ನಡೆ ಪಡೆದ ವಿವರ ಇಂತಿದೆ.  ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಅವರು, ಸಿಂಧನೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಿಂತ- ೨೦೦೯೨ ಹೆಚ್ಚು ಮತ ಪಡೆದರೆ,  ಮಸ್ಕಿ- ೧೪೪೬೮, ಕನಕಗಿರಿ- ೧೩೫೨೮ ಹಾಗೂ ಯಲಬುರ್ಗಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಿಂತ ೭೭೧೮ ಅಧಿಕ ಮತ ಪಡೆದುಕೊಂಡರು.  ಕಾಂಗ್ರೆಸ್ ಅಭ್ಯರ್ಥಿ ಬಸವರಾಜ್ ಹಿಟ್ನಾಳ್ ಅವರು ಕುಷ್ಟಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಿಂತ ೧೪೩೦ ಹೆಚ್ಚು ಮತ ಪಡೆದರೆ, ಗಂಗಾವತಿ- ೧೦೨೪೫, ಕೊಪ್ಪಳ- ೧೦೮೦೮ ಹಾಗೂ ಸಿರಗುಪ್ಪ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಿಂತ ೧೦೦೮ ಹೆಚ್ಚು ಮತಗಳನ್ನು ಪಡೆದುಕೊಂಡರು.
ಅಭ್ಯರ್ಥಿಗಳ ಕ್ಷೇತ್ರವಾರು ಮತಗಳಿಕೆ ವಿವರ : 
ಸಿಂಧನೂರು ವಿಧಾನಸಭಾ ಕ್ಷೇತ್ರ : ಚಲಾವಣೆಗೊಂಡ ಒಟ್ಟು ಮತಗಳು- ೧೨೮೧೨೬.  ಸಂಗಣ್ಣ ಕರಡಿ- ೬೯೭೫೨, ಬಸವರಾಜ ಹಿಟ್ನಾಳ್- ೪೯೬೬೦, ಸೈಯದ್ ಆರಿಫ್- ೧೦೩೬, ತಿಮ್ಮಪ್ಪ ಉಪ್ಪಾರ- ೩೦೬. ನಜೀರ್ ಹುಸೇನ್- ೩೦೧, ಡಿ.ಹೆಚ್. ಪೂಜಾರ್- ೬೯೩, ಭರದ್ವಾಜ್-  ೨೮೨, ರಮೇಶ್ ಕೋಟಿ- ೨೭೩, ರಂಗನಾಥ ರೆಡ್ಡಿ- ೩೮೫, ಶಿವಕುಮಾರ ತೋಂಟಾಪುರ- ೫೬೦, ಅಣ್ಣೋಜಿರಾವ್- ೨೫೪, ವಿ. ಗೋವಿಂದ- ೯೩೦, ಗೋವಿಂದ ರೆಡ್ಡಿ- ೪೪೧, ನಾಗಪ್ಪ ಕಾರಟಗಿ- ೩೬೫, ಬಿ. ಮನೋಹರ- ೫೪೩, ಸುರೇಶ್- ೯೮೩, ನೋಟ- ೧೩೬೨.
ಮಸ್ಕಿ ವಿಧಾನಸಭಾ ಕ್ಷೇತ್ರ : ಚಲಾವಣೆಗೊಂಡ ಒಟ್ಟು ಮತಗಳು- ೧೦೧೩೨೧.  ಸಂಗಣ್ಣ ಕರಡಿ- ೫೩೪೨೧, ಬಸವರಾಜ ಹಿಟ್ನಾಳ್- ೩೮೯೫೩, ಸೈಯದ್ ಆರಿಫ್- ೧೦೮೧, ತಿಮ್ಮಪ್ಪ ಉಪ್ಪಾರ- ೩೬೫. ನಜೀರ್ ಹುಸೇನ್- ೩೧೪, ಡಿ.ಹೆಚ್. ಪೂಜಾರ್- ೬೬೧, ಭರದ್ವಾಜ್-  ೨೬೯, ರಮೇಶ್ ಕೋಟಿ- ೨೫೮, ರಂಗನಾಥ ರೆಡ್ಡಿ- ೩೩೯, ಶಿವಕುಮಾರ ತೋಂಟಾಪುರ- ೩೫೨, ಅಣ್ಣೋಜಿರಾವ್- ೩೦೩, ವಿ. ಗೋವಿಂದ- ೧೧೬೨, ಗೋವಿಂದ ರೆಡ್ಡಿ- ೪೦೪, ನಾಗಪ್ಪ ಕಾರಟಗಿ- ೩೮೮, ಬಿ. ಮನೋಹರ- ೫೭೩, ಸುರೇಶ್- ೧೦೮೨, ನೋಟ- ೧೩೯೬.
ಕುಷ್ಟಗಿ ವಿಧಾನಸಭಾ ಕ್ಷೇತ್ರ : ಚಲಾವಣೆಗೊಂಡ ಒಟ್ಟು ಮತಗಳು- ೧೧೯೮೨೬.  ಸಂಗಣ್ಣ ಕರಡಿ- ೫೪೩೬೩, ಬಸವರಾಜ ಹಿಟ್ನಾಳ್- ೩೮೯೫೩, ಸೈಯದ್ ಆರಿಫ್- ೧೪೦೫, ತಿಮ್ಮಪ್ಪ ಉಪ್ಪಾರ- ೩೬೮. ನಜೀರ್ ಹುಸೇನ್- ೩೩೪, ಡಿ.ಹೆಚ್. ಪೂಜಾರ್- ೨೮೯, ಭರದ್ವಾಜ್-  ೨೭೩, ರಮೇಶ್ ಕೋಟಿ- ೩೧೫, ರಂಗನಾಥ ರೆಡ್ಡಿ- ೩೪೪, ಶಿವಕುಮಾರ ತೋಂಟಾಪುರ- ೭೦೯, ಅಣ್ಣೋಜಿರಾವ್- ೩೨೬, ವಿ. ಗೋವಿಂದ- ೮೭೯, ಗೋವಿಂದ ರೆಡ್ಡಿ- ೪೨೫, ನಾಗಪ್ಪ ಕಾರಟಗಿ- ೪೬೨, ಬಿ. ಮನೋಹರ- ೬೮೪, ಸುರೇಶ್- ೧೨೪೭, ನೋಟ- ೧೬೧೦.
ಕನಕಗಿರಿ ವಿಧಾನಸಭಾ ಕ್ಷೇತ್ರ : ಚಲಾವಣೆಗೊಂಡ ಒಟ್ಟು ಮತಗಳು- ೧೩೩೦೫೪.  ಸಂಗಣ್ಣ ಕರಡಿ- ೬೯೩೩೭, ಬಸವರಾಜ ಹಿಟ್ನಾಳ್- ೫೫೮೦೯, ಸೈಯದ್ ಆರಿಫ್- ೧೦೧೮, ತಿಮ್ಮಪ್ಪ ಉಪ್ಪಾರ- ೩೦೯. ನಜೀರ್ ಹುಸೇನ್- ೨೩೧, ಡಿ.ಹೆಚ್. ಪೂಜಾರ್- ೧೬೮, ಭರದ್ವಾಜ್-  ೨೮೩, ರಮೇಶ್ ಕೋಟಿ- ೧೯೬, ರಂಗನಾಥ ರೆಡ್ಡಿ- ೨೬೬, ಶಿವಕುಮಾರ ತೋಂಟಾಪುರ- ೨೮೧, ಅಣ್ಣೋಜಿರಾವ್- ೨೨೩, ವಿ. ಗೋವಿಂದ- ೮೦೪, ಗೋವಿಂದ ರೆಡ್ಡಿ- ೩೦೦, ನಾಗಪ್ಪ ಕಾರಟಗಿ- ೩೨೭, ಬಿ. ಮನೋಹರ- ೫೪೪, ಸುರೇಶ್- ೧೧೩೭, ನೋಟ- ೧೮೨೧.
ಗಂಗಾವತಿ ವಿಧಾನಸಭಾ ಕ್ಷೇತ್ರ : ಚಲಾವಣೆಗೊಂಡ ಒಟ್ಟು ಮತಗಳು- ೧೨೩೮೮೫.  ಸಂಗಣ್ಣ ಕರಡಿ- ೫೩೪೬೦, ಬಸವರಾಜ ಹಿಟ್ನಾಳ್- ೬೩೭೦೫, ಸೈಯದ್ ಆರಿಫ್- ೧೧೫೩, ತಿಮ್ಮಪ್ಪ ಉಪ್ಪಾರ- ೨೨೩. ನಜೀರ್ ಹುಸೇನ್- ೧೯೯, ಡಿ.ಹೆಚ್. ಪೂಜಾರ್- ೧೮೭, ಭರದ್ವಾಜ್-  ೨೮೬, ರಮೇಶ್ ಕೋಟಿ- ೧೮೯, ರಂಗನಾಥ ರೆಡ್ಡಿ- ೧೫೧, ಶಿವಕುಮಾರ ತೋಂಟಾಪುರ- ೩೩೪, ಅಣ್ಣೋಜಿರಾವ್- ೧೮೫, ವಿ. ಗೋವಿಂದ-೩೬೯, ಗೋವಿಂದ ರೆಡ್ಡಿ- ೨೦೭, ನಾಗಪ್ಪ ಕಾರಟಗಿ- ೨೮೭, ಬಿ. ಮನೋಹರ- ೫೧೭, ಸುರೇಶ್- ೮೯೪, ನೋಟ- ೧೫೩೯.
ಯಲಬುರ್ಗಾ ವಿಧಾನಸಭಾ ಕ್ಷೇತ್ರ : ಚಲಾವಣೆಗೊಂಡ ಒಟ್ಟು ಮತಗಳು- ೧೨೭೩೧೫.  ಸಂಗಣ್ಣ ಕರಡಿ-  ೬೩೪೦೧, ಬಸವರಾಜ ಹಿಟ್ನಾಳ್- ೫೫೬೮೩, ಸೈಯದ್ ಆರಿಫ್- ೧೨೦೪, ತಿಮ್ಮಪ್ಪ ಉಪ್ಪಾರ- ೩೧೧. ನಜೀರ್ ಹುಸೇನ್- ೨೭೦, ಡಿ.ಹೆಚ್. ಪೂಜಾರ್- ೧೮೪, ಭರದ್ವಾಜ್-  ೨೫೫, ರಮೇಶ್ ಕೋಟಿ- ೨೨೪, ರಂಗನಾಥ ರೆಡ್ಡಿ- ೨೬೧, ಶಿವಕುಮಾರ ತೋಂಟಾಪುರ- ೩೯೧, ಅಣ್ಣೋಜಿರಾವ್- ೨೬೨, ವಿ. ಗೋವಿಂದ- ೮೩೩, ಗೋವಿಂದ ರೆಡ್ಡಿ- ೩೪೭, ನಾಗಪ್ಪ ಕಾರಟಗಿ- ೩೭೯, ಬಿ. ಮನೋಹರ- ೫೫೭, ಸುರೇಶ್- ೧೦೭೮, ನೋಟ- ೧೬೭೫.  
ಯಲಬುರ್ಗಾ ವಿಧಾನಸಭಾ ಕ್ಷೇತ್ರದ ತಳಕಲ್ ಗ್ರಾಮದ ಮತಗಟ್ಟೆ ಸಂಖ್ಯೆ ೨೨೨ ರ ವಿದ್ಯುನ್ಮಾನ ಮತಯಂತ್ರ ತಾಂತ್ರಿಕ ತೊಂದರೆಯ ಕಾರಣದಿಂದ ಈ ಮತಗಟ್ಟೆಯಲ್ಲಿ ಚಲಾವಣೆಯಾಗಿದ್ದ ೫೦೬ ಮತಗಳ ವಿವರ ಲಭ್ಯವಾಗಲಿಲ್ಲ.  ಆದರೆ ಗೆಲುವು ಸಾಧಿಸಿದ ಅಭ್ಯರ್ಥಿಯ ಮುನ್ನಡೆ ಪ್ರಮಾಣ ಹೆಚ್ಚಾಗಿದ್ದ ಕಾರಣ, ಭಾರತ ಚುನಾವಣಾ ಆಯೋಗದ ಅನುಮತಿಯನ್ನು ಪಡೆದು, ಜಿಲ್ಲಾ ಚುನಾವಣಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರು ಫಲಿತಾಂಶ ಘೋಷಿಸಿದರು.
ಕೊಪ್ಪಳ ವಿಧಾನಸಭಾ ಕ್ಷೇತ್ರ : ಚಲಾವಣೆಗೊಂಡ ಒಟ್ಟು ಮತಗಳು- ೧೫೪೯೨೪.  ಸಂಗಣ್ಣ ಕರಡಿ- ೬೮೫೪೧, ಬಸವರಾಜ ಹಿಟ್ನಾಳ್- ೭೯೩೪೯, ಸೈಯದ್ ಆರಿಫ್- ೧೪೨೪, ತಿಮ್ಮಪ್ಪ ಉಪ್ಪಾರ- ೨೧೩. ನಜೀರ್ ಹುಸೇನ್- ೧೭೯, ಡಿ.ಹೆಚ್. ಪೂಜಾರ್- ೧೯೫, ಭರದ್ವಾಜ್-  ೧೬೭, ರಮೇಶ್ ಕೋಟಿ- ೧೪೯, ರಂಗನಾಥ ರೆಡ್ಡಿ- ೧೭೮, ಶಿವಕುಮಾರ ತೋಂಟಾಪುರ- ೩೭೭, ಅಣ್ಣೋಜಿರಾವ್- ೧೩೭, ವಿ. ಗೋವಿಂದ- ೩೫೯, ಗೋವಿಂದ ರೆಡ್ಡಿ- ೧೮೭, ನಾಗಪ್ಪ ಕಾರಟಗಿ- ೨೫೮, ಬಿ. ಮನೋಹರ- ೪೩೮, ಸುರೇಶ್- ೭೭೭, ನೋಟ- ೧೯೯೬.
ಸಿರಗುಪ್ಪಾ ವಿಧಾನಸಭಾ ಕ್ಷೇತ್ರ : ಚಲಾವಣೆಗೊಂಡ ಒಟ್ಟು ಮತಗಳು- ೧೧೭೭೫೯.  ಸಂಗಣ್ಣ ಕರಡಿ- ೫೩೯೧೩, ಬಸವರಾಜ ಹಿಟ್ನಾಳ್- ೫೪೯೨೧, ಸೈಯದ್ ಆರಿಫ್- ೧೨೦೮, ತಿಮ್ಮಪ್ಪ ಉಪ್ಪಾರ- ೩೬೪. ನಜೀರ್ ಹುಸೇನ್- ೩೦೧, ಡಿ.ಹೆಚ್. ಪೂಜಾರ್- ೨೫೮, ಭರದ್ವಾಜ್-  ೨೭೪, ರಮೇಶ್ ಕೋಟಿ- ೨೬೩, ರಂಗನಾಥ ರೆಡ್ಡಿ- ೩೮೧, ಶಿವಕುಮಾರ ತೋಂಟಾಪುರ- ೪೧೮, ಅಣ್ಣೋಜಿರಾವ್- ೩೨೧, ವಿ. ಗೋವಿಂದ- ೯೬೪, ಗೋವಿಂದ ರೆಡ್ಡಿ- ೫೨೮, ನಾಗಪ್ಪ ಕಾರಟಗಿ- ೪೨೮, ಬಿ. ಮನೋಹರ- ೫೭೭, ಸುರೇಶ್- ೧೦೯೪, ನೋಟ- ೧೫೪೬.
  ಜಿಲ್ಲಾ ಚುನಾವಣಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರು ಚುನಾವಣಾ ಫಲಿತಾಂಶವನ್ನು ಘೋಷಿಸಿ, ವಿಜೇತ ಅಭ್ಯರ್ಥಿ ಬಿಜೆಪಿಯ ಸಂಗಣ್ಣ ಕರಡಿ ಅವರಿಗೆ ಪ್ರಮಾಣಪತ್ರ ವಿತರಣೆ ಮಾಡಿದರು.

Please follow and like us:
error