You are here
Home > Koppal News > ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ದ್ಯೇಯ- ಕೆ. ರಾಘವೇಂದ್ರ ಹಿಟ್ನಾಳ

ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ದ್ಯೇಯ- ಕೆ. ರಾಘವೇಂದ್ರ ಹಿಟ್ನಾಳ

ಕೊಪ್ಪಳ ಮೇ ೨೫: ಕ್ಷೇತ್ರದ ಬೆಟಗೇರಿ ಗ್ರಾಮದಲ್ಲಿ ಏರ್ಪಡಿಸಿದ ಅಭಿನಂದನಾ ಸಮಾರಂಭದಲ್ಲಿ ಕೊಪ್ಪಳದ ನೂತನ ಶಾಸಕರಾದ ರಾಘವೆಂದ್ರ ಹಿಟ್ನಾಳ ಸನ್ಮಾನ ಸ್ವೀಕರಿಸಿ ಮಾತನಾಡಿ ಸನ್ಮಾನಗಳು ನನ್ನ ನ್ಯತಿಕ ಜವಾಬ್ದಾರಿಯನ್ನು ಹೆಚ್ಚಿಸಿವೆ. ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳಾದ ಶುದ್ದ ಕುಡಿಯುವ ನೀರು. ಆರೋಗ್ಯ ಶಿಕ್ಷಣ, ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ತ್ವರಿತಗತಿಯಲ್ಲಿ  ಅಭಿವೃದ್ಧಿ ಪಡಿಸಿ ಕ್ಷೇತ್ರದ ಸರ್ವಾಗೀಣ ಅಭಿವೃದ್ದಿಗೆ ಹಗಲಿರುಳು ಶ್ರಮಿಸುವೆನು. ಅಬಿವೃದ್ಧಿ ಕಾರ್ಯದಲ್ಲಿ ಎಲ್ಲರೂ ಪಕ್ಷಬೇದ ಮರೆತು ಕೈಜೋಡಿಸಬೆಕು. ಸರ್ಕಾರದ  ಎಲ್ಲಾ ಸವಲತ್ತುಗಳನ್ನು ಆಯಾ ವರ್ಗದ ಅನುಗುಣವಾಗಿ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ. ಅತ್ಯಂತ ಅಧಿಕ ಮತದಿಂದ ನನ್ನನ್ನು ಚುನಾಯಿಸಿ ಶಾಸಕನಾಗಿ ಮಾಡಿದ ಕ್ಷೇತ್ರದ ಜನತೆಗೆ ನಾನು ಚಿರಋಣಿಯಾಗಿದ್ದು ಅಮಾಯಕರನ್ನು ಹಾಗು ರೈತರನ್ನು ವಂಚಿಸುವ ಯಾವುದೇ ಅಧಿಕಾರಿಗಳನ್ನು ನಾನು ಕ್ಷಮಿಸುವುದಿಲ್ಲವೆಂದು ಹೇಳಿದರು. 
ಈ ಸಂದರ್ಭದಲ್ಲಿ ಪ್ರಸನ್ನ ಗಡಾದ, ಯಂಕನಗೌಡರ ಕಾತರಕಿ, ಅಮಜ್ಜದ್ ಪಟೇಲ್, ಮಲ್ಲಪ್ಪ ಕವಲೂರ, ಅಮರೇಶ ಉಪಲಾಪೂರ, ಶೇಖಣ್ಣ ಲಚ್ಚಾಣಿ, ನಾರಾಯಣಪ್ಪ ಬಿನ್ನಾಳ, ಭರಮಪ್ಪ ಹಟ್ಟಿ, ಗೋಣೆಶಪ್ಪ ಅಳವಂಡಿ, ಅಂದಾನಸ್ವಾಮಿ ಬೆಟಗೆರಿ, ಗುರುಬಸವರಾಜ ಅಳವಂಡಿ, ಬೆಟಗೇರಿ ಗ್ರಾಮ ಪಮಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಗ್ರಾಮದ ಗುರು ಹಿರಿಯರು ಕಾಂಗ್ರೆಸ ಕಾರ್ಯಕರ್ತರು ಈ ಸಂದರ್ಬದಲ್ಲಿ ಪಾಲ್ಗೊಂಡಿದ್ದರೆಂದು ಪಕ್ಷದ ವಕ್ತಾರ ಅಕ್ಬರ್ ಪಾಷಾ ಪಲ್ಟನ್ ತಿಳಿಸಿದ್ದಾರೆ. 

Leave a Reply

Top