ಶಿಕ್ಷಣ ಹಕ್ಕು ಕಾಯಿದೆ : ಆನ್‌ಲೈನ್‌ನಲ್ಲಿ ಶಾಲೆಗಳ ಪಟ್ಟಿ ಪ್ರಕಟ

ಕೊಪ್ಪಳ   ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ೨೦೦೯ ರನ್ವಯ ಕೊಪ್ಪಳ ಜಿಲ್ಲೆಗೆ ಸಂಬಂಧಪಟ್ಟ ನೆರೆಹೊರೆ ಪ್ರದೇಶಗಳ ವ್ಯಾಪ್ತಿಯಲ್ಲಿ ಗುರುತಿಸಲಾಗಿರುವ ಜನವಸತಿ ಪ್ರದೇಶಗಳವಾರು ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳ ಪಟ್ಟಿಯನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಲಾಗಿದೆ.
ತಾಲ್ಲೂಕಾವಾರು ಸೀಟುಗಳು ಗಂಗಾವತಿ-೯೭೮, ಕುಷ್ಟಗಿ-೩೨೩, ಯಲಬುರ್ಗಾ-೩೮೫, ಕೊಪ್ಪಳ-೭೯೫ ಇರುತ್ತವೆ. ಜಿಲ್ಲೆಯಲ್ಲಿ ಒಟ್ಟು ೨೪೮೧ ಸೀಟುಗಳು ಆರ್‌ಟಿಈ ಅಡಿಯಲ್ಲಿ ದಾಖಲಾತಿಗೆ ಲಭ್ಯವಿರುತ್ತವೆ. ಹೆಚ್ಚಿನ ಮಾಹಿತಿಯನ್ನು ವೆಬ್‌ಸೈಟ್  www.koppal.nic.in  ನಲ್ಲಿ ಸಾರ್ವಜನಿಕ ಪ್ರಕಟಣೆಯನ್ನು ಪ್ರಕಟಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಡಳಿತ ವಿಭಾಗದ ಉಪನಿರ್ದೇಶಕರು ತಿಳಿಸಿದ್ದಾರೆ.
Please follow and like us:
error