You are here
Home > Koppal News > ಈಶ್ವರ ಹತ್ತಿಯವರ ಕೃತಿಗಳಲ್ಲಿ ಸಾಮಾಜಿಕ ಕಳಕಳಿ ಇದೆ- ಅಲ್ಲಮಪ್ರಭು ಬೆಟ್ಟದೂರ.

ಈಶ್ವರ ಹತ್ತಿಯವರ ಕೃತಿಗಳಲ್ಲಿ ಸಾಮಾಜಿಕ ಕಳಕಳಿ ಇದೆ- ಅಲ್ಲಮಪ್ರಭು ಬೆಟ್ಟದೂರ.

ಕೊಪ್ಪಳ : ಕವಿ, ಲೇಖಕ, ನಾಟಕಕಾರ, ಆಧನಿಕ ವಚನಕಾರ, ಸಾಹಿತಿ ಈಶ್ವರ ಹತ್ತಿಯವರ ಕೃತಿಗಳಲ್ಲಿ ಸಾಮಾಜಿಕ ಕಳಕಳಿ ಇದೆ. ಸಮ್ಮೇಳನದ ಅಧ್ಯಕ್ಷರಾದ ಇವರ ಕೃತಿಗಳ ಬಗ್ಗೆ ಒಂದು ವಿಚಾರ ಗೋಷ್ಠಿ ನಡೆಸಿರುವುದು ಪ್ರಶಂಸನೀಯ. ವಿದ್ವಾಂಸರ ವಿಚಾರಗಳನ್ನು ತಿಳಿದು ಕೃತಿಕಾರರಿಗೆ  ಮೌಲ್ಯಮಾಪನ ಮಾಡಿಕೊಳ್ಳಲು ಅನುಕೂಲವಾಯಿತು ಎಂದು ಕೊಪ್ಪಳದ ಹಿರಿಯ ಬಂಡಾಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರ ಹೇಳಿದರು.
    ಅವರು ಕೊಪ್ಪಳ ತಾಲೂಕಿನ ಭಾಗ್ಯನಗರದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಕೊಪ್ಪಳ ಜಿಲ್ಲಾ ೬ ನೇ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ಕೃತಿಗಳ ಕುರಿತು ಹಮ್ಮಿಕೊಂಡ ವಿಚಾರ ಸಂಕಿರಣ  ಸಮಾರಂಭದ ಅಧ್ಯಕ್ಷತೆ ವಹಸಿ ಮಾತನಾಡಿದರು.
    ಅವರು ಮುಂದುವರೆದು ಮಾತನಾಡುತ್ತಾ, ಕರ್ನಾಟಕದಲ್ಲಿ ದಿನಾಲೂ ರೈತರು ಆತ್ಮಹತ್ಯೆಗೆ ಈಡಾಗುತ್ತಿರುವುದು ದುರಂತದ ಸಂಗತಿ. ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರಗಳು ರೈತರ ಉತ್ಪನ್ನಗಳಿಗೆ ವೈಜ್ಞಾನಿಕ  ದರ ನಿಗದಿ ಮಾಡಬೇಕು. ರೈತರಿಗೆ ರಾಷ್ಟ್ರೀಕೃತ ಬ್ಯಾಂಕು ಹಾಗೂ ಸೊಸೈಟಿಗಳಲ್ಲಿ  ಕಡಿಮೆ ಬಡ್ಡಿ ದರಗಳಲ್ಲಿ ಸಾಲ ನೀಡಬೇಕು. ರೈತರಿಗೆ ಬೀಜ, ರಸಗೊಬ್ಬರ, ಔಷಧಿ ಹಾಗೂ ಒಕ್ಕಲುತನಕ್ಕೆ ಅವಶ್ಯವಿರುವ ಉಪಕರಣಗಳನ್ನು ರಿಯಾಯಿತಿ ದರಗಳಲ್ಲಿ ನೀಡಬೇಕೆಂದು ಒತ್ತಾಯಿಸಿದರು.
    ಸಮ್ಮೇಳನಾಧ್ಯಕ್ಷರಾದ ಈಶ್ವರ ಹತ್ತಿ, ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ, ಬೀದರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚನ್ನಪ್ಪ ಸಂಗೊಳಗಿ, ರಾಯಚೂರು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬೀರಪ್ಪ ಶಂಬೋಜಿ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಸವರಾಜ ಆಕಳವಾಡಿ, ಕದಳಿ ವೇದಿಕೆಯ ಜಿಲ್ಲಾಧ್ಯಕ್ಷರಾದ ನಿರ್ಮಲಾ ವಿಶ್ವನಾಥ ಬಳ್ಳೊಳ್ಳಿ, ಕೇಂದ್ರ ಚು.ಸಾ.ಪ.ದ ಪ್ರಧಾನ ಸಂಚಾಲಕರಾದ ಡಾ. ಎಮ್.ಜಿ.ಆರ್. ಅರಸ್,  ಕೌಸ್ತುಭ ಪತ್ರಿಕೆಯ ಸಂಪಾದಕರಾದ ರತ್ನಾ ಹಾಲಪ್ಪಗೌಡ, ವೈದರಾದ ಡಾ. ಕೆ.ಜಿ. ಕುಲಕರ್ಣಿ, ಸರಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಬೀರಪ್ಪ ಅಂಡಗಿ ಚಿಲವಾಡಗಿ, ಹಿರಿಯರಾದ ದತ್ತಾತ್ರೇಯ ಆರ್ ಸಾಗರ ವೇದಿಕೆ ಮೇಲೆ ಉಪಸ್ಥಿತರಿದ್ದರು.
    ಈಶ್ವರ ಹತ್ತಿಯವರ ‘ಮಹಾದಾಸೋಹಿ ಶರಣಬಸವೇಶ ಕಾವ್ಯಂ’ ಕುರಿತು ಎ.ಈ ಮುನಿರಾಜು, ‘ಗುನ್ನಾಳೇಶನ ವಚನಗಳು’ ಕುರಿತು  ಡಾ. ಶರಣಬಸಪ್ಪ ಕೋಲ್ಕಾರ, ‘ಅಪೂರ್ಣ’ ನಾಟಕ ಕುರಿತು ಡಾ. ಹನುಮಾಕ್ಷೀ ಗೋಗಿ, ‘ಕವೀಶ್ವರನ ತ್ರಿದಳಗಳು’ ಕುರಿತು ಡಾ. ಜಾಜಿ. ದೇವೇಂದ್ರಪ್ಪ, ‘ಕೊಪಣಾಚಲದ ಶ್ರೀ ಗವಿಸಿದ್ದೇಶ್ವರ’  ನಾಟಕ ಕುರಿತು ಎ.ಎಂ. ಮದರಿ, ‘ಅಳ್ಳೊಳ್ಳಿ ಬಂತು ಕಳ್ಳೊಳ್ಳಿ’ ಕುರಿತು ಮಂಜುನಾಥ ಡೊಳ್ಳಿನ, ‘ದೇವಿ ಹಾಗೂ ಇತರೆ ಕಥೆಗಳು’ ಕುರಿತು  ಡಾ. ಮಮ್ತಾeಬೇಗಂ ವಿಷಯ ಮಂಡನೆ ಮಾಡಿದರು.
    ಅಕ್ಷತಾ ಬಣ್ಣದಬಾವಿ ಪ್ರಾರ್ಥಿಸಿದರು. ವಿಜಯಲಕ್ಷ್ಮೀ ಕೊಟಗಿ ನಿರೂಪಿಸಿದರು. ಸುರೇಶ ಕಂಬಳಿ ಸ್ವಾಗತಿಸಿದರು. ಮಾರುತೇಶ ಹಟ್ಟಿ ವಂದಿಸಿದರು.

Leave a Reply

Top