You are here
Home > Koppal News > ಲಿಂ. ಡಾ|| ಪಂ.ಪುಟ್ಟರಾಜ ಗವಾಯಿಗಳವರ ಪುಣ್ಯಸ್ಮ,ರಣೊತ್ಸವ ನಿಮಿತ್ಯ ಸಂಗೀತ ಸಂಜೆ ಸಾಂಸ್ಕೃತಿಕ ಹಾಗು ಧಾರ್ಮಿಕ ಕಾರ್ಯಕ್ರಮ.

ಲಿಂ. ಡಾ|| ಪಂ.ಪುಟ್ಟರಾಜ ಗವಾಯಿಗಳವರ ಪುಣ್ಯಸ್ಮ,ರಣೊತ್ಸವ ನಿಮಿತ್ಯ ಸಂಗೀತ ಸಂಜೆ ಸಾಂಸ್ಕೃತಿಕ ಹಾಗು ಧಾರ್ಮಿಕ ಕಾರ್ಯಕ್ರಮ.

ಕೊಪ್ಪಳ: ದಿನಾಂಕ ೨೭/೦೪/೨೦೧೫ರಂದು ಸೋಮವಾರ ನಗರದ ಶ್ರೀ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಲಿಂ. ಡಾ|| ಪಂ.ಪುಟ್ಟರಾಜ ಗವಾಯಿಗಳವರ ಪುಣ್ಯಸ್ಮ,ರಣೊತ್ಸವ ನಿಮಿತ್ಯ ಡಾ|| ಪಂ.ಪುಟ್ಟರಾಜ ಹರಿಕಥಾ ಸಾಂಸ್ಕೃತಿಕ ಕಲಾ ಸಂಘ ಹಿರೇಬಗನಾಳ ಇದರ ೮ನೇ ವರ್ಷದ ವಾರ್ಷಿಕೊತ್ಸವದ ಅಂಗವಾಗಿ ಮತ್ತು ಶ್ರೀ ಲಿಂ. ಪೂಜ್ಯ ಶ್ರೀ ಗವಿಸಿದೇಶ್ವರ ಮಹಾಸ್ವಾಮಿಗಳು ಜಾಹಗೀರ ಗವಿಮಠ ಹಿರೇಬಗನಾಳ ಇವರ ೩ನೇ ವರ್ಷದ ಪುಣ್ಯಸ್ಮರಣೋತ್ಸವ ಹಾಗೂ ಧಾರ್ಮಿಕ ಸಭೆ ನಿಮಿತ್ಯ ಆಕಾಶವಾಣಿ, ದೂರದರ್ಶನ ಕಲಾವಿದರಾದ ಪಂ.ರವೀಂದ್ರ ಸೊರಗಾಂವಿಯವರ ವಚನಗಾಯನ, ಪಂ.ವೆಂಕಟೇಶ ಆಲ್ಕೊಡ ಇವರಿಂದ ದಾಸವಾಣಿ ಜುಗಲ್ ಬಂಧಿ, ದೊಡ್ಡಬಸವ ಕಗ್ಗಲ್ ಬಳ್ಳಾರಿ ಸೋದರ ಗಾಯನ, ಮಾಂತಯ್ಯ ಶಾಸ್ತ್ರೀಗಳ ಸುಗಮ ಸಂಗೀತ ಮತ್ತು ಇನ್ನೂ ಮುಂತಾದ ಕಲಾವಿದರಿಂದ ಸಂಜೆ ೦೪:೦೦ಗಂಟೆಯಿಂದ ಸಂಗೀತ ಕಾರ್ಯಕ್ರಮ, ೦೫:೩೦ ರಿಂದ ಧಾರ್ಮಿಕ ಸಭೆ, ನಂತರ ಸಂಗೀತ ಕಾರ್ಯಕ್ರಮ ಅಘೋರಾತ್ರಿಯವರೆಗೆ ನಡೆಯಲಿದೆ. ಈ ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ.ಮ.ನಿ.ಪ್ರ.ಸ್ವ. ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಗವಿಮಠ ವಹಿಸುವರು, ಹಾಗೂ ಅಧ್ಯಕ್ಷತೆಯನ್ನು ಡಾ|| ಕೆ.ಜಿ. ಕುಲಕರ್ಣಿ ಉದ್ಘಾಟಕರಾಗಿ ಹಾಗೂ ಶ್ರೀನಿವಾಸ ಗುತ್ತಾಲ ರಾಷ್ಟ್ರ ಪ್ರಶಸ್ತಿ ವಿಜೇತರು ಭಾಗ್ಯನಗರ ಆಗಮಿಸುವರು, ಮತ್ತು ವಿಶೇಷ ಆಹ್ವಾನಿತರಾಗಿ ಶ್ರೀ ಮಹೇಶಪ್ಪ ವಿ.ಹಳ್ಳಿ ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷರು ಯಲಬುರ್ಗಾ, ಶ್ರೀ ಹೆಚ್.ಎಮ್.ಚಿಕ್ಕರೆಡ್ಡಿ ಡಿ.ವೈ.ಎಸ್.ಪಿ. ಲೋಕಾಯುಕ್ತ ಕೊಪ್ಪಳ, ಶ್ರೀ ಬಿ.ಜಿ.ಹಿರೇಮಠ ಕಾರ್ಯದರ್ಶಿಗಳು ಕೃ.ಉ.ಮಾ.ಸಮಿತಿ ಕೊಪ್ಪಳ, ಶ್ರೀ ಶಂಬುಲಿಂಗನಗೌಡ್ರು ಕೊಪ್ಪಳ, ಕೆ.ಎಫ್. ಮುದ್ದಾಬಳ್ಳಿ ಸಂಪಾದಕರು ಬಿಸಿಲು ಗುದುರೆ ಪಾಕ್ಷಿಕ ಪತ್ರಿಕೆ ಗಂಗಾವತಿ, ಬಿ.ನಾಗರಾಜ ಸಹಾಯಕ ನಿರ್ದೇಶಕರು ಕ.ಸಂ.ಇಲಾಖೆ ಕೊಪ್ಪಳ, ಸರ್ವರಿಗೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ೯೯೧೬೦೪೧೯೨೯

Leave a Reply

Top