fbpx

ದೆಹಲಿ ಗಣರಾಜ್ಯೋತ್ಸವ ಫರೇಡ್‌ಗೆ ಆಯ್ಕೆ:

 ಶ್ರೀ ಗವಿಸಿದ್ಧೇಶ್ವರ ಮಹವಿದ್ಯಾಲಯದ ಎನ್.ಸಿ.ಸಿ ಕ್ಯಾಡೆಟ್ ಆದ ಕುಮಾರ್ ರಾಠೋಡ್ ದೆಹಲಿಯ ವರ್ಣರಂಜಿನ ೬೬ನೇ ಗಣರಾಜ್ಯೋತ್ಸವ ಪರೇಡಿಗೆ ಆಯ್ಕೆ

ಯಾಗಿರುವದು ಹೆಮ್ಮೆಯ ವಿಷಯ.

ಕೊಪ್ಪಳ ಸಮೀಪದ ಕುಣಿಕೇರಿ ತಾಂಡಾದವನಾದ ಕುಮಾರ್ ರಾಠೋಡ್ ಹಲವಾರು ರಾಜ್ಯ ಮತ್ತು ರಾಷ್ಟ್ರಮಟ್ಟದ ವಿವಿಧ ಶಿಬಿರಗಳಲ್ಲಿ ಭಾಗವಹಿಸಿ ವಿವಿಧ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾನೆ. ಅತ್ಯಂತ ಹಿಂದುಳಿದ ಕುಟುಂಬದಿಂದ ಬಂದು ಗಣನೀಯ ಸಾಧನೆಗೈದಿರುವದು ಹೆಮ್ಮೆಯ ಸಂಗತಿಯಾಗಿದೆ.
ಬಳ್ಳಾರಿಯ ೩೪ನೇ ಕರ್ನಾಟಕ ಎನ್.ಸಿ.ಸಿ ಬಟಾಲಿಯನ್‌ದಿಂದ ಆಯ್ಕೆಯಾದ ನಮ್ಮ ಮಹವಿದ್ಯಾಲಯದ ಏಕೈಕ ಎನ್.ಸಿ.ಸಿ ಕ್ಯಾಡೆಟ್ ಎನ್ನುವುದು ವಿಶೇಷ. ಈ ಮಹತ್ಸಾಧನೆಗೆ ಮಹಾವಿದ್ಯಾಲಯದ ಪ್ರಾಚಾರ್ಯರು ಎಸ್ ಎಲ್ ಮಾಲಿಪಾಟೀಲ ಎನ್.ಸಿ.ಸಿ ಅಧಿಕಾರಿ ಡಾ ದಯಾನಂದ ಸಾಳಂಕಿ ಸಿಬ್ಬಂದಿಗಳು ಹಾಗೂ ಎಲ್ಲ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. 
Please follow and like us:
error

Leave a Reply

error: Content is protected !!