ಶಾಲಾ ಕೊಠಡಿಗಳು ಉದ್ಘಾಟನಾ ಸಮಾರಂಭ

ಕೊಪ್ಪಳ : ದಿನಾಂಕ ೦೫  ರಂದು ಸರಕಾರಿ ಹಿರಿಯ ಪ್ರತಮಿಕ ಶಾಲೆ ಮಾದಿನೂರಿನಲ್ಲಿ ಹೆಚ್ಚುವರಿ ಎರಡು ಶಾಲಾ ಕೊಠಡಿಗಳನ್ನು  ಶ್ರೀಮತಿ ರೇಣುಕಾ ಮುದ್ದಾಬಳ್ಳಿ ಮಾದಿನೂರ ಗ್ರಾ, ಪಂ. ಅಧ್ಯಕ್ಷರ ಅಧ್ಯಕ್ಷತೆಯಲ್ಲಿ, ನೆರವೇರಿಸಲಾಯಿತು. ಕೊಪ್ಪಳ ಶಾಸಕರಾದ ಸಂಗಣ್ಣ ಕರಡಿ ದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ  ಶ್ರೀಮತಿ ವನಿತಾ ಗಣದ ಜಿಂ. ಪಂ ಸದಸ್ಯರು ಲೇಬಗೇರ, ಅಮರೇಶ ಉಪಲಾಪುರ ತಾ. ಪಂ. ಸದಸ್ಯರು ಕಿನ್ನಾಳ, ಡಿ ಮಲ್ಲಣ್ಣ ಎ.ಪಿ.ಎಂ.ಸಿ ಸದಸ್ಯರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರು, ಹಗೂ ಉಪಾಧ್ಯಕ್ಷರು ಹಾಗೂ ಸದಸ್ಯರು, ಮಾದಿನೂರು. ಗ್ರಾ. ಪಂ. ಸದಸ್ಯರ ಗ್ರಾ. ಪಂ. ಊರಿನ ಗಣ್ಯರು ಹಾಗೂ ವಿವಿಧ ಸಂಘದ ಸದಸ್ಯರು ಉಪಸ್ಥಿತರಿದ್ದರು ಪ್ರಾಸ್ತಾವಿಕವಾಗಿ ನಾರಾಯಣಪ್ಪ ಚಿತ್ರಗಾರ ಮಾತನಾಡಿದರು. ಬಸಪ್ಪ ದೇಸಾಯಿ ಮುಖ್ಯಗುರುಗಳು ಕಾರ್ಯಕ್ರಮ ನಿರೂಪಣೆ ಹಾಗೂ ಸ್ವಾಗತ ಗೈದರು. ಶ್ರೀಮತಿ ನಾಗರತ್ನ ಸ. ಶಿ. ವಂದನಾರ್ಪಣೆ ಮಾಡಿದರು. 
ಶಾಸಕರ ಹಿತನುಡಿ : ಶೀಥೀಲಗೊಂಡ ಕಟ್ಟಡಗಳನ್ನು ತೆಗೆದು ಇನ್ನು  ಹೆಚ್ಚಿನ ಕೊಠಡಿಗಳನ್ನು ನಿರ್ಮಿಸಲು ಭರವಸೆ ನೀಡಿದರು. 

Please follow and like us:
error