ಯಶಸ್ವಿ ೮೫ನೇ ಕವಿಸಮಯ : ಬಹುಮಾನ ವಿತರಣೆ

ಕೊಪ್ಪಳ :ಕನ್ನಡನೆಟ್.ಕಾಂ ಕವಿಸಮೂಹ ತನ್ನ ೮೫ನೇ ಕವಿಸಮಯ ಕಾರ್‍ಯಕ್ರಮವನ್ನು ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಪ್ರಬಂಧ ಮತ್ತು ಕಾವ್ಯ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ನಂತರ ನಡೆದ ಕವಿಗೋಷ್ಠಿಯಲ್ಲಿ ಕುರುವತ್ತಿಗೌಡ್ರ- ವಚನ,ಗೊರಕೆ, ಡಾ.ಬಸವರಾಜ -ಪುಟದೊಳಗಿಂದ, ಶಾಂತಾದೇವಿ ಹಿರೇಮಠ- ಹೆಣ್ಣು ಗಂಡು ಚುಟುಕು, ವಿಠ್ಠಪ್ಪ ಗೋರಂಟ್ಲಿ- ಆಜಪೇಯ-ವಾಜಪೇಯ, ವಿ.ಬಿ.ರಡ್ಡೇರ್- ಬೆರೆಸೋಣ ಬಾ ಕವನಗಳನ್ನು ವಾಚನ ಮಾಡಿದರು. ಡಾ.ಮಹಾಂತೇಶ ಮಲ್ಲನಗೌಡರ ಹುಬ್ಬಳ್ಳಿಯಾಂವಾ ಭಾವಗೀತೆಯನ್ನು , ಡಾ.ವಿ.ಬಿ.ರಡ್ಡೇರ್- ಬೆರೆಸೋಣ ಬಾ ಹಾಗೂ ಶಾಂತಾದೇವಿ ಹಿರೇಮಠರು ಅಕ್ಕiಹಾದೇವಿಯ ವಚನವನ್ನು ಹಾಡಿದರು.
ಕಾರ್‍ಯಕ್ರಮದಲ್ಲಿ ಬಸವರಾಜ ಶೀಲವಂತರ, ಶಿವಾನಂದ ಹೊದ್ಲೂರ, ಇಬ್ರಾಹಿಂ ಬಿನ್ನಾಳ, ಮುನೀರ್ ಸಿದ್ದೀಕಿ ಸೇರಿದಂತೆ ಇತರರು ಉಪಸ್ಥಿತರರಿದ್ದರು. ಕಾರ್‍ಯಕ್ರಮವನ್ನು ಸಿರಾಜ್ ಬಿಸರಳ್ಳಿ ನಡೆಸಿಕೊಟ್ಟರು. 
Please follow and like us:
error