ಇಲಿಯಾಗಿ ಬದುಕುವುದಕ್ಕಿಂತ ಹುಲಿಯಾಗಿ ಬಾಳಬೇಕು-ರೇಣುಕಾ ಅತ್ತನೂರ

ಕೊಪ್ಪಳ : ಟಿಪ್ಪು ಸುಲ್ತಾನ ತನ್ನ ಜೀವಿತಾವಧಿಯವರೆಗೆ ಹುಲಿಯಾಗಿ ಬದುಕಿದಂತಹ ವ್ಯಕ್ತಿ, ಅಂತವರ ಗುಣಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದಾಸ್ಯದಿಂದ ನೂರು ವರ್ಷ ಇಲಿಯಾಗಿ ಬಾಳುವುದಕ್ಕಿಂತ ಒಂದು ದಿನ ಹುಲಿಯಾಗಿ ಬದುಕುವುದು ಲೇಸು ಎಂದು ಸರಸ್ವತಿ ವಿದ್ಯಾಮಂದಿರದ ಮುಖ್ಯೋಪಾಧ್ಯಾಯನಿ ಶ್ರೀಮತಿ ರೇಣುಕಾ ಅತ್ತನೂರ ಹೇಳಿದರು. ಅವರು ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ನಡೆದ ಟಿಪ್ಪುಸುಲ್ತಾನರ ಜಯಂತಿ ಕಾರ‍್ಯಕ್ರಮದಲ್ಲಿ ಮಾತನಾಡಿದರು.
ಟಿಪ್ಪು ಸುಲ್ತಾನ್‌ರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಕಾರ‍್ಯಕ್ರಮ ಚಾಲನೆ ನೀಡಿದ ಕೊಪ್ಪಳ ಪೂರ್ವವಲಯದ ಸಿಆರ್‌ಪಿ ಶ್ರೀಮತಿ ಪೂರ್ಣಿಮಾ -ವೀರ ಯೋಧ ಟಿಪ್ಪುಸುಲ್ತಾನ್ ಜಯಂತಿಯನ್ನು ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ಅವರ ಸಾಧನೆಗಳ ಕುರಿತಗಾಗಿ ಕಾರ‍್ಯಕ್ರಮಗಳನ್ನು ಪ್ರತಿಶಾಲೆಯಲ್ಲಿ ಆಚರಣೆ ಮಾಡುವುದರಿಂದ ಮಕ್ಕಳಲ್ಲಿ ಸ್ಪೂರ್ತಿ, ಆತ್ಮವಿಶ್ವಾಸ ಬೆಳೆಯುತ್ತದೆ ಎಂದು ಹೇಳಿದರು.  ಇನ್ನೊರ್ವ ಅತಿಥಿ ಮೈಲಪ್ಪ ಬಿಸರಳ್ಳಿ ಮಾತನಾಡಿ ಟಿಪ್ಪು ಸುಲ್ತಾನ್ ರ ಆದರ್ಶಗಳನ್ನು ವಿದ್ಯಾರ್ಥಿಗಲು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯಶಸ್ಸು ಕಾಣಬೇಕು ಎಂದು ಹಾರೈಸಿದರು. ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ‍್ಯದರ್ಶಿ ಆರ್.ಎಚ್.ಅತ್ತನೂರು ವಹಿಸಿ ಮಾತನಾಡಿದರು. 
ಕಾರ‍್ಯಕ್ರಮದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಟಿಪ್ಪು ಸುಲ್ತಾನ್ ರ ಜೀವನ ಸಾಧನೆ ಕುರಿತು ಮಾತನಾಡಿದರು. ಕಾರ‍್ಯಕ್ರಮದಲ್ಲಿ ಮಕ್ಕಳು, ಶಿಕ್ಷಕರು ಹಾಗೂ ಪಾಲಕರು ಪಾಲ್ಗೊಂಡಿದ್ದರು. ಕಾರ‍್ಯಕ್ರಮದ ಸ್ವಾಗತ ಮತ್ತು ನಿರೂಪಣೆಯನ್ನು ಶಿಕ್ಷಕಿ ಶಿವಲೀಲಾ ಹಾಗೂ ಕು.ನೇತ್ರಾ ವಂದನಾರ್ಪಣೆ ಮಾಡಿದರು. 

Leave a Reply