You are here
Home > Koppal News > ಮೈಸೂರು ಸಿಲ್ಕ್ ಮಾರಾಟ ಮೇಳ : ಜು. ೨೨ ರವರೆಗೆ ವಿಸ್ತರಣೆ

ಮೈಸೂರು ಸಿಲ್ಕ್ ಮಾರಾಟ ಮೇಳ : ಜು. ೨೨ ರವರೆಗೆ ವಿಸ್ತರಣೆ

 ಗಂಗಾವತಿಯ ಸರೋಜಮ್ಮ ಕಲ್ಯಾಣಮಂಟಪದಲ್ಲಿ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ವತಿಯಿಂದ ಆಯೋಜಿಸಲಾಗಿರುವ ಮೈಸೂರು ಸಿಲ್ಕ್ ಸೀರೆಗಳ ಮಾರಾಟ ಮೇಳವನ್ನು ಜು. ೨೨ ರವರೆಗೆ ವಿಸ್ತರಿಸಲಾಗಿದೆ.
  ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಗಂಗಾವತಿಯಲ್ಲಿ ಜು. ೧೯ ರಿಂದ ೨೧ ರವರೆಗೆ ಆಯೋಜಿಸಲು ನಿಗಮವು ನಿರ್ಧರಿಸಿತ್ತು.  ಆದರೆ ಜು. ೨೨ ರಂದು ಭಾನುವಾರದ ದಿವಸವಾಗಿರುವುದರಿಂದ, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ಸರ್ಕಾರಿ ನೌಕರರು ಮೇಳದಲ್ಲಿ ಭಾಗವಹಿಸಲು ಸಾಧ್ಯವಾಗಲಿದ್ದು, ಈ ಹಿನ್ನೆಲೆಯಲ್ಲಿ ಮಾರಾಟ ಮೇಳವನ್ನು ಜು. ೨೨ ರವರೆಗೆ ವಿಸ್ತರಿಸಲಾಗಿದೆ ಎಂದು ನಿಗಮದ ಮಾರಾಟ ವ್ಯವಸ್ಥಾಪಕ ಎಸ್. ಫಿಲೋಮೆನ್ ರಾಜ್ ಅವರು ತಿಳಿಸಿದ್ದಾರೆ.

Leave a Reply

Top