ಕೊಪ್ಪಳ ಜಿಲ್ಲಾ ಚಿತ್ರಕಲಾ ಶಿಕ್ಷಕರಿಗೆ ಸಿ.ಸಿ.ಇ ತರಬೇತಿ

  ದಿನಾಂಕ ೨೭-೧೧-೨೦೧೪ ರಂದು ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ  ಚಿತ್ರಕಲಾ ಶಿಕ್ಷಕರಿಗೆ ಸಿ.ಸಿ.ಇ ತರಬೇತಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮ ದ ಉದ್ಘಾಟನೆಯನ್ನು ಕಲಬುರ್ಗಿಯ ಆಯುಕ್ತರ ಕಛೇರಿ ಹಿರಿಯ ಚಿತ್ರಕಲಾ ಪರಿವೀಕ್ಷಕರಾದ ಟಿ. ದೇವೆಂದ್ರಪ್ಪ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಚಾರ್ಯರಾದ ಎಸ್.ಬಿ. ರಾಜೂರ ಮಾತನಾಡಿ, ರಾಜ್ಯದ ಪ್ರೌಢ ಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರ ಪಾತ್ರ ಮತ್ತು ಅವಶ್ಯಕತೆ, ಚಿತ್ರಕಲೆ, ಕಲಾವಿದರಬಗ್ಗೆ ಮತ್ತು ಮಕ್ಕಳ ಶೈಕ್ಷಣಿಕ ಅಭಿವೃದ್ದಿಯಲ್ಲಿ ಚಿತ್ರಕಲೆಯ ಪಾತ್ರದ ಬಗ್ಗೆ ವಿವರವಾಗಿ ಚಿತ್ರಕಲಾ ಶಿಕ್ಷಕರಿಗೆ ತಿಳಿಸಿದರು. ಮತ್ತೋರ್ವ ಅತಿಥಿ ಕೊಪ್ಪಳದ ಬಾಲಕರ ಪ. ಪೂ. ಕಾಲೇಜು ಉಪಪ್ರಾಚಾರ್ಯ ಎ.ಕೆ. ತುಪ್ಪದ ಮಾತನಾಡಿ, ಮಕ್ಕಳು ಚಿತ್ರಕಲೆಯಬಗ್ಗೆ ಇರುವ ಕುತೋಹಲ ವಿವರಿಸುತ್ತಾ  ತಮ್ಮ ಬಾಲ್ಯದಲ್ಲಿ ಚಿತ್ರಕಲೆಯ ಮತ್ತು ಚುಕ್ಕೆ ಚಿತ್ರದಬಗ್ಗೆ ಅವರಿಗಿದ್ದ ಆಸಕ್ತಿಯನ್ನು ಎಳೆ ಎಳೆಯಾಗಿ ವಿವರಿಸಿದರು. 
ಈ ಕಾರ್ಯಕ್ರಮದಲ್ಲಿ ಸರಕಾರಿ ನೌಕರ ಸಂಘದ ರಾಜ್ಯ ಪರಿಷತ್ ಸದಸ್ಯರಾದ ಕಾಸಿಮ್ ಸಾಬ್ ಸಂಕನೂರ, ರಾಜ್ಯ ಚಿತ್ರಕಲಾ ಸಂಘದ ನಿರ್ದೇಶಕ ಎಮ್.ಎ. ವಂದಾಲ್, ಜಿಲ್ಲಾ ಆಧ್ಯಕ್ಷ ಎಮ್.ಎಮ್. ಬಳಿಗಾg, ಜಿಲ್ಲೆಯ ಎಲ್ಲಾ ಚಿತ್ರಕಲಾ ಶಿಕ್ಷಕರು ಉಪಸ್ಥಿತರಿದ್ದರು. ಬಿರಾದರ್ ಪ್ರಾರ್ಥಿಸಿದರು. ಆರ್.ಎಲ್. ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ನಾಗರಾಜ ಸುಣಗಾರ ವಂದಿಸಿದರು ಎಂದು ಜಿಲ್ಲಾ ಕಾರ್ಯದರ್ಶಿ ಎಸ್.ಬಿ. ಕುಲಕರ್ಣಿ ಕಾರ್ಯಕ್ರಮ ನಿರ್ವಹಿಸಿದರು.

Related posts

Leave a Comment