ಸ್ತ್ರೀ-ರೋಗ, ಅತ್ಯಾಧುನಿಕ ಹೆರಿಗೆ ಆಸ್ಪತ್ರೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಆಗ್ರಹ

ಕೊಪ್ಪಳ ಜಿಲ್ಲೆಯಾಗಿ ಎರಡು ದಶಕ ಪೂರೈಸುವ ಹಂತದಲ್ಲಿದ್ದರೂ ಜಿಲ್ಲೆಯಲ್ಲಿ ಸುಸಜ್ಜಿತವಾದ ಆಸ್ಪತ್ರೆಗಳಿಲ್ಲದರಿಂದ ಸಾರ್ವಜನಿಕರು ತುಂಬಾ ತೊಂದರೆಗೊಳಗಾಗಿದ್ದಾರೆ. ಆರೋಗ್ಯ ಇಲಾಖೆಗೆ ಅನೇಕ ಬಾರಿ ಪ್ರತಿಭಟನೆ, ಹೋರಾಟ, ನಿಯೋಗಗಳ ಮೂಲಕ ಮನವಿ ಪತ್ರಗಳು ಸಲ್ಲಿಸಿದ್ದರೂ ಯಾವ ಪ್ರಯೋಜನವಾಗಿಲ್ಲ. ತಾವು ಆರೋಗ್ಯ ಇಲಾಖೆಯಲ್ಲಿ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದ್ದು,ಈಗಲಾದರೂ ಜಿಲ್ಲಾ ಕೇಂದ್ರವಾದ ಕೊಪ್ಪಳಕ್ಕೆ ಸ್ತ್ರೀ-ರೋಗ, ಅತ್ಯಾಧುನಿಕ ಹೆರಿಗೆ ಆಸ್ಪತ್ರೆ ಹಾಗೂ ನವಜಾತ ಶಿಶು ತೀವ್ರ ಆರೈಕೆಘಟಕ ಮುಂತಾದವುಗಳನ್ನು ತಕ್ಷಣ ಪ್ರಾರಂಭಿಸಲು ಕೋರುತ್ತೇವೆ.
ಸ್ತ್ರೀ-ರೋಗ ಚಿಕಿತ್ಸೆಗಾಗಿ ಮಹಿಳೆಯರು ಸರಿಯಾದ ತಜ್ಞ ವೈದ್ಯರಿಲ್ಲದ ಕಾರಣ ಪರದಾಡುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿಚಿಕಿತ್ಸೆ ಪಡೆಯಲು ದುಬಾರಿ ವೆಚ್ಚ ಭರಿಸಲು ಪರದಾಡುತ್ತಿದ್ದಾರೆ. ಮತ್ತು ಪ್ರತ್ಯೇಕವಾದ ಅತ್ಯಾಧುನಿಕ ಹೆರಿಗೆ ಆಸ್ಪತ್ರೆಯಿಲ್ಲದ್ದರಿಂದ ಬಡವರು ಪಕ್ಕದ ಜಿಲ್ಲೆಗಳ ಖಾಸಗಿ ಆಸ್ಪತ್ರೆಗಳಿಗೆ ಮೊರೆಹೋಗುತ್ತಿದ್ದಾರೆ. ಹೀಗಾಗಿ ನಮ್ಮ ಜಿಲ್ಲೆಯಲ್ಲಿ ತುಂಬಾ ಅಗತ್ಯವಾಗಿ ಅತ್ಯಾಧುನಿಕಹೆರಿಗೆ ಆಸ್ಪತ್ರೆ ಮತ್ತು ಎಲ್ಲಾ ತರಹದ ಸ್ಕ್ಯಾನಿಂಗ್ ಸೌಲಭ್ಯಗಳ ವ್ಯವಸ್ಥೆ ಮಾಡಬೇಕು.
ಈಗಾಗಲೇ ನವಜಾತ ಶಿಶು ತೀವ್ರ ಆರೈಕೆ ಘಟಕ ಇದ್ದು ಪ್ರಾರಂಭಗೊಳ್ಳದೇ ಕೋಮಾವಸ್ಥೆಯಲ್ಲಿದೆ. ಅದಕ್ಕೆ ಸಂಬಂಧಪಟ್ಟ ತಜ್ಞ ವೈದ್ಯರು ಮತ್ತು ಸಿಬ್ಬಂದಿ ವರ್ಗ, ಮೂಲ ಸೌಲಭ್ಯಗಳನ್ನು ಒದಗಿಸಿ ತಕ್ಷಣ ಪ್ರಾರಂಭಿಸಿ ಶಿಶು ಮರಣಗಳನ್ನು ತಪ್ಪಿಸಬೇಕು. ಜಿಲ್ಲಾ ಕೇಂದ್ರವಾದ ಕೊಪ್ಪಳದಲ್ಲಿ ಜಿಲ್ಲಾ ಆಸ್ಪತ್ರೆಯನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದ್ದು, ಈಗಿರುವ ಹಳೆಯ ಕಟ್ಟಡದಲ್ಲಿ ಸ್ತ್ರೀ-ರೋಗ, ಅತ್ಯಾಧುನಿಕ ಹೆರಿಗೆ ಆಸ್ಪತ್ರೆ ಹಾಗೂ ನವಜಾತ ಶಿಶು ತೀವ್ರ ಆರೈಕೆ ಘಟಕ ಮುಂತಾದವುಗಳನ್ನು ತಕ್ಷಣ ಪ್ರಾರಂಭಿಸಬೇಕು. ಸುತ್ತ-ಮುತ್ತಲಿನ ಗ್ರಾಮಸ್ಥರು, ನಗರದ ಜನರಿಗೆ ಅನುಕೂಲಕರವಾಗುತ್ತದೆ. ಕೊಪ್ಪಳ ನಗರದ ಗಡಿಯಾರ ಕಂಭದ ಹತ್ತಿರ ಇರುವ ನಗರ ಆರೋಗ್ಯ ಕೇಂದ್ರ ಮುಂದುವರೆಸಬೇಕು. ಜಿಲ್ಲಾ ಆಸ್ಪತ್ರೆಯ ಹಳೆಯ ಕಟ್ಟಡದಲ್ಲಿಯೂ ಸಹ ಎರಡನೇ ನಗರ ಆರೋಗ್ಯ ಕೇಂದ್ರ

ಪ್ರಾರಂಭಿಸಬೇಕು. ಅದಕ್ಕೆ ಬೇಕಾದ ತಜ್ಞ ವೈದ್ಯರು, ಸಿಬ್ಬಂದಿವರ್ಗ, ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು  ಾಗ್ರಹಿಸಿ ಎಐಟಿಯುಸಿ ದಿ. ೧೫ ರಂದು ಬೆಳಿಗ್ಗೆ ೧೧ ಗಂಟೆಯಿಂದ ತಹಶೀಲ ಕಾರ್ಯಾಲಯದ ಎದುರಿಗೆ ಧರಣಿ ನಡೆಸಿ ನಂತರ ತಹಶೀಲ್ದಾರ ಅನುಪಸ್ಥಿತಿಯಲ್ಲಿ ಪ್ರಭಾರಿ ತಹಶೀಲ್ದಾರ ತಿಪ್ಪಯ್ಯ ಅವರ ಮೂಲಕ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವರಾದ ಯು.ಟಿ. ಖಾದರ ಅವರಿಗೆ ಮನವಿ ಪತ್ರ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಸವರಾಜ ಶೀಲವಂತರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎ.ಗಫಾರ್, ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ರಮೇಶ ಪಿ.ಚಿಕೇನಕೊಪ್ಪ, ಲಾಚನಕೇರಿ ಗ್ರಾಮ ಘಟಕದ ಪ್ರಧಾನ ಕಾರ್ಯದರ್ಶಿ ನಾಗರಾಜ ಭೋವಿ, ಶಿವಮ್ಮ ಕಾಮನೂರ, ನಾಗರಾಜ ಗದ್ದಿಗೇರಿ, ದಲಿತ ವಿಮೋಚನೆಯ ಮಾನವ ಹಕ್ಕುಗಳ ಮೇದಿಕೆ ಜಿಲ್ಲಾ ಸಂಚಾಲಕ ಮೈಲಪ್ಪ ಎಂ. ಬಿಸರಳ್ಳಿ, ವೀರ ಕನ್ನಡಿಗ ಯುವಕ ಸಂಘದ ಅಧ್ಯಕ್ಷ ಶಿವಾನಂದ ಹೊದ್ಲೂರ, ಶಿವಪ್ಪ ಹಡಪದ, ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾ ಸಂಚಾಲಕ ನನ್ನುಸಾಬ ನೀಲಿ, ಅಖಿಲ ಭಾರತ ಯುವಜನ ಒಕ್ಕೂಟದ ಜಿಲ್ಲಾ ಸಂಚಾಲಕ ಗಾಳೇಪ್ಪ ಮುಂಗೋಲಿ, ಮಖಬೂಲ ರಾಯಚೂರ, ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟದ ತಾಲೂಕಾ ಸಂಚಾಲಕ ಗೌಸ್ ನೀಲಿ, ಮತ್ತಿತರರು ಭಾಗವಹಿಸಿದ್ದರು.
Please follow and like us:
error