ಸಾಮೂಹಿಕ ವಿವಾಹದಿಂದ ಸಮಾನತೆ – ಚಿದಾನಂದ ಸ್ವಾಮೀಜಿ.

ಸಾಮೂಹಿಕ ವಿವಾಹ ಹಮ್ಮಿಕೊಳ್ಳುವುದರಿಂದ ಗ್ರಾಮದಲ್ಲಿ ಸಮಾನತೆ ಕಂಡುಕೊಳ್ಳಬಹುದಲ್ಲದೇ ಆರ್ಥಿಕ ಹೊರೆ ಕಡಿಮೆ ಆಗುತ್ತದೆ. ಎಂದು ಹಿರೇ ಸಿಂದೋಗಿ ಕಪ್ಪತ ಮಠದ ಶ್ರೀ ಮ.ನಿ.ಪ್ರ.ಸ್ವ.ಜ. ಚಿದಾನಂದ ಮಹಾಸ್ವಾಮಿಗಳು ಹೇಳಿದರು. ಅವರು ಕೊಪ್ಪಳ ತಾಲೂಕಿನ ಕಾತರಕಿಯ ತಾಯಮ್ಮ ದೇವಿ ಭಜನಾ ಯುವಕ ಸಂಘದವರು ಏರ್ಪಡಿಸಿದ ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ದೇವಿ ಪುರಾಣ ಮಂಗಲ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡುತ್ತ ಪತಿ ಪತ್ನಿಯರಿಬ್ಬರು ಒಬ್ಬರನೊಬ್ಬರು ಅರ್ಥಮಾಡಿಕೊಂಡು ಸುಖಮಯ ಜೀವನ ನಡೆಸಿ ಆದರ್ಶ ಪ್ರಾಯರಾಗಬೇಕು ಎನ್ನುತ್ತಾ ಯುವಕ ಸಂಘವು ದೇವಿ ಪುರಾಣದ ಮೂಲಕ ಧರ್ಮ ಬೋದದ ಜ್ಞಾನವನ್ನು ನೀಡತಕ್ಕಂತ ಕಾರ್ಯವನ್ನು ತಾಯಮ್ಮ ದೇವಿ ಯುವಕ ಸಂಘ ನಡೆಸುತ್ತಿರುವುದು ಮಹತ್ತರವಾದ ಕಾರ್ಯ ಎಂದರು. ಕಾರ್ಯಕ್ರಮದ ನೇತೃತ್ವವನ್ನು ಷಬ್ರಷಟಸ್ತಲ ಬ್ರಹ್ಮಿ ೧೦೮ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮೈನಹಳ್ಳಿ – ಬಿಕನಹಳ್ಳಿ ಇವರು ವಹಿಸಿ ಆರ್ಶೀವಚನ ನೀಡಿದರು. ನಂತರ ರಾಯಚೂರ, ಬಳ್ಳಾರಿ, ಕೊಪ್ಪಳ ಕೆ.ಎಂ.ಎಫ್. ಅಧ್ಯಕ್ಷ ವೆಂಕನಗೌಡ ಹಿರೇಗೌಡ್ರು ಕಾರ್ಯಕ್ರಮದ ಜ್ಯೋತಿ ಬೆಳಗಿಸಿ ಮಾತನಾಡಿ ಧಾರ್ಮಿಕ ಕಾರ್ಯಕ್ರಮಕ್ಕೆ ಜೊತೆ ಜೊತೆಗೆ ಮಕ್ಕಳಿಗೆ ಶಿಕ್ಷಣ, ಸಂಸ್ಕಾರ, ಕೊಡುವಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕಿದೆ. ವೈಜ್ಞಾನಿಕವಾಗಿ ವಕ್ಕಲುತನ ಮಾಡಬೇಕು ಬದುಕಿನಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಬೀರ, ಬ್ರಾಂಡಿ ಅಂಗಡಿ ಪ್ರಾರಂಭಿಸುವ ಬದಲು ಗ್ರಾಮಕ್ಕೆ, ಮನೆತನಕ್ಕೆ ಹಿತಕಾ

ರಿಯಾಗುವಂತಹ ಅಂಗಡಿಗಳನ್ನು ಪ್ರಾರಂಭಿಸಿ ಹೈನುಗಾರಿಕೆ, ಕುರಿಸಾಕಾಣಿಗೆ ಇನ್ನೀತರ ಕೆಲಸಗಳನ್ನು ಮಾಡಿ ತಮ್ಮ ಆರ್ಥಿಕ ಹೊರೆಯನ್ನು ನಿಗಿಸುವಂತೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಟ್ರಯ್ಯ ಸ್ವಾಮಿ ಅಬ್ಬಿಗೇರಿ ಮಠ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷ ಬಸವರಾಜ ಅಂಗಡಿ, ಗ್ರಾ.ಪಂ ಸದಸ್ಯರಾದ ನಾಯಕಪ್ಪ ತಳವಾರ, ಕೊಟ್ರಯ್ಯ ಹಿರೇಮಠ, ಹಿರಿಯರಾದ ಗವಿಸಿದ್ದಯ್ಯ ಹಿರೇಮಠ,  ಶಂಕರಗೌಡ ನಾಗನಗೌಡ್ರ, ಮಲ್ಲಣ್ಣ ಗುಗ್ರಿ, ಮಂಜುನಾಥ ಮೇಟಿ, ಮಲ್ಲಪ್ಪ ಮಾಂತಪ್ಪನವರ, ಬಡಕಪ್ಪ ಮಾಸ್ತರ ಬಳ್ಳಾರಿ, ಗ್ರಾ.ಪಂ. ಮಾಜಿ ಸದಸ್ಯ ಯಂಕಪ್ಪ ಕೋರಗಲ್, ಯುವಕ ವೆಂಕನಗೌಡ ಪೊಲೀಸ ಪಾಟೀಲ್ ಬೇವೂರ ಗ್ರಾ.ಪಂ. ಕಾರ್ಯದರ್ಶಿ ಶೇಖಣ್ಣ ಚಿಂಚಲಿ, ಹಿರಿಯರಾದ ದೊಡ್ಡ ಬಸವರಾಜ ಗುದ್ನೆಪ್ಪನವರ, ಮಂಜುನಾಥ ನಾಯಕ ಇತರರು ವೇದಿಕೆ ಮೇಲೆ ಇದ್ದರು. ಶಿವಯ್ಯ ಗಂಧದ ಮಠ ಪುರಾಣ ಮಂಗಳಗೊಳಿಸಿದರು. ರಾಜ್ಯ ಯುವ ಪ್ರಶಸ್ತಿ ವಿಜೇತ ಜಗದಯ್ಯ ಸಾಲಿಮಠ ಸ್ವಾಗತಿಸಿದರು. ಜಿಲ್ಲಾ ಪ್ರಶಸ್ತಿ ವಿಜೇತ ಬಸಯ್ಯ ಅಬ್ಬಿಗೇರಿ ಮಠ ನಿರೂಪಿಸಿದರು. ಸಂಘದ ಕಾರ್ಯದರ್ಶಿ ಫಕೀರೇಶ ಕಮ್ಮಾರ ವಂದಿಸಿದರು. ಇದಕ್ಕೂ ಪೂರ್ವದಲ್ಲಿ ತಾಯಮ್ಮ ದೇವಿಗೆ ಕುಂಭಾಬಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳರಾತಿಯೊಂದಿಗೆ ತಾಯಮ್ಮ ದೇವಿಯ ಖಂಡಾ ಪೂಜೆ ನೆರವೇರಿಸಲಾಯಿತು.

Please follow and like us:
error