fbpx

ಥೈಲಾಂಡ್ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆ ಕೊಪ್ಪಳದ ಮೌನೇಶ ಎಸ್.ವಡ್ಡಟ್ಟಿ ಸಾಧನೆ.

ಕೊಪ್ಪಳ – ಥೈಲಾಂಡ್ ಬ್ಯಾಂಕಾಕ್‌ನ ಹುಮಾರ್ಕ್ ಇಂಡೋರ್ ಸ್ಟೇಡಿಯಂನಲ್ಲಿ ಜು.೨೬ ರಿಂದ ಜು.೩೦ ರವರೆಗೆ ನಡೆದ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಕೊಪ್ಪಳದ ಭೂಮಿ ಫೌಂಡೇಶನ್‌ನ ಮುಖ್ಯಸ್ಥ ಮೌನೇಶ ಎಸ್.ವಡ್ಡಟ್ಟಿ ಅವರು ಕರ್ನಾಟಕದ ಏಕೈಕ ಪ್ರತಿನಿಧಿಯಾಗಿ ಸ್ಪರ್ಧಿಸಿ ಸಾಧನೆಗೈದು ಪ್ರಮಾಣ ಪತ್ರ ಗಿಟ್ಟಿಸಿಕೊಂಡಿದ್ದಾರೆ.
ಈ ಗುಂಪಿನಲ್ಲಿ ೬೩ ರಿಂದ ೬೭ ಕೆ.ಜಿ. ವಿಭಾಗದಲ್ಲಿ ವಿವಿಧ ದೇಶಗಳಿಂದ ಸರಿಸುಮಾರು ೪೮ ಕರಾಟೆ ಪಟುಗಳ ಸೀನಿಯರ ಕುಮಿತೆ (ಫೈಟ್) ನಲ್ಲಿ ಭಾಗವಹಿಸಿದ್ದರು. ಕೊಪ್ಪಳದ ಮೌನೇಶ.ಎಸ್.ವಡ್ಡಟ್ಟಿ ಅವರು ಎರಡು ಸ್ಪರ್ಧಾಳುಗಳಿಂದ ಮುನ್ನಡೆದು ಮೂರನೇಯ ಸ್ಪರ್ಧಾಳುವಿನೊಂದಿಗೆ ಹೊರಹೊಮ್ಮಿದರು. ಈ ಚಾಂಪಿಯನ್‌ಶಿಫ್‌ನಲ್ಲಿ ಚೀನಾ, ಜಪಾನ್, ಮಲೇಶಿಯಾ, ಶ್ರೀಲಂಕಾ, ಇರಾನ್, ಇರಾಕ್, ಬಾಂಗ್ಲಾದೇಶ, ಫಿಲಿಪೈನ್ಸ್, ಕೋರಿಯಾ, ಆಸ್ಟ್ರೇಲಿಯಾ, ಸಿಂಗಾಪೂರ, ಭಾರತ, ಕೆನಡಾ ಸೇರಿದಂತೆ ಒಟ್ಟು ೩೦ ದೇಶಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.

ಕರ್ನಾಟಕದಿಂದ ಏಕೈಕ ಕನ್ನಡಿಗ ಹಾಗೂ ಕೊಪ್ಪಳ ಜಿಲ್ಲೆಯವರಾಗಿರುವ ಮೌನೇಶ ಎಸ್.ವಡ್ಡಟ್ಟಿ ಅವರು ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಫ್‌ನಲ್ಲಿ ಪಾಲ್ಗೊಂಡಿದ್ದಕ್ಕೆ ಕೊಪ್ಪಳ ಜಿಲ್ಲೆಯ ಸಾಹಿತಿಗಳಾದ ಡಾ.ಮಹಾಂತೇಶ ಮಲ್ಲನಗೌಡರ, ಅಲ್ಲಮಪ್ರಭು ಬೆಟ್ಟದೂರು, ಎಚ್.ಎಸ್.ಪಾಟೀಲ್, ವಿಠ್ಠಪ್ಪ ಗೋರಂಟ್ಲಿ, ಕರ್ನಾಟಕ ನವನಿರ್ಮಾಣ ಸೇನೆಯ ವಿಜಯಕುಮಾರ ಕವಲೂರು, ಸೈಯ್ಯದ್ ಫೌಂಡೇಶನ್ ಅಧ್ಯಕ್ಷ ಕೆ.ಎಂ.ಸಯ್ಯದ್, ಭೂಮಿ ಫೌಂಡೇಶನ್‌ನ ಪದಾಧಿಕಾರಿಗಳು, ಅಭಿನವ ಫೌಂಡೇಶನ್ ಪದಾಧಿಕಾರಿಗಳು ಸೇರಿದಂತೆ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳು, ಕ್ರೀಡಾಭಿಮಾನಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

Please follow and like us:
error

Leave a Reply

error: Content is protected !!