ಬನ್ನಿಕಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮೋದಿ ಸಂವಾದ ಆಲಿಸಿದ ವಿದ್ಯಾರ್ಥಿಗಳು.

ಕೊಪ್ಪಳ – ಸೆ- ೪ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ಬೆಳಿಗ್ಗೆ ೧೦-೦೦ ಗಂಟೆಯಿಂದ ೧೧-೪೫ ರವರೆಗೆ ನಡೆಸಿದ ಮಕ್ಕಳೊಂದಿಗಿನ ಸಂವಾದ ಕಾಯಕ್ರಮ ವೀಕ್ಷಣೆಗೆ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಪರಮಾನಂದ ಯಾಳಗಿ ವಿದ್ಯುಕ್ತವಾಗಿ ಚಾಲನೆ ನೀಡಿದರು.
       ಶಿಕ್ಷಕರ ದಿನಾಚರಣೆಯ ನಿಮಿತ್ಯ ಮುನ್ನಾ ದಿನವಾದ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದ ಎಲ್ಲಾ ಶಾಲಾ ಮಕ್ಕಳೊಂದಿಗೆ ಸಂವಾದ ಮತ್ತು ಪ್ರಶ್ನಾವಳಿ ಕಾರ್ಯಕ್ರಮವನ್ನು ಪ್ರಧಾನ ಮಂತ್ರಿಗಳ ಎಮ್.ಎಚ್.ಆರ್.ಡಿ ವೆಬ್ ಸೈಟ್ ಎಮ್.ಎಚ್.ಆರ್.ಡಿ.ಯ ಯುಟ್ಯೂಬ್ ಮೂಲಕ ಶಾಲೆಯಲ್ಲಿ ನೇರ ಪ್ರಸಾರದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ಕಾರ್ಯಕ್ರಮದ ವೀಕ್ಷಣೆಯನ್ನು ಬನ್ನಿಕಟ್ಟಿ ಸರ್ಕಾರಿ ಪ್ರೌಢಶಾಲೆ ಮತ್ತು ಆದರ್ಶ ವಿದ್ಯಾಲಯದ ನೂರಾರು ವಿದ್ಯಾರ್ಥಿಗಳು ವೀಕ್ಷಿಸಿ ಸಂತಸಪಟ್ಟರು.

Leave a Reply