ಹಿರಿಯ ಸಹಕಾರಿಯ ಆಯ್ಕೆ ಸಂತಸ-ಸುಭಾಷ್ ಕಲಾಲ್.

ಕೊಪ್ಪಳ -06- ಸಹಕಾರಿ ಕ್ಷೇತ್ರದ ಏಳಿಗೆಗೆ ಶ್ರಮಿಸುತ್ತೀರುವ ಹಿರಿಯ ಸಹಕಾರಿ ಶಕುಂತಲಾ ಹುಡೇಜಾಲಿಯವರು ಜಿಲ್ಲಾ ಸಹಕಾರಿ ಯುನಿಯನ್‌ನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದು ಭಾಗ್ಯನಗರದ ಗೌರಿಶಂಕರ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ದಿ ಸೇವಾ ಸಂಸ್ಥೆಯ ಅಧ್ಯಕ್ಷ ಸುಭಾಷ್ ಕಲಾಲ್ ಹೇಳಿದರು.
ಅವರು ಬುಧುವಾರದಂದು ನಗರದ ಪಿಕಾರ್ಡ್ ಬ್ಯಾಂಕ್‌ನಲ್ಲಿ ನೂತನವಾಗಿ ಆಯ್ಕೆಗೊಂಡಿರುವ ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷೆ ಶಕುಂತಲಾ ಎಚ್.ಹುಡೇಜಾಲಿ  ಅವರನ್ನು ಸಂಸ್ಥೆಯ
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ವಿಜಯಕುಮಾರ ಹಣಗಿ, ಜಿಲ್ಲಾ ಸಹಕಾರಿ ಯುನಿಯನ್ ನಿರ್ದೇಶಕ ಗವಿಸಿದ್ದೇಶ ಹುಡೇಜಾಲಿ, ಪದಾಧಿಕಾರಿಗಳಾದ ಅಮರೇಶ ಕಡ್ಲಬಾಳ,ಬಸವರಾಜ್ ಟೆಂಗಿನಕಾಯಿ,ತಿಪ್ಪಮ್ಮ ಗಡ್ಡದ್,ದೊಡ್ಡಬಸಯ್ಯ, ಅನಿಲ ಬಾಚನಹಳ್ಳಿ, ಶಿವಕುಮಾರ ಆಡೂರ್ ಸೇರಿದಂತೆ ಮತ್ತೀತರರು ಉಪಸ್ಥಿತರಿದ್ದರು.

ವತಿಯಿಂದ ಸನ್ಮಾನಿಸಿದ ನಂತರ ಮಾತನಾಡಿ ಸಹಕಾರಿ ಕ್ಷೇತ್ರದ ವಿವಿಧ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ-ಉಪಾಧ್ಯಕ್ಷರಾಗಿ ಸಾಕಷ್ಟು ಸೇವೆ ಸಲ್ಲಿಸಿ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿ ಇಂದು ಜಿಲ್ಲಾ ಸಹಕಾರಿ ಯುನಿಯನ್‌ಗೆ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರಿಂದ ಇನ್ನು ಸಹಕಾರಿ ಕ್ಷೇತ್ರದಲ್ಲಿ ಹೆಚ್ಚಿನ ಕಾರ್‍ಯ ನಿರ್ವಹಿಸಲಿ ಎಂದರು. ನೂತನವಾಗಿ ಆಯ್ಕೆಗೊಂಡ ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷೆ ಶಕುಂತಲಾ ಹುಡೇಜಾಲಿ ಅವರು ಮಾತನಾಡಿ ಇಂದು ಸನ್ಮಾನದಿಂದ ನನ್ನ ಜವಾಬ್ದಾರಿ ಹೆಚ್ಚುತ್ತದೆ,ಸಹಕಾರಿ ಕ್ಷೇತ್ರದಲ್ಲಿ ಕಾರ್‍ಯ ನಿರ್ವಹಿಸುತ್ತೀರುವುದು ಸಂತಸ ಎನ್ನಿಸುತ್ತದೆ, ಸಹಕಾರಿ ಕ್ಷೇತ್ರದ ಏಳಿಗೆಗೆ ಪ್ರಮಾಣಿಕವಾಗಿ ಪ್ರಯತ್ನಿಸುವೆ ಎಂದರು.

Please follow and like us:
error