ಆ.೧೧ರಿಂದ ಕೊಪ್ಪಳದ ಶ್ರೀರಾಯರ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ

 ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಇದೇ.ದಿ.೧೧,೧೨ ಮತ್ತು ೧೩ ಈ ಮೂರುದಿನಗಳ ಕಾಲ ಶ್ರೀ ರಾಘವೇಂದ್ರ ಸ್ವಾಮಿಗಳ ೩೪೩ನೇ ಆರಾಧನಾ ಮಹೋತ್ಸವ ಜರುಗುವುದು. 
ಆಗಷ್ಟ್ ೧೧ ಸೋಮವಾರ ಪೂರ್ವಾರಾಧನೆ ಬೆಳಿಗ್ಗೆ ೫ ಕ್ಕೆ ಸುಪ್ರಭಾತ, ೭.೧೫ಕ್ಕೆ ಅಷ್ಟೋತ್ತರ ೮.೩೦ಕ್ಕೆ ಪಂಚಾಮೃತ ಅಭಿಷೇಕ, ೧೦.೩೦ಕ್ಕೆ ಪಂ. ವಾದಿರಾಜಾಚಾರ್ಯ ಕಲಮಂಗಿ ಇವರಿಂದ ಶ್ರೀಮದ್ಭಾಗವತ ಪ್ರವಚನ, ೧೧.೩೦ಕ್ಕೆ ನೈವೇದ್ಯ, ಹಸ್ತೋದಕ, ಅಲಂಕಾರ. ಸಂಜೆ ೬.೩೦ಕ್ಕೆ ವಿದ್ಯಾಧೀಶ ಆದ್ಯ ಇವರಿಂದ ಭಕ್ತಿ ಸಂಗೀತ, ೮ ಕ್ಕೆ ವಿಶೇಷ ಸೇವಾ ಪುರಸ್ಕಾರ, ೯.೩೦ಕ್ಕೆ ರಥೋತ್ಸವ, ಸ್ವಸ್ತಿ ವಚನ, ತೊಟ್ಟಿಲುಸೇವೆ, ಫಲಮಂತ್ರಾಕ್ಷತೆ.
ಆ.೧೨. ಆಗಷ್ಟ್  ಮಂಗಳವಾರ ಮಧ್ಯಾರಾಧನೆ ಬೆಳಿಗ್ಗೆ ೫ ಕ್ಕೆ ಸುಪ್ರಭಾತ, ೭.೧೫ಕ್ಕೆ ಅಷ್ಟೋತ್ತರ ೮.೩೦ಕ್ಕೆ ಪಂಚಾಮೃತ ಅಭಿಷೇಕ, ೧೦.೩೦ಕ್ಕೆ ಪಂ. ವಾದಿರಾಜಾಚಾರ್ಯ ಕಲಮಂಗಿ ಇವರಿಂದ ಶ್ರೀಮದ್ಭಾಗವತ ಪ್ರವಚನ, ೧೧.೩೦ಕ್ಕೆ ನೈವೇದ್ಯ, ಹಸ್ತೋದಕ, ಅಲಂಕಾರ. ಸಂಜೆ ೬.೩೦ಕ್ಕೆ ರವಿಂದ್ರ ಸೊರಗಾವಿ ಬೆಂಗಳೂರು ಇವರಿಂದ ಭಕ್ತಿ ಸಂಗೀತ, ೮ ಕ್ಕೆ ಪಂಡಿತ ಪುರಸ್ಕಾರ, ೮.೩೦ ಕ್ಕೆ ಶ್ರೀ ರಾಘವೇಂದ್ರ ವಿಜಯ ಮಂಗಲ ಮಹೋತ್ಸವ ೯.೩೦ ಕ್ಕೆ ರಥೋತ್ಸವ, ಸ್ವಸ್ತಿ ವಚನ, ತೊಟ್ಟಿಲುಸೇವೆ, ಫಲಮಂತ್ರಾಕ್ಷತೆ.
ಆ.೧೩.. ಆಗಷ್ಟ್ .ಉತ್ತರಾರಾಧನೆ ಬೆಳಿಗ್ಗೆ ೫ ಕ್ಕೆ ಸುಪ್ರಭಾತ, ೭.೧೫ಕ್ಕೆ ಅಷ್ಟೋತ್ತರ ೮.೩೦ ಕ್ಕೆ ಪಂಚಾಮೃತ ಅಭಿಷೇಕ,  ಮಧ್ಯಾಹ್ನ ೧೨.೧೫ಕ್ಕೆ ರಥೋತ್ಸವ, ೧.೩೦ ಕ್ಕೆ ನೈವೇದ್ಯ, ಹಸ್ತೋದಕ, ಅಲಂಕಾರ.,ತೀರ್ಥ ಪ್ರಸಾದ, ಸಂಜೆ ೬ ಕ್ಕೆ ಶ್ರೀಮತಿ ಸುಪ್ರೀಯಾ ಭಟ್ ಧಾರವಾಡ ಇವರಿಂದ ಭಕ್ತಿ ಸಂಗೀತ, ೮ ಕ್ಕೆ ಸೇವಾ ಪುರಸ್ಕಾರ, ೮.೧೫ ಪಂ.ವೆಂಕಟನರಸಿಂಹಾಚಾರ್ಯ ಗುಡೆಬೆಲ್ಲೂರು ಇವರಿಂದ ಪ್ರವಚನ ಮಹೋತ್ಸವ ೯.೩೦ಕ್ಕೆ ಫಲ ಮಂತ್ರಾಕ್ಷತೆ.  
 ಅಲ್ಲದೆ ಆಗಷ್ಟ್ ೧೦. ರವಿವಾರ ಪೌರ್ಣಮಿ ಬೆಳಿಗ್ಗೆ ದ್ಜಜಾರೊಹಣೆ, ೮.೩೦ಕ್ಕೆ ಋಗ್ವೇದಿ ಹಾಗೂ ಯಜುರ್ವೇಗಳಿಗೆ  ನಿತ್ಯ ಹಾಗೂ ನೂತನ ಉಪಾಕರ್ಮ ಕಾರ್ಯಕ್ರಮಗಳು ಜುರುಗುವವೆಂದು  ಶ್ರೀಮಠ ಪ್ರಕಟಣೆಯಲ್ಲಿ ತಿಳಿಸಿದೆ.
Please follow and like us:
error