ಮೊಬೈಲ್‌ನಲ್ಲಿ ಅವಾಚ್ಯ ಸಂಭಾಷಣೆ : ಆರೋಪಿಗೆ ಶಿಕ್ಷೆ

 ಮಹಿಳೆಯೋರ್ವರಿಗೆ ಮೊಬೈಲ್‌ನಲ್ಲಿ ಅವಾಚ್ಯ ಶಬ್ದಗಳಿಂದ ಅಶ್ಲೀಲ ಮಾತನಾಡಿ ಮಾನಸಿಕ ಕಿರುಕುಳ ನೀಡಿದ ಆರೋಪಿ ಮುಷ್ಟೂರ ಡಗ್ಗಿ ಗ್ರಾಮದ ಮಾಬುಸಾಬ ಸುಣಗಾರ ಎಂಬಾತನಿಗೆ ಇಲ್ಲಿನ ಸಿ.ಜೆ.ಎಂ. ನ್ಯಾಯಾಲಯ ೨ ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಕೊಪ್ಪಳದ ವಿನೂತನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿಜಯ ಹಿರೇಮಠ ಇವರ ಮೊಬೈಲ್‌ಗೆ ಆರೋಪಿ ಮಾಬುಸಾಬ ಸುಣಗಾರ ತನ್ನ ಮೊಬೈಲ್‌ನಿಂದ ಕರೆ ಮಾಡಿ, ಅವಾಚ್ಯ ಶಬ್ದಗಳಿಂದ ಅಶ್ಲೀಲವಾಗಿ ಮರ್ಯಾದೆಗೆ ಕುಂದು ಉಂಟು ಮಾಡುವ ರೀತಿಯಲ್ಲಿ ಮಾತನಾಡಿ ಮಾನಸಿಕ ಕಿರುಕುಳ ನೀಡಿದ್ದ ಬಗ್ಗೆ ಕೊಪ್ಪಳ ಪೊಲೀಸರು ದೂರು ದಾಖಲಿಸಿಕೊಂಡು, ಆರೋಪಿಯ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ವಿಚಾರಣೆಯನ್ನು ನಡೆಸಿದ ಸಿ.ಜೆ.ಎಂ. ನ್ಯಾಯಾಧೀಶರಾದ ಬಸವರಾಜ ಚಗರೆಡ್ಡಿ ಅವರು ಆರೋಪಿತನ ಮೇಲಿರುವ ಆಪಾದನೆ ಸಾಬೀತಾಗಿದೆ ಎಂದು ತೀರ್ಮಾನಿಸಿ, ಆರೋಪಿಗೆ ೨ ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ಬಿ.ಅರುಣಾಕ್ಷಿ ಅವರು ವಾದಿಸಿದ್ದರು.
Please follow and like us:
error