fbpx

ಕಾಂಗ್ರೆಸ್ ಲೋಕಸಭಾ ಚುನಾವಣೆಯ ಪೂರ್ವಭಾವಿ ಸಭೆಯು ಯಶಸ್ವಿ

ಕೊಪ್ಪಳ : ಲೋಕಸಭಾ ಚುನಾವಣೆಯ ಪೂರ್ವಭಾವಿ ಸಭೆಯನ್ನು ಇಂದು ದಿ. ೦೨.೦೪.೨೦೧೪ ರಂದು ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಜರುಗಿತು ಇದರ ಅಧ್ಯಕ್ಷತೆಯನ್ನು ಪ್ರಸನ್ನ ಗಡಾದ ಮಾಜಿ ಜಿ.ಪಂ ಸದಸ್ಯರು ಇವರು ವಹಿಸಿದ್ದರು.  ಇವರು ಮುಂದುವರೆದು ಮಾತನಾಡಿ ದೇಶದ ಅಭಿವೃದಿಗಾಗಿ ಕಾಂಗ್ರೆಸ್ ಸರಕಾರ ಬಹಳ ಶ್ರಮಿಸುತ್ತಿದೆ. ಮತ್ತು ರಾಜ್ಯ ಸರಕಾರದ ಶಾದಿಭಾಗ್ಯ, ಅನ್ನಭಾಗ್ಯ, ಕ್ಷಿರಭಾಗ್ಯ ಇನ್ನೂ ಅನೇಕ ಯೋಜನೆಗಳನ್ನು ರಾಜ್ಯ ಸರಕಾರ ಕೈಗೊಂಡಿದ್ದು ಇನ್ನೂ ಅನೇಕ ಯೋಜನೆಗಳನ್ನು ಗುರಿಯಾಗಿಟ್ಟುಕೊಂಡು ರಾಜ್ಯದ ಅಭಿವೃದ್ದಿಗಾಗಿ ಕಾಂಗ್ರೆಸ್ ಶ್ರಮಿಸುತ್ತಿದೆ ಮತ್ತು ಕೇಂದ್ರ ಸರಕಾರದ ೩೭೧ ನೇ ಜೆ ಕಲಂ ನ ಜಾರಿಗೆ ಕೇಂದ್ರಸರಕಾರ ಮತ್ತು ರಾಜ್ಯಸರಕಾರವು ಈ ಬಾಗದ ಜನರಿಗೆ ಶೈಕ್ಷಣಿಕವಾಗಿ ಅನೂಕುಲವಾಗುಂತೆ ಮಾಡಿದೆ. ಕೇಂದ್ರ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಮ.ರಾ.ಗ್ರಾ.ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ಮಾಡಿ ಜನರನ್ನು ಗೂಳೆ ಹೋಗುವುದನ್ನು ತಡೆಗಟ್ಟಿ ಅವರಿಗೆ ಕೆಲಸವನ್ನು ಕೊಡುವ ವ್ಯವಸ್ಥೆಯನ್ನು ಮಾಡಿದೆ. ಎಲ್ಲರು ಕೈಜೋಡಿ ಕಾಂಗ್ರೆಸ್ ಸರಕಾರಕ್ಕೆ ತಮ್ಮ ಮತವನ್ನು ಚಲಾಯಿಸಬೇಕೆಂದು ಹೇಳಿದರು.  
ಈ ಕಾರ್ಯಕ್ರಮದಲ್ಲಿ ತಾ.ಪಂ ಮಾಜಿ ಅಧ್ಯಕ್ಷರಾದ ಅಮರೇಶ ಉಪಲಾಪೂರ, ಗ್ರಾ.ಪಂ ಅಧ್ಯಕ್ಷರಾದ ವೀರಭದ್ರಪ್ಪ ಗಂಜಿ, ಮಾಜಿ ಅಧ್ಯಕ್ಷರುಗಳಾದ ಹನುಮಂತಪ್ಪ ಜೋಗಿ, ರಾಮಣ್ಣ ಕಳ್ಳಿ, ಈರಣ್ಣ ತುಪ್ಪಾ ಗ್ರಾ.ಪಂ ಸದಸ್ಯರುಗಳಾದ ನಾರಾಯಣಪ್ಪ ಕಂಬಾರ, ಪರುಶುರಾಮ ವಾಲ್ಮೀಕಿ, ಕರಿಯಪ್ಪ ಮಾಲ್ವಿ, ಹನುಮಂತಪ ನಾಯ್ಕ, ದುರಗಪ್ಪ ಡಂಬರ, ರಾಮಣ್ಣ ಡಂಬಳ, ಪರಶುರಾಮ ಗಾಳಿ, ಧರ್ಮಣ್ಣ ಕೋದರಿಮೋತಿ, ನಿಂಗಪ್ಪ ಕುಂಬಾರ, ಈರವ್ವ ಹರಿಜನ, ಹನುಮಂತ ಕೋಲಕಾರ, ಮೈಲಾರಪ್ಪ ಉಪ್ಪಾರ, ಪಂಪಣ್ಣ ಟಂಕಸಾಲಿ, ಈರಣ್ಣ ಮಂಡಳಾಉಂಡಿ, ಕಾಳಪ್ಪ ಬಿದರೂರು, ಧರ್ಮಣ್ಣ ಚಿತ್ರಗಾರ,  ಮೌನೇಶ ಕಳ್ಳಿ, ನೀಲಪ್ಪ, ಗೋರ್. ನೇಕಾರ ಸಂಘದ ಅಧ್ಯಕ್ಷರಾದ ಶರಿಫಸಾಬ ಹೀರಾಳ,  ನೇಕಾರ ಸಂಘದ ಜಿಲ್ಲಾ ಒಕ್ಕೂಟದ ಗೋಪಾಲ ಕುದರಿಮೋತಿ, ಹನುಮಂತ ಕುಣಿ, ಈರಪ್ಪ ಬಂಢಾ, ಮಲ್ಲಪ್ಪ ಮುರುಣ್ಣಿ ನೇಕಾರದ ಸಂಘದ ಉಪಾಧ್ಯಕ್ಷರು, ಗಂಗಣ್ಣ ಶಿರಗೇರಿ, ಪಾಂಡಪ್ಪ ಶಿಂದ್ಲಿ, ವಿಜಯ ಕಲಾಲ, ಯಂಕಪ್ಪ ಚುಟ್ಟದ, ಲಕ್ಷ್ಮಪ್ಪ ಮೇಟಿ, ಸಿದ್ದಪ್ಪ ಬಡಿಗೇರ, ಕಾಂಗ್ರೆಸ ಯುವ ಮುಖಂಡರಾದ ಅಶೋಕ, ವಿರೇಶ, ಗಣೇಶ ಮಹೇಂದ್ರಕರ ಯುವಕ ಮಂಡಳದವರು, ಗ್ರಾಮದ ಯುವಕರು, ಗುರು ಹಿರಿಯರು ಪಕ್ಷದ ಅಭಿಮಾನಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.    
Please follow and like us:
error

Leave a Reply

error: Content is protected !!