ಕೊಪ್ಪಳ ನಗರದ ಜಿಲ್ಲಾಸ್ಪತ್ರೆಯ ಎಲ್ಲಾ ರೋಗಿಗಳಿಗೆ ಹಾಲು, ಹಣ್ಣು ಮತ್ತು ಬ್ರೇಡ್ ವಿತರಣೆ

 ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ   ಎನ್. ಮುತ್ತಪ್ಪ ರೈ  ಹುಟ್ಟುಹಬ್ಬದ ಅಂಗವಾಗಿ ಇಂದು ಕೊಪ್ಪಳ ಜಿಲ್ಲಾಸ್ಪತ್ರೆಯ ಎಲ್ಲಾ ರೋಗಿಗಳಿಗೆ ಹಾಲು, ಹಣ್ಣು, ಬ್ರೇಡ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಶಸ್ರ್ತ ಚಿಕಿತ್ಸಕರಾದ  ಡಾ|| ಲೋಕೆಶರವರು, ಹಾಗೂ ಸಂಘಟನೆಯ ಆರೋಗ್ಯ ಘಟಕದ ಅಧ್ಯಕ್ಷರಾದ   ಡಾ|| ಶ್ರೀ ನಿವಾಸ ಹ್ಯಾಟಿರವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಉ.ಕ. ಕಾರ್ಯಧ್ಯಕ್ಷರಾದ   ವಿಜಯಕುಮಾರ ಕವಲೂರು, ಜಿಲ್ಲಾಧ್ಯಕ್ಷರಾದ  ಹನುಂತಪ್ಪ ಕಾಯಿಗಡ್ಡಿ ಮತ್ತು ಅಲ್ಪಸಂಖ್ಯಾತರ ಅಧ್ಯಕ್ಷರಾದ  ಎ.ಬಶೀರ್ ಆಹ್ಮದ ಪಲ್ಟನ್ , ಮಂಜುನಾಥ ಮ್ಯಾಗಳಮನಿ, ವೀರೇಶ ಅಂಗಡಿ, ಮರಿಯಪ್ಪ ಮಂಗಳೂರು, ಮಾಬುಸಾಬ್ ಬಿ.ಬಂಡಿ, ರವಿ ಕಬ್ಬೇರ, ನಾಗರಾಜ ನೀಲಗಿರಿ, ಕಿರಣಕುಮಾರ, ಫಯಾಜ್ ಮಂಗಳಾಪುರ, ಬಾಬಾವಲಿ ಪಲ್ಟಾನ್, ಸೈಫೂಲ್ಲಾ ಪಟೇಲ್, ಸುಮೇರ್ ಕೊಪ್ಪಳ, ಮಂಜುನಾಥ ಜವಳಿ ಹಾಗೂ ಇನ್ನು ಅನೇಕ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.

ಡಾ|| ಶ್ರೀ ನಿವಾಸ ಹ್ಯಾಟಿರವರು ಮಾತನಾಡಿ  ಮುತ್ತಪ್ಪ ರೈಯವರು, ಕನ್ನಡ ನಾಡಿಗಾಗಿ, ಏನಾದರೂ ಕೊಡುಗೆ ನೀಡಬೇಕೆಂದು, ಬಡವರ ಪರವಾಗಿ ಅವರ ಏಳಿಗೆಗಾಗಿ ಹಗಲಿರುಳು ಶ್ರಮಿಸಲು ಸಂಘಟನೆಯನ್ನು ಹುಟ್ಟುಹಾಕಿದ್ದಾರೆ ಇನ್ನು ಮುಂದೆಯು ಉತ್ತಮ ರೀತಿಯಲ್ಲಿ ಸಮಾಜ ಸೇವೆ ಮಾಡಲಿ ಎಂದು ಹೇಳಿದರು..

Leave a Reply