ತ್ರಿಸ್ಟಾರ್‍ಸ್ ಹುಟ್ಟುಹಬ್ಬ ನಿಮಿತ್ಯ ಚಿತ್ರಗೀತೆ ಸ್ಪರ್ಧೆ ವಿಜೇತರು.

ಕೊಪ್ಪಳ, ಸೆ. ೧೯. ನಗರದ ಸರಕಾರಿ ಬಾಲಕಿಯರ ಪ.ಪೂ. ಕಾಲೇಜಿನಲ್ಲಿ ಶನಿವಾರ ಖ್ಯಾತ ಚಲನಚಿತ್ರ ನಟರಾದ ಡಾ|| ವಿಷ್ಣುವರ್ಧನ್, ಉಪೇಂದ್ರ ಮತ್ತು ಶೃತಿರವರ ಹುಟ್ಟುಹಬ್ಬ ನಿಮಿತ್ಯ ಚಲನಚಿತ್ರ ಗೀತೆ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ಚಲನಚಿತ್ರ ಅಕಾಡೆಮಿಯ ಬೆಳ್ಳಿ ಮಂಡಲ, ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ಯುವಚೇತನ ಶಿವರಾಜ ತಂಗಡಗಿ ಅಭಿಮಾನಿಗಳ ವೇದಿಕೆ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿಜೇತರು ಭವನೇಶ್ವರಿ ಪ್ರಥಮ, ಗೀತಾ ಭಜಂತ್ರಿ ದ್ವಿತಿಯ, ಚೈತ್ರ ಜಡಿಶಂಕರ ತೃತೀಯ ಹಾಗೂ ಅನುಷಾ ಹಿರೇಗೌಡರ, ಆಯೆಷಾ ಸಿದ್ದಿಖಿ, ದೌಲತಬಿ ತುಪ್ಪದರರವರು ಸಮಾಧಾನಕರ ಬಹುಮಾನ ಪಡೆದುಕೊಂಡಿದ್ದು ಕಾರ್ಯಕ್ರಮವನ್ನು ಸೋಮವಾರ ಹಮ್ಮಿಕೊಂಡಿದ್ದು ಅಂದು ಬಹುಮಾನ ವಿತರಣೆ, ಸನ್ಮಾನ ಹಾಗೂ ಚಲನಚಿತ್ರ ಕುರಿತ ಭಾಷಣವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
Please follow and like us:
error