`ಬಸವ ಮಾರ್ಗ’ ಪ್ರಶಸ್ತಿಗೆ ಆಹ್ವಾನ

ಯಾದಗಿರಿ: ಜಿಲ್ಲೆಯ ಸುರಪುರ ತಾಲ್ಲೂಕಿನ ಬಸವ ಮಾರ್ಗ ಪ್ರತಿಷ್ಠಾನವು ರಾಜ್ಯ ಮಟ್ಟದಲ್ಲಿ ನೀಡುವ ಬಸವ ಮಾರ್ಗ ಪ್ರಶಸ್ತಿಗೆ ಕೃತಿಗಳನ್ನು ಆಹ್ವಾನಿಸಿದೆ.ಬಸವ ಮಾರ್ಗ ಪ್ರಶಸ್ತಿಯು ರೂ.5 ಸಾವಿರ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆಯನ್ನು ಒಳಗೊಂಡಿದ್ದು.
ಜೂನ್ 18ರಂದು ಸುರಪುರ ತಾಲ್ಲೂಕಿನ ಸತ್ಯಂಪೇಟೆಯಲ್ಲಿ ನಡೆಯಲಿರುವ ಲಿಂ. ಗುರಪ್ಪ ಯಜಮಾನರ 26ನೇ ಸ್ಮರಣೋತ್ಸವ ಹಾಗೂ ಬಸವತತ್ವ ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಸಂಚಾಲಕ ಸಂತೋಷ ಸತ್ಯಂಪೇಟೆ ತಿಳಿಸಿದ್ದಾರೆ.
2005ರಿಂದ ಇಲ್ಲಿಯವರೆಗೆ ಪ್ರಕಟವಾದ ಶರಣ ಸಾಹಿತ್ಯಕ್ಕೆ ಸಂಬಂಧಿಸಿದ ಕೃತಿಗಳ ಎರಡು ಪ್ರತಿಗಳನ್ನು ಜೂನ್ 5ರ ಒಳಗಾಗಿ ಸಂತೋಷ ಸತ್ಯಂಪೇಟೆ, ಬಸವ ಮಾರ್ಗ, ಚರಬಸವೇಶ್ವರ ಕಾಲೋನಿ, ಶಹಾಪುರ-585223, ಯಾದಗಿರಿ (ಜಿಲ್ಲೆ) ಈ ವಿಳಾಸಕ್ಕೆ ಕೃತಿಗಳನ್ನು ಕಳುಹಿಸಬೇಕು.
ಹೆಚ್ಚಿನ ಮಾಹಿತಿಗೆ 9448411672, 7899148789ಗೆ ಸಂಪರ್ಕ ಮಾಡಬಹುದಾಗಿದೆ.
Please follow and like us:
error