ಜೆಡಿ‌ಎಸ್‌ಗೆ ಆಪರೇಷನ್ ಕಮಲ ಭೀತಿ:

 ಎಚ್‌ಡಿಕೆ ನೇತೃತ್ವದಲ್ಲಿ ಸಭೆ
ಬೆಂಗಳೂರು: ಬಳ್ಳಾರಿ ಉಪ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿರುವ ಆಡಳಿತ  ರೂಢ ಬಿಜೆಪಿ, ಸರ್ಕಾರದ ಬುಡ ಭದ್ರಪಡಿಸಿಕೊಳ್ಳಲು ಮತ್ತೊಂದು ಸುತ್ತಿನ ಆಪರೇಷನ್ ಕಮಲ ಕ್ಕೆ ಕೈ ಹಾಕುವ ಸಾಧ್ಯತೆಗಳಿದ್ದು, ಅದಕ್ಕೆ ತಮ್ಮ ಶಾಸಕರು ಬಲಿಯಾಗಬಾರದು ಎಂಬ ಸೂಚನೆ ನೀಡಲು ಜೆಡಿ‌ಎಸ್ ಸೋಮವಾರ ಸಂಜೆ ಸಭೆ ಕರೆದಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಗರದ ಹೊರವಲಯದಲ್ಲಿರುವ ಈಗಲ್ಟನ್ ರೆಸಾರ್ಟ್‌ನಲ್ಲಿ ಇಂದು ಸಂಜೆ ಜೆಡಿ‌ಎಸ್ ಶಾಸಕರ ಸಭೆ ಕರೆಯಲಾಗಿದೆ.
ಸರ್ಕಾರ ಉಳಿಸಿಕೊಳ್ಳಲು ಒಂದು ವೇಳೆ ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾದರೆ, ಸರ್ಕಾರ ನೀಡುವ ಯಾವುದೇ ಆಮಿಷಗಳಿಗೆ ನೀವು ಬಲಿಯಾಗಬೇಡಿ ಎಂದು ಕುಮಾರಸ್ವಾಮಿ ಅವರು ತಮ್ಮ ಶಾಸಕರಲ್ಲಿ ಮನವಿ ಮಾಡಿಕೊಳ್ಳಲಿದ್ದಾರೆ.
ಬಳ್ಳಾರಿ ಉಪ ಚುನಾವಣೆಯಲ್ಲಿ ಭರ್ಜಿರಿ ಗೆಲುವು ಸಾಧಿಸಿರುವ ಪಕ್ಷೇತರ ಅಭ್ಯರ್ಥಿ ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಸೇರಿದಂತೆ ಜೆಡಿ‌ಎಸ್‌ನ ಹಲವು ನಾಯಕರು ಈ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
Please follow and like us:
error