ಈಶಾನ್ಯ ಪದವಿಧರ ಕ್ಷೇತ್ರ ಚುನಾವಣೆ: ೨೨ ಮತಗಟ್ಟೆ, ೯೯೩೬ ಮತದಾರರು

ಕೊಪ್ಪಳ ಮೇ.  ಕರ್ನಾಟಕ ವಿಧಾನಪರಿಷತ್ತಿಗೆ ಈಶಾನ್ಯ ಪದವೀಧರರ ಮತಕ್ಷೇತ್ರದಿಂದ ನಡೆಯುವ ಚುನಾವಣೆಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯಲ್ಲಿ ಮತದಾನಕ್ಕಾಗಿ ಒಟ್ಟು ೨೨ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ೭೯೧೭ ಪುರುಷ ಹಾಗೂ ೨೦೧೯ ಮಹಿಳೆ ಸೇರಿದಂತೆ ಒಟ್ಟು ೯೯೩೬ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
        ಜಿಲ್ಲೆಯಲ್ಲಿ ಈಶಾನ್ಯ ಪದವೀದರ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಪುರುಷ- ೭೯೧೭, ಮಹಿಳೆ- ೨೦೧೯ ಸೇರಿದಂತೆ ಒಟ್ಟು ೯೯೩೬ ಮತದಾರರಿದ್ದಾರೆ.  ಕುಷ್ಟಗಿ ತಾಲೂಕಿನಲ್ಲಿ ಪುರುಷ- ೧೭೪೧, ಮಹಿಳೆ- ೪೩೩ ಸೇರಿದಂತೆ ಒಟ್ಟು ೨೧೭೪ ಮತದಾರರಿದ್ದರೆ, ಯಲಬುರ್ಗಾ ತಾಲೂಕಿನಲ್ಲಿ ಪುರುಷ- ೧೦೯೩, ಮಹಿಳೆ- ೨೦೪, ಒಟ್ಟು- ೧೨೯೭, ಗಂಗಾವತಿ ತಾಲೂಕಿನಲ್ಲಿ ಪುರುಷ- ೨೬೭೫, ಮಹಿಳೆ- ೬೭೪, ಒಟ್ಟು- ೩೩೪೯.  ಕೊಪ್ಪಳ ತಾಲೂಕಿನಲ್ಲಿ ಪುರುಷ- ೨೪೦೮, ಮಹಿಳೆ- ೨೦೮ ಸೇರಿದಂತೆ ಒಟ್ಟು ೩೧೧೬ ಮತದಾರರಿದ್ದಾರೆ.  
  ಸುಗಮ ಮತದಾನ ಪ್ರಕ್ರಿಯೆಗಾಗಿ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ೫ ಮತಗಟ್ಟೆಗಳಿದ್ದು, ಇದರಲ್ಲಿ ೧ ಸೂಕ್ಷ್ಮ, ೪ ಅತಿಸೂಕ್ಷ್ಮ. ಯಲಬುರ್ಗಾ ತಾಲೂಕಿನ ೪ ಮತಗಟ್ಟೆಗಳ ಪೈಕಿ ೨ ಸೂಕ್ಷ್ಮ, ೨ ಅತಿಸೂಕ್ಷ್ಮ. ಗಂಗಾವತಿ ತಾಲೂಕಿನ ೭ ಮತಗಟ್ಟೆಗಳ ಪೈಕಿ ೬ ಸೂಕ್ಷ್ಮ, ೧ ಅತಿಸೂಕ್ಷ್ಮ.  ಹಾಗೂ ಕೊಪ್ಪಳ ತಾಲೂಕಿನ ೬ ಮತಗಟ್ಟೆಗಳ ಪೈಕಿ ೨ ಸೂಕ್ಷ್ಮ, ೩ ಅತಿಸೂಕ್ಷ್ಮ ಮತ್ತು ೧ ಸಾಮಾನ್ಯ ಮತಗಟ್ಟೆಗಳು ಸೇರಿದಂತೆ ಜಿಲ್ಲೆಯ ಒಟ್ಟು ೨೨ ಮತಗಟ್ಟೆಗಳ ಪೈಕಿ ೧೧ ಸೂಕ್ಷ್ಮ, ೧೦ ಅತಿಸೂಕ್ಷ್ಮ ಹಾಗೂ ೧ ಸಾಮಾನ್ಯ ಮತದಾನ ಕೇಂದ್ರಗಳೆಂದು ಗುರುತಿಸಲಾಗಿದೆ.  
  ಕುಷ್ಟಗಿ ತಾಲೂಕಿನಲ್ಲಿ ಕುಷ್ಟಗಿ ಪಟ್ಟಣ ಪ್ರದೇಶ ವ್ಯಾಪ್ತಿಯ ೬೧೦ ಮತದಾರರಿಗೆ ಕುಷ್ಟಗಿಯ ತಹಸಿಲ್ದಾರರ ಕಚೇರಿ, ಕುಷ್ಟಗಿ ಕಂದಾಯ ಹೋಬಳಿ ಗ್ರಾಮಗಳಿ ವ್ಯಾಪ್ತಿಯ ೬೫೯ ಮತದಾರರಿಗೆ ಕುಷ್ಟಗಿಯ ತಾ.ಪಂ. ಕಚೇರಿ, ಹನುಮಸಾಗರ ಹೋಬಳಿ ವ್ಯಾಪ್ತಿಯ ೪೧೯ ಮತದಾರರಿಗೆ ಹನುಮಸಾಗರದ ಗ್ರಾ.ಪಂ. ಕಟ್ಟಡ, ತಾವರಗೇರಾ ಹೋಬಳಿಯ ೨೮೩ ಮತದಾರರಿಗೆ ತಾವರಗೇರಾ ಗ್ರಾ.ಪಂ. ಕಟ್ಟಡ, ಹನುಮನಾಳ ಹೋಬಳಿಯ ೧೩೪ ಮತದಾರರಿಗೆ ಹನುಮನಾಳ ಗ್ರಾ.ಪಂ. ನಲ್ಲಿ ಮತದಾನ ಕೇಂದ್ರ ಸ್ಥಾಪಿಸಲಾಗಿದೆ.  ಯಲಬುರ್ಗಾ ತಾಲೂಕಿನಲ್ಲಿ ಯಲಬುರ್ಗಾ ಹೋಬಳಿಯ ೫೦೪ ಮತದಾರರಿಗೆ ತಹಸಿಲ್ದಾರರ ಕಚೇರಿ, ಕುಕನೂರು ಹೋಬಳಿಯ ೫೧೫ ಮತದಾರರಿಗೆ ಕುಕನೂರು ಗ್ರಾ.ಪಂ., ಹಿರೇವಂಕಲಕುಂಟಾ ಹೋಬಳಿಯ ೧೧೩ ಮತದಾರರಿಗೆ ಹಿರೇವಂಕಲಕುಂಟಾ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾ.ಶಾಲೆ.  ಮಂಗಳೂರು ಹೋಬಳಿಯ ೧೬೫ ಮತದಾರರಿಗೆ  ಮಂಗಳೂರು ಗ್ರಾಮದ ಸರ್ಕಾರಿ ಮಾದರಿ ಹಿ.ಪ್ರಾ.ಶಾಲೆ.  ಗಂಗಾವತಿ ತಾಲೂಕಿನಲ್ಲಿ ಗಂಗಾವತಿ ನಗರದ ೧೦೭೯ ಮತದಾರರಿಗೆ ಗಂಗಾವತಿಯ ಸರ್ಕಾರಿ ಪ.ಪೂ. ಕಾಲೇಜು.  ವೆಂಕಟಗಿರಿ ಹೋಬಳಿಯ ೧೯೨ ಮತದಾರರಿಗೆ ವೆಂಕಟಗಿರಿ ಗ್ರಾ.ಪಂ., ಮರಳಿ ಹೋಬಳಿಯ ೨೪೦ ಮತದಾರರಿಗೆ ಮರಳಿ ಗ್ರಾ.ಪಂ., ಗಂಗಾವತಿ ಹೋಬಳಿ ಮತ್ತು ನಗರದ ಬಾಕಿ ಮತದಾರರು ೧೦೦೦ ಜನರಿಗೆ ಗಂಗಾವತಿಯ ಸರ್ಕಾಟಿ ಪ.ಪೂ. ಕಾಲೇಜು.  ಕಾರಟಗಿ ಹೋಬಳಿಯ ೪೬೪ ಮತದಾರರಿಗೆ ಕಾರಟಗಿ ವಿಶೇಷ ತಹಸಿಲ್ದಾರರ ಕಚೇರಿ, ಸಿದ್ದಾಪುರ ಹೋಬಳಿಯ ೧೩೨ ಮತದಾರರಿಗೆ ಸಿದ್ದಾಪುರ ಗ್ರಾ.ಪಂ., ಕನಕಗಿರಿ, ನವಲಿ ಹಾಗೂ ಹುಲಿಹೈದರ್ ಹೋಬಳಿಯ ೨೪೨ ಮತದಾರರಿಗೆ ಕನಕಗಿರಿಯ ನಾಡಕಚೇರಿ, ಕೊಪ್ಪಳ ನಗರದ ೮೭೯ ಮತದಾರರಿಗೆ ತಾ.ಪಂ. ಕಚೇರಿ, ಕೊಪ್ಪಳ ನಗರದ ೮೮೨ ಮತದಾರರಿಗೆ ತಾ.ಪಂ. ಸಭಾಂಗಣ, ಕೊಪ್ಪಳ ಹೋಬಳಿ ಮತ್ತು ಹಲಗೇರಿಯ ೪೭೬ ಮತದಾರರಿಗೆ ಕೊಪ್ಪಳದ ತಹಸಿಲ್ದಾರರ ಕಚೇರಿ ಆವರಣದ ಜಿಲ್ಲಾ ತರಬೇತಿ ಕೇಂದ್ರ.  ಇರಕಲ್ಲಗಡ ಹೋಬಳಿಯ ೨೦೮ ಮತದಾರರಿಗೆ ಇರಕಲ್ಲಗಡ ಗ್ರಾ.ಪಂ.  ಅಳವಂಡಿ ಹೋಬಳಿಯ ೪೦೪ ಮತದಾರರಿಗೆ ಅಳವಂಡಿ ಗ್ರಾ.ಪಂ., ಹಾಗೂ ಹಿಟ್ನಾಳ ಹೋಬಳಿಯ ೨೬೭ ಮತದಾರರಿಗೆ ಮುನಿರಾಬಾದ್ ಡ್ಯಾಂ ಗ್ರಾ.ಪಂ. ಕಚೇರಿಯಲ್ಲಿ ಮತದಾನ ಕೇಂದ್ರ ಸ್ಥಾಪಿಸಲಾಗಿದೆ.
  ಮತದಾನ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಒಟ್ಟು ೨೭ ಮತಗಟ್ಟೆ ಅಧ್ಯಕ್ಷಾಧಿಕಾರಿಗಳು ಹಾಗೂ ೯೧ ಪೋಲಿಂಗ್ ಅಧಿಕಾರಿಗಳನ್ನು ನೇಮಿಸಲಾಗಿದ್ದು,  ವಿಧಾನಪರಿಷತ್ ಈಶಾನ್ಯ ಪದವೀಧರರ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತದಾನ ಜೂ. ೧೦ ರಂದು ಬೆಳಿಗ್ಗೆ ೮ ರಿಂದ ಸಾಯಂಕಾಲ ೪ ಗಂಟೆಯವರೆಗೆ ಆಯಾ ಮತಗಟ್ಟೆಗಳಲ್ಲಿ ನಡೆಯಲಿದೆ.  ಮತಗಳ ಎಣಿಕಾ ಕಾರ್ಯ ಜೂ. ೧೩ ರಂದು ಗುಲಬರ್ಗಾದಲ್ಲಿ ನಡೆಯುವುದು, ಮತದಾನವು ಮುಕ್ತ ಹಾಗೂ ಶಾಂತರೀತಿಯಿಂದ ನಡೆಸಲು ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷದವರು ಮತ್ತು ಮತದಾರರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಮನವಿ ಮಾಡಿದ್ದಾರೆ.
Please follow and like us:
error