ಅ.೧೭ ರಂದು ಕೊಪ್ಪಳ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ.

ಕೊಪ್ಪಳ, ಅ.೧೬ (ಕ ವಾ) ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕೊಪ್ಪಳ ತಾಲೂಕಾ ೫ನೇ ಕನ್ನಡ ಸಾಹಿತ್ಯ ಸಮ್ಮೇಳನ ವನ್ನು ಅ.೧೭ ರಂದು ನಗರದ ಸಿರಸಪ್ಪಯ್ಯಸ್ವಾಮಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ.  
     ಅಂದು ಬೆಳಿಗ್ಗೆ ೧೦ ಗಂಟೆಗೆ ನಡೆಯುವ ಸಮ್ಮೇಳನದ ಉದ್ಘಾಟನಾ ಸಮಾರಂಭದ ಸಾನಿಧ್ಯವನ್ನು ಕೊಪ್ಪಳ ರಜಪೂತ ಕಿಲ್ಲಾದ ಶ್ರೀ ಸಿರಸಪ್ಪಯ್ಯ ಸ್ವಾಮೀಜಿ ವಹಿಸುವರು. ಯತ್ನಟ್ಟಿಯ ರೈತ ಮಹಿಳೆ ಗಂಗಮ್ಮ ಮಂಗಳೂರು ಸಮ್ಮೇಳನ ಉದ್ಘಾಟಿಸುವರು. ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅವರು ಸಮ್ಮೇಳನಾಧ್ಯಕ್ಷರಾಗಿ ಪಾಲ್ಗೊಳ್ಳುವರು.  ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಶಾಂತಾದೇವಿ ಹಿರೇಮಠ, ಸಮ್ಮೇಳನಾಧ್ಯಕ್ಷರಿಗೆ ಧ್ವಜ ಹಸ್ತಾಂತರಿಸುವರು. ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಡಾ|| ಜಗದೀಶ ಕೆರೆನಹಳ್ಳಿ ಅವರ ಅವಜು ಕೃತಿಯನ್ನು ಬಿಡುಗಡೆ ಮಾಡುವರು. ಸಂಸದ ಸಂಗಣ್ಣ ಕರಡಿ, ನಗರಸಭೆ ಅಧ್ಯಕ್ಷೆ ಬಸಮ್ಮ ಹಳ್ಳಿಗುಡಿ, ತಾಲೂಕಾ ಪಂಚಾಯತ್ ಸದಸ್ಯ ದಾನಪ್ಪ ಕವಲೂರು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಪಾನಘಂಟಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಪ್ಪ ನಿಂಗೋಜಿ, ಗೌರವ ಕಾರ್ಯದರ್ಶಿ ಶಿವಾನಂದ ಮೇಟಿ, ಅಕ್ಬರ್ ಸಿ.ಕಾಲಿಮಿರ್ಚಿ, ಕೋಶಾಧ್ಯಕ್ಷ ಆರ್.ಎಸ್.ಸರಗಣಾಚಾರ್, ನ್ಯಾಯವಾದಿ ಆಯ್.ವಿ. ಪತ್ತಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರು, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂ ರಾವ್, ಹಿಟ್ನಾಳ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಮಮೂರ್ತಿ ಮುನಿರಾಬಾದ್, ರುದ್ರಪ್ಪ ಬಡಿಗೇರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
     ಸಮ್ಮೇಳನದಲ್ಲಿ ಅಂದು ಮಧ್ಯಾಹ್ನ ೧೨ ಗಂಟೆಗೆ ಸಂಕೀರ್ಣ ಗೋಷ್ಠಿ-೦೧ ನಡೆಯಲಿದ್ದು, ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಅಧ್ಯಕ್ಷತೆ ವಹಿಸುವರು. ಕೊಪ್ಪಳ ಮೀಡಿಯಾ ಕ್ಲಬ್ ಅಧ್ಯಕ್ಷ ಸೋಮರಡ್ಡಿ ಅಳವಂಡಿ ಆಶಯ ನುಡಿ ಸಲ್ಲಿಸಲಿದ್ದಾರೆ. ರೈತರ ಆತ್ಮಹತ್ಯೆ ಹಿನ್ನೆಲೆ ಮತ್ತು ಅದರ ಪರಿಹಾರೋಪಾಯಗಳು ವಿಷಯ ಕುರಿತು ಈಟಿವಿ ವರದಿಗಾರ ಶರಣಪ್ಪ ಬಾಚಲಾಪೂರ ಅವರು ಹಾಗೂ ಕೊಪ್ಪಳ ತಾಲೂಕಾ ಕಾವ್ಯ ಕೃಷಿ ಎಂಬ ವಿಷಯ ಕುರಿತು ಸಾಹಿತ್ಯ ಚಿಂತಕ ಶ.ನಿಂ.ತಿಮ್ಮನಗೌಡ್ರ ವಿಷಯ ಮಂಡಿಸಲಿದ್ದಾರೆ. ಮಧ್ಯಾಹ್ನ ೦೨.೩೦ ಗಂಟೆಗೆ ಕವಿಗೋಷ್ಠಿ ನಡೆಯಲಿದ್ದು, ಮುನಿರಾಬಾದ್ ಡ್ಯಾಂನ ಅಧ್ಯಾಪಕ ಟಿ.ಎಂ. ಲಿಂಗರಾಜ ಅಧ್ಯಕ್ಷತೆ ವಹಿಸಲಿದ್ದಾರೆ. ಕವಿ ಬಿ.ಪಿ.ಅಮರೇಗೌಡ ಆಶಯನುಡಿ ಸಲ್ಲಿಸಲಿದ್ದಾರೆ.  ಸಂಜೆ ೦೪.೩೦ ಗಂಟೆಗೆ ಸಮ್ಮೇಳನದ ಸಮಾರೋಪ ಸಮಾರಂಭ ನಡೆಯಲಿದ್ದು, ಹಿರಿಯ ಸಾಹಿತಿ ಎಚ್.ಎಸ್.ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಸರ್ಕಾರಿ ಅಭಿಯೋಜಕ ಬಿ.ಎಸ್.ಪಾಟೀಲ್ ಆಶಯ ನುಡಿ ಸಲ್ಲಿಸಲಿದ್ದಾರೆ. ಉಪನ್ಯಾಸಕ ರಾಜಶೇಖರ ಪಾಟೀಲ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಸಾಧಿಕ್ ಅಲಿ, ತಾಲೂಕಾ ಸರ್ಕಾರಿ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಮಾರ್ತಾಂಡರಾವ್ ದೇಸಾಯಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.  
Please follow and like us:
error