fbpx

ಹರಿದಾಸ ಸಾಹಿತ್ಯ ಸಮ್ಮೇಳನವನ್ನು ಆಚರಿಸಲು ಸಂಕಲ್ಪ

ಕೊಪ್ಪಳ,  ಉಡುಪಿಯ ಭಂಡಾರಕೇರಿ ಮಠದ ಶ್ರೀ ಶ್ರೀ ೧೦೦೮ ಶ್ರೀ ವಿದ್ಯೇಶತಿರ್ಥ ಶ್ರೀಪಾದಂಗಳವರ ೩೬ ನೇ ಚಾತುರ್ಯಮಾಸ್ಯ ವ್ರತ ಹಾಗೂ ಹರಿದಾಸ ಸಾಹಿತ್ಯ ಸಮ್ಮೇಳನವನ್ನು ಆಚರಿಸಲು ಸಂಕಲ್ಪ್ಪಿಸಿಲಾಯಿತು.
ಇತ್ತಿಚಿಗೆ ನಗರದ ಪ್ರಮೋದ ಕಲ್ಯಾಣ ಮಂಟಪದಲ್ಲಿ ಪೂರ್ವ ಭಾವಿ ಸಿದ್ಧತೆಗಾಗಿ ಸಭೆಯಲ್ಲಿ ನಿರ್ಣಯ ಕೈಗೋಳಲಾಯಿತು.
    ಸಭೆಯನ್ನು ನಗರದ ಹಿರಿಯ ವಿದ್ವಾಂಸ ರಾದ ಪಂ|| ಶ್ರೀರಘುಪ್ರೇಮಾ ಚಾರ ಮುಳಗುಂದ ಉದ್ಘಟಿಸಿ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ, ಚಾತುರ್ಯಮಾಸ್ಯ ವ್ರತದ ಬಗ್ಗೆ ವಿಶೇಷ ಸಂದೇಶವನ್ನು ನೀಡಿದರು. 
ಕಾರ್ಯಕ್ರಮದ ಯಶಸ್ವಿಗೆ ಪ್ರತಿಯೊಬ್ಬರು ಸಹಕರಿಸಿ ಶ್ರೀಗಳವರ ಹಾಗೂ ಕೋದಂಡ ರಾಮದೇವರ ಅನುಗ್ರಹ ಪಡೆಯಬೇಕೆಂದು ಭಕ್ತರಿಗೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಜಿಲ್ಲಾ ಅಧ್ಯಕ್ಷರಾದ ಡಾ|| ಕಿ.ಜಿ. ಕುಲಕರ್ಣಿ, ಪಂ| ಪ್ರಮೋದಾಚಾರ ಪೂಜಾರ, ನಗರಸಭೆ ಸದಸ್ಯರಾದ ಪ್ರಾಣೇಶ ಮಾದಿನೂರ, ಶನಂದ ತೀರ್ಥಾ ಚಾರ ಹುಲಗಿ, ವಸಂತ ಪೂಜಾರ, ಮಾತನಾಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಕೋರಿದರು.
ಅಖಿಲ ಕರ್ನಾಟಕ ಹರಿದಾಸ ಕೂಟದ ಅಧ್ಯಕ್ಷರು ಟಿ.ಟಿ.ಡಿ ದಾಸ ಸಾಹಿತ್ಯ ಪ್ರಾಜೆಕ್ಟನ ರಾಜ್ಯ ಸಂಚಾಲಕ ಜಿ. ರಾಮರಾವ ಯಲಬುರ್ಗಾ ಮಾತನಾಡಿ ಈ ಕಾರ್ಯಕ್ರಮದ ಪ್ರತಿ ಹಂತದಲ್ಲಿಯೂ ಕೂಡಾ ಎಲ್ಲರೂ ಸಹಕರಿಸಲು ಮನವಿ ಮಾಡಿದರು ದಾಸ ಸಾಹಿತ್ಯ ಭಜನಾ ಮಂಡಳಿಗಳಿಂದ ವಿಶೇಷ ನಾಮಸಂಕೀರ್ತನೆ ಜರುಗಿತು. 
ಕಾರ್ಯಕ್ರಮವನ್ನು ವಾದಿರಾಜ ಪಾಟೀಲ ನಿರೂಪಿಸಿದರು. ನಾರಾಯಣದಾಸ ಇವರಿಂದ ದಾಸವಾಣಿ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ  ಶ್ರೀ ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕ ಜಗನ್ನಾಥಚಾರ ಹುನಗುಂದ, ಡಾ ಕೆ. ಈ ಕುಲಕರ್ಣಿ ಉಪಸ್ಥಿತರಿದ್ದರು
Please follow and like us:
error

Leave a Reply

error: Content is protected !!