fbpx

ರಾಘವೇಂದ್ರ ಹಿಟ್ನಾಳ ಜಯ ಖಚಿತ – ಹೆಚ್. ಎಲ್. ಹಿರೇಗೌಡ್ರ

ಕೊಪ್ಪಳ : ದಿನಾಂಕ ೨೧ ರಂದು ಸಾಯಂಕಾಲ ೭:೦೦ ಗಂಟೆಗೆ ಜಿಲ್ಲಾ ಕಾಂಗ್ರೆಸ ಕಾರ್ಯಾಲಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ತೊರೆದು ಮೈನಳ್ಳಿ ಗಮದ ಅನೇಕ ಕಾರ್ಯಕರ್ತರು ಕಾಂಗ್ರೇಸ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ೨ ದಶಕಗಳಿಂದ ಕರಡಿಯವರ ಅಭಿವೃದ್ಧಿ ಕಾರ್ಯಗಳನ್ನು ಜನತೆ ಪರೋಕ್ಷವಾಗಿ, ಅಪರೋಕ್ಷವಾಗಿ ನೋಡಿದ್ದಾರೆ. ಮತ್ತೆ ಸುಳ್ಳು ಅಭಿವೃದ್ಧಿ ನೆಪದಲ್ಲಿ ಶಾಸಕರು ಮತ ಯಾಚನೆ ಮಾಡುತ್ತಿರುವುದು ಹಾಸ್ಯಾಸ್ಪದ. ಸುಮಾರು ೧೧ ವರ್ಷಗಳು ಹಿರೇಹಳ್ಳ ನೀರಾವರಿ ಯಾಗಿದ್ದು ಹಲಗೇರಿಯ ರೈಲ್ವೆ ಹಳಿಗಳಿಂದ ಇವರಿಗೆ ಕಾಲುವೇ ಮಾಡಲು ಇದು ವರೆಗೂ ಆಗಿಲ್ಲ. ಇದು ಇವರ ಅಭಿವೃದ್ಧಿಯ ಮೂಖ ಸಾಕ್ಷಿ. ಹುಚ್ಚೇಶ್ವರ ಕ್ಯಾಂಪ ಅಭಿವೃದ್ಧಿಯೇ ಇವರ ೨೦ ವರ್ಷಗಳ ಅಭಿವೃದ್ಧಿಯ ಹಿರಿಮೇ. ಇವರು ಇನ್ನು ಕ್ಷೇತ್ರದ ಜನತೆಗೆ ಸಿಂಗಟಾಲೂರ ನೀರು ಕುಡಿಸುವದು ಇವರ ಗೊಡ್ಡು ಅಭಿವೃದ್ಧಿಯ ಸಾಕ್ಷಿಯಾಗಿದೆ. ಕೇವಲ ಸ್ವಜನ ಪಕ್ಷಪಾತ ಇವರ ಅಭಿವೃದ್ಧಿಯ ಮಂತ್ರವಾಗಿದೆ. ಇವರಿಂದ ಕೊಪ್ಪಳ ಕ್ಷೇತ್ರದ ಅಭಿವೃದ್ಧಿ ಅಸಾಧ್ಯ ಆದ್ದರಿಂದ ಕ್ಷೇತ್ರದ ಜನತೆ ಯುವ ನಾಯಕ ಕೆ. ರಾಘವೇಂದ್ರ ಹಿಟ್ನಾಳ ರವರನ್ನು ಪ್ರಚಂಡ ಬಹುಮತದಿಂದ ಆರಿಸಿತಂದು ೮-೦೫-೨೦೧೩ ರಂದು ಕರಡಿಯವರ ರಾಜಕೀಯ ಜೀವನಕ್ಕೆ ಕ್ಷೇತ್ರದ ಜನತೆ ಇತಿಶ್ರೀ ಹಾಡಲಿದ್ದಾರೆಂದು ಶಾಸಕರ ವಿರುದ್ದ ಹರಿಹಾಯ್ದರು. 
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ ಅಧ್ಯಕ್ಷರಾದ ಕೆ. ಬಸವರಾಜ ಹಿಟ್ನಾಳ, ಎಸ್. ಬಿ, ನಾಗರಳ್ಳಿ, ಜುಲ್ಲು ಖಾದರಿ, ಗವಿಶಿದ್ದಪ್ಪ ಮುದಗಲ್ಲ, ಈಶಪ್ಪ ಮಾದಿನೂರ, ಕ್ರೀಷ್ಣ ಇಟ್ಟಂಗಿ, ಗಾಳೆಪ್ಪ ಪೂಜಾರ, ದೇವಪ್ಪ ಕಟ್ಟಿಮನಿ, ನಾಗರಾಜ ಬಳ್ಳಾರಿ, ಮಹೇಶ ಭಜೆಂತ್ರಿ. ಮೌಲಾಹುಸೇನ್ ಜಾಮಾದಾರ್, ಮಲ್ಲಪ್ಪ ಕವಲೂರ, ಮಾನ್ವಿ ಪಾಷಾ, ಕಾಟನ್ ಪಾಷಾ ಇನ್ನು ಅನೇಕ ಕಾಂಗ್ರೆಸ ದೂರಿಣರು ಉಪಸ್ಥಿತರಿದ್ದರೆಂದು ಕಾಂಗ್ರೇಸ ವಕ್ತಾರ ಅಕ್ಬರ ಪಾಷಾ ಪಲ್ಟನ್ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.  
Please follow and like us:
error

Leave a Reply

error: Content is protected !!