You are here
Home > Koppal News > ಡಾ. ಶಿವಕುಮಾರ ಸ್ವಾಮಿಗಳಿಗೆ ಭಾರತ ರತ್ನ?…

ಡಾ. ಶಿವಕುಮಾರ ಸ್ವಾಮಿಗಳಿಗೆ ಭಾರತ ರತ್ನ?…

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು  ಶನಿವಾರ ತುಮಕೂರಿಗೆ ಭೇಟಿ ನೀಡಿ,ಡಾ.ಶಿವಕುಮಾರ ಸ್ವಾಮಿಗಳಿಗೆ 105ಗುರುವಂದನೆ ಸಲ್ಲಿಸಲಿದ್ದಾರೆ. ಇದರ ಜತೆಜತೆಗೆ ರಾಜ್ಯದಲ್ಲಿ ಸದ್ಯದಲ್ಲೇ ಎದುರಾಗಲಿರುವ ವಿಧಾನಸಭೆ ಚುನಾವಣೆ ಮುನ್ನೆಲೆಯಲ್ಲಿ ಪಕ್ಷವನ್ನು ಸಂಘಟಿಸಲು ಸೋನಿಯಾ ಮೇಡಂ ಕಂಕಣಬದ್ಧರಾಗಿದ್ದಾರೆ.
ಮೊದಲ ಪ್ರಯತ್ನವಾಗಿ ದೊಡ್ಡದಕ್ಕೇ ’ಕೈ’ಹಾಕಿದ್ದಾರೆ.ಭಾರಿ ಸಂಖ್ಯೆಯ ಲಿಂಗಾಯತರ ಮತಗಳನ್ನು ಪಕ್ಷದತ್ತ ಸೆಳೆದುಕೊಳ್ಳುವ ನಿಟ್ಟಿನಲ್ಲಿ ಸೋನಿಯಾ ಅವರು ನಾಳೆ ಮಹತ್ವದ ನಿರ್ಣಯ ಪ್ರಕಟಿಸುವ ಸಾಧ್ಯತೆಯಿದೆ.
ಶನಿವಾರ ಬೆಳಗ್ಗೆ 12ಗಂಟೆಗೆ ಸಿದ್ದಗಂಗಾ ಮಠದಲ್ಲಿ ನಡೆಯುವ ಜಯಂತ್ಯುತ್ಸವದಲ್ಲಿ ಎ‌ಐಸಿಸಿ ಅಧ್ಯಕ್ಷೆ ಸೋನಿಯಾ ಅವರು ಮಹಾತಪಸ್ವಿ, ನಡೆದಾಡುವ ದೇವರು ಎಂದು ಜನಜನಿತವಾಗಿರುವ ಸಿದ್ಧಗಂಗಾ ಶ್ರೀಗಳಿಗೆ ಅವರ ಇಡೀ ಭಕ್ತ ಸಮೂಹ ಬಯಸುವಂತೆ ಕೇಂದ್ರ ಸರಕಾರದ ವತಿಯಿಂದ ’ಭಾರತ ರತ್ನ’ ಪ್ರಕಟಿಸುವ ಆಶಯವಿದೆ.
ಇದರೊಂದಿಗೆ ನಾಡಿನ ಪ್ರಬಲ ಲಿಂಗಾಯತ ಸಮುದಾಯದ ಕಾಂಗ್ರೆಸ್ ಪಕ್ಷದೊಂದಿಗೆ ಇಲ್ಲ ಎಂಬ ಭಾವನೆ ನಿವಾರಣೆಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

Leave a Reply

Top