ಲೋಕಪಾಲ್‌ ಸಾಂವಿಧಾನಿಕ ಸಂಸ್ಥೆ: ರಾಹುಲ್‌ಗೆ ಅಣ್ಣಾ ಬೆಂಬಲ

ದೇಶದಲ್ಲಿನ ಭ್ರಷ್ಟಾಚಾರವನ್ನು ಹೊಡೆದೊಡಿಸಲು ಎಲ್ಲಾ ರಾಜಕೀಯ ಪಕ್ಷಗಳ ಬೆಂಬಲ ಬೇಕು. ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಸೋನಿಯಾ ಪುತ್ರ ರಾಹುಲ್‌ ಗಾಂಧಿ ಅವರ ಸಲಹೆಯಂತೆ ಲೋಕಪಾಲ್‌ನ್ನು ಸಂವಿಧಾನಿಕ ಸಂಸ್ಥೆಯನ್ನಾಗಿ ಮಾಡುವುದಕ್ಕೆ ಯಾವುದೇ ರೀತಿಯ ಆಕ್ಷೇಪವಿಲ್ಲ ಎಂದು ಅಣ್ಣಾ ಹಜಾರೆ ಅವರು ಹೇಳಿದ್ದಾರೆ.
ಚುನಾವಣಾ ಆಯೋಗದ ರೀತಿಯಲ್ಲಿ ಲೋಕಪಾಲ್‌ ಸಂವಿಧಾನ ಸಂಸ್ಥೆಯೊಂದನ್ನು ಮಾಡುವುದ ಕ್ಕೆ ನನ್ನ ಆಕ್ಷೇಪವಿಲ್ಲ.ಆದರೆ ಅದರ ಕಾರ್ಯನಿರ್ವಹಣೆಯಲ್ಲಿ ಸರಕಾರ ಯಾವುದೇ ರೀತಿಯಲ್ಲಿ ಹಸ್ತಕ್ಷೇಪಮಾಡಬಾರದು.ಸುಮಾರು ಹತ್ತು ವರ್ಷಗಳ ಹಿಂದೆ ರೈಟ್‌ ಟು ರಿಜೆಕ್ಟ್ ಸಂಬಂಧಿಸಿ ಸರಕಾರಕ್ಕೆ ಚುನಾವಣಾ ಆಯೋಗ ಪತ್ರ ಬರೆದಿತ್ತು,ಆದರೆ ಇನ್ನೂ ಇದು ಕಾನೂನಾಗಿಲ್ಲ ಎಂದು ಹಜಾರೆ ಇಂದಿಲ್ಲಿ ತಿಳಿಸಿದ್ದಾರೆ.ಪ್ರಸ್ತಾವಿತ ಲೋಕಪಾಲ್‌ ಮಸೂದೆಯಲ್ಲಿ ಪ್ರಧಾನಿಯವರನ್ನು ಸೇರಿಸಿಕೊಳ್ಳುವುದಕ್ಕೆ ಕೆಲವರು ಯಾಕೆ ವಿರೋಧಿಸುತ್ತಿದ್ದಾರೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ ಭ್ರಷ್ಟಾಚಾರ ವಿರೋಧಿ ಸಂಘಟಕ ಅಣ್ಣಾ ಹಜಾರು ಅವರು,ಒಂದು ವೇಳೆ ಪ್ರಧಾನಿ ಅವರನ್ನು ಸೇರಿಸಿಕೊಂಡಲ್ಲಿ ಲೋಕಪಾಲ್‌ ಸಂಸ್ಥೆಯ ಗೌರವ ಹೆಚ್ಚಲಿದೆ.
ಒಂದು ವೇಳೆ ಅವರು ಶುದ್ಧಹಸ್ತರಾಗಿದ್ದರೆ ಲೋಕಪಾಲ್‌ ಮಸೂದೆಯಲ್ಲಿ ಸೇರಿಸಿಕೊಳ್ಳುವುದಕ್ಕೆ ಯಾಕೆ ಅವರು ಹಿಂದೇಟುಹಾಕಬೇಕು ಎಂದು ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರದ ಮಾಜಿ ಸಚಿವ ಸುರೇಶ್‌ ಜೈನ್‌ ಶಾಮೀಲಾರುವ ಪ್ರಕರಣಕ್ಕೆ ಸಂಬಂಧಿಸಿ ಪುಣೆ ನ್ಯಾಯಾಲಯವೊಂದರಲ್ಲಿ ಹಾಜರಾಗಲು ಆಗಮಿಸಿದ ಹಜಾರೆ ಅವರು,ಕೆಳಮಟ್ಟದ ಅಧಿಕಾರಿಗಳ ಸಹಿತ ಲೋಕಪಾಲ್‌ ವಿಶಾಲ ಅಧಿಕಾರವನ್ನು ಹೊಂದಿರಬೇಕಿದೆ.ಇದರ ಮೂಲಕ ಭ್ರಷ್ಟ ಅಧಿಕಾರಿಗಳಿಂದ ಸಾಮಾನ್ಯ ಜನರು ಕಿರುಕುಳಕ್ಕೆ ಒಳಗಾಗುವುದಕ್ಕೆ ಪರಿಹಾರ ಒದಗಿಸಲು ಸಾಧ್ಯವಾಗಲಿದೆ ಎಂದು ಹಜಾರೆ ತಿಳಿಸಿದ್ದಾರೆ.
ಜನಲೋಕಪಾಲ್‌ ಮಸೂದೆಗೆ ಶೇ.50ರಷ್ಟು ಸಂಸದರು ತಮ್ಮ ಬೆಂಬಲ ಸೂಚಿಸಿರುವುದಾಗಿ ಹಜಾರೆ ಹೇಳಿದ್ದಾರೆ.ಲೋಕಪಾಲ್‌ ಮಸೂದೆಗೆ ಸಂಬಂಧಿಸಿದ ಸ್ಥಾಯಿ ಸಮಿತಿ ತನ್ನ ಎಲ್ಲಾ ಬೇಡಿಕೆಗಳಿಗೆ ಗಮನಹರಿಸಿಲ್ಲ.ನಮ್ಮ ಮಸೂದೆಯನ್ನು ಹೆಚ್ಚಿನ ರಾಜಕೀಯ ಪಕ್ಷಗಳು ಬೆಂಬಲಸುತ್ತಿದ್ದು,ತೃಣಮೂಲ ಕಾಂಗ್ರೆಸ್‌ ಮತ್ತು ಬಿ‌ಎಸ್ಪಿ ಪಕ್ಷಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಿಲ್ಲ ಎಂದು ಅವರು ಹೇಳಿದ್ದಾರೆ.
ಸರಕಾರ ಒಂದು ವೇಳೆ ಚಳಿಗಾಲದ ಸಂಸದ್‌ ಅಧಿವೇಶನದಲ್ಲಿ ಲೋಕಪಾಲ್‌ ಮಸೂದೆ ಜಾರಿಗೊಳಿಸಲು ವಿಫಲವಾದಲ್ಲಿ ಡಿ. 27ರಿಂದ ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ನೂತನ ಉಪವಾಸ ಸತ್ಯಾಗ್ರಹ ಪ್ರಾರಂಭಿಸುವುದಾಗಿ ಹಜಾರೆ ಪುನರುಚ್ಚರಿಸಿದ್ದಾರೆ.
ಕಳೆದ ತಿಂಗಳು ಎನ್‌ಸಿಪಿ ಮುಖ್ಯಸ್ಥ,ಕೃಷಿ ಸಚಿವ ಶರದ್‌ ಪವಾರ್‌ ಅವರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ದೆಹಲಿಯಲ್ಲಿ ಎನ್‌ಸಿಪಿ ಕಾರ್ಯಕರ್ತರು ಪ್ರತಿಭಟಿಸಿದಕ್ಕೆ ಸಂಬಂಧಿಸಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹಜಾರೆ ಅವರು,ಮಹಾತ್ಮ ಗಾಂಧಿ ಅವರ ಸಮಾಧಿಯಲ್ಲಿ ತನ್ನ ವಿರುದ್ಧ ಘೋಷಣೆ ಕೂಗಿದವರು ನೈತಿಕ ಮೌಲ್ಯವನ್ನು ಹೊಂದಿಲ್ಲ ಎಂದು ತಿಳಿಸಿದ್ದಾರೆ.
ಲೋಕಪಾಲ್‌ನ್ನು ಸಂವಿಧಾನಿಕ ಸಂಸ್ಥೆಯನ್ನಾಗಿ ಮಾಡುವುದಕ್ಕೆ ಯಾವುದೇ ರೀತಿಯ ಆಕ್ಷೇಪವಿಲ್ಲ
ಪುಣೆ,ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಾಹುಲ್‌ ಗಾಂಧಿ ಅವರ ಸಲಹೆಯಂತೆ ಲೋಕಪಾಲ್‌ನ್ನು ಸಂವಿಧಾನಿಕ ಸಂಸ್ಥೆಯನ್ನಾಗಿ ಮಾಡುವುದಕ್ಕೆ ಯಾವುದೇ ರೀತಿಯ ಆಕ್ಷೇಪವಿಲ್ಲ ಎಂದು ಅಣ್ಣಾ ಹಜಾರೆ ಅವರು ಹೇಳಿದ್ದಾರೆ.
ಚುನಾವಣಾ ಆಯೋಗದ ರೀತಿಯಲ್ಲಿ ಲೋಕಪಾಲ್‌ ಸಂವಿಧಾನ ಸಂಸ್ಥೆಯೊಂದನ್ನು ಮಾಡುವುದಕ್ಕೆ ನನ್ನ ಆಕ್ಷೇಪವಿಲ್ಲ.ಆದರೆ ಅದರ ಕಾರ್ಯನಿರ್ವಹಣೆಯಲ್ಲಿ ಸರಕಾರ ಯಾವುದೇ ರೀತಿಯಲ್ಲಿ ಹಸ್ತಕ್ಷೇಪಮಾಡಬಾರದು.ಸುಮಾರು ಹತ್ತು ವರ್ಷಗಳ ಹಿಂದೆ ರೈಟ್‌ ಟು ರಿಜೆಕ್ಟ್ಗೆ ಸಂಬಂಧಿಸಿ ಸರಕಾರಕ್ಕೆ ಚುನಾವಣಾ ಆಯೋಗ ಪತ್ರ ಬರೆದಿತ್ತು,ಆದರೆ ಇನ್ನೂ ಇದು ಕಾನೂನಾಗಿಲ್ಲ ಎಂದು ಹಜಾರೆ ಇಂದಿಲ್ಲಿ ತಿಳಿಸಿದ್ದಾರೆ.ಪ್ರಸ್ತಾವಿತ ಲೋಕಪಾಲ್‌ ಮಸೂದೆಯಲ್ಲಿ ಪ್ರಧಾನಿಯವರನ್ನು ಸೇರಿಸಿಕೊಳ್ಳುವುದಕ್ಕೆ ಕೆಲವರು ಯಾಕೆ ವಿರೋಧಿಸುತ್ತಿದ್ದಾರೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ ಭ್ರಷ್ಟಾಚಾರ ವಿರೋಧಿ ಸಂಘಟಕ ಅಣ್ಣಾ ಹಜಾರು ಅವರು, ಒಂದು ವೇಳೆ ಪ್ರಧಾನಿ ಅವರನ್ನು ಸೇರಿಸಿಕೊಂಡಲ್ಲಿ ಲೋಕಪಾಲ್‌ ಸಂಸ್ಥೆಯ ಗೌರವ ಹೆಚ್ಚಲಿದೆ.
ಒಂದು ವೇಳೆ ಅವರು ಶುದ್ಧಹಸ್ತರಾಗಿದ್ದರೆ ಲೋಕಪಾಲ್‌ ಮಸೂದೆಯಲ್ಲಿ ಸೇರಿಸಿಕೊಳ್ಳುವುದಕ್ಕೆ ಯಾಕೆ ಅವರು ಹಿಂದೇಟುಹಾಕಬೇಕು ಎಂದು ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರದ ಮಾಜಿ ಸಚಿವ ಸುರೇಶ್‌ ಜೈನ್‌ ಶಾಮೀಲಾರುವ ಪ್ರಕರಣಕ್ಕೆ ಸಂಬಂಧಿಸಿ ಪುಣೆ ನ್ಯಾಯಾಲಯವೊಂದರಲ್ಲಿ ಹಾಜರಾಗಲು ಆಗಮಿಸಿದ ಹಜಾರೆ ಅವರು,ಕೆಳಮಟ್ಟದ ಅಧಿಕಾರಿಗಳ ಸಹಿತ ಲೋಕಪಾಲ್‌ ವಿಶಾಲ ಅಧಿಕಾರವನ್ನು ಹೊಂದಿರಬೇಕಿದೆ.ಇದರ ಮೂಲಕ ಭ್ರಷ್ಟ ಅಧಿಕಾರಿಗಳಿಂದ ಸಾಮಾನ್ಯ ಜನರು ಕಿರುಕುಳಕ್ಕೆ ಒಳಗಾಗುವುದಕ್ಕೆ ಪರಿಹಾರ ಒದಗಿಸಲು ಸಾಧ್ಯವಾಗಲಿದೆ ಎಂದು ಹಜಾರೆ ತಿಳಿಸಿದ್ದಾರೆ.
ಜನಲೋಕಪಾಲ್‌ ಮಸೂದೆಗೆ ಶೇ. 50ರಷ್ಟು ಸಂಸದರು ತಮ್ಮ ಬೆಂಬಲ ಸೂಚಿಸಿರುವುದಾಗಿ ಹಜಾರೆ ಹೇಳಿದ್ದಾರೆ.ಲೋಕಪಾಲ್‌ ಮಸೂದೆಗೆ ಸಂಬಂಧಿಸಿದ ಸ್ಥಾಯಿ ಸಮಿತಿ ತನ್ನ ಎಲ್ಲಾ ಬೇಡಿಕೆಗಳಿಗೆ ಗಮನಹರಿಸಿಲ್ಲ.ನಮ್ಮ ಮಸೂದೆಯನ್ನು ಹೆಚ್ಚಿನ ರಾಜಕೀಯ ಪಕ್ಷಗಳು ಬೆಂಬಲಸುತ್ತಿದ್ದು,ತೃಣಮೂಲ ಕಾಂಗ್ರೆಸ್‌ ಮತ್ತು ಬಿಎಸ್ಪಿ ಪಕ್ಷಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಿಲ್ಲ ಎಂದು ಅವರು ಹೇಳಿದ್ದಾರೆ.
ಸರಕಾರ ಒಂದು ವೇಳೆ ಚಳಿಗಾಲದ ಸಂಸದ್‌ ಅಧಿವೇಶನದಲ್ಲಿ ಲೋಕಪಾಲ್‌ ಮಸೂದೆ ಜಾರಿಗೊಳಿಸಲು ವಿಫಲವಾದಲ್ಲಿ ಡಿ. 27ರಿಂದ ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ನೂತನ ಉಪವಾಸ ಸತ್ಯಾಗ್ರಹ ಪ್ರಾರಂಭಿಸುವುದಾಗಿ ಹಜಾರೆ ಪುನರುಚ್ಚರಿಸಿದ್ದಾರೆ.
ಕಳೆದ ತಿಂಗಳು ಎನ್‌ಸಿಪಿ ಮುಖ್ಯಸ್ಥ,ಕೃಷಿ ಸಚಿವ ಶರದ್‌ ಪವಾರ್‌ ಅವರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ದೆಹಲಿಯಲ್ಲಿ ಎನ್‌ಸಿಪಿ ಕಾರ್ಯಕರ್ತರು ಪ್ರತಿಭಟಿಸಿದಕ್ಕೆ ಸಂಬಂಧಿಸಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹಜಾರೆ ಅವರು,ಮಹಾತ್ಮ ಗಾಂಧಿ ಅವರ ಸಮಾಧಿಯಲ್ಲಿ ತನ್ನ ವಿರುದ್ಧ ಘೋಷಣೆ ಕೂಗಿದವರು ನೈತಿಕ ಮೌಲ್ಯವನ್ನು ಹೊಂದಿಲ್ಲ ಎಂದು ತಿಳಿಸಿದ್ದಾರೆ.
Please follow and like us:
error