ಸರ್ವಜ್ಞ ಪ್ರಾಧಿಕಾರ ತ್ವರಿತ ಚಾಲನೆಗೆ ಆಗ್ರಹ.

ಕೊಪ್ಪಳ: ರಾಜ್ಯ ಸರಕಾರ ಸರ್ವಜ್ಞ ಪ್ರಾಧಿಕಾರಕ್ಕೆ ತ್ವರಿತ ಚಾಲನೆ ನೀಡಿ ಪ್ರಾಧಿಕಾರ ಕಾರ್ಯಾರಂಭ ಮಾಡುವಂತೆ ನೋಡಿಕೊಳ್ಳಬೇಕೆಂದು ಸರ್ವಜ್ಞ ಸ್ಮಾರಕಾಭಿವೃದ್ಧಿ ಹೋರಾಟ ಸಮಿತಿ  ಹಾವೇರಿ ಜಿಲ್ಲೆ, ಕರ್ನಾಟಕ ಪ್ರದೇಶ ಕುಂಬಾರರ ಸಂಘ(ರಿ) ಬೆಂಗಳೂರು, ಕರುನಾಡ ಕುಂಬಾರ ಪರಿವಾರ (ರಿ) ಬೆಂಗಳೂರು ಸಂಘಗಳು ಆಗ್ರಹಿಸಿವೆ. ಕುಂಬಾರ ಸಮುದಾಯದ ಸಂಘಟನೆಗಳ ಸದಸ್ಯರು ಜಂಟಿಯಾಗಿ ಸರ್ವಜ್ಞ ಸ್ಮಾರಕಾಭಿವೃದ್ಧಿ ಹೋರಾಟ ಸಮಿತಿಯನ್ನು ರಚಿಸಿಕೊಂಡಿದ್ದು, ಸಂಘಟನೆಯ ಮನವಿಯನ್ನು ರಾಜ್ಯ ಸರಕಾರ ಪುರಸ್ಕರಿಸಬೇಕು. ಬೇಡಿಕೆಗೆ ಸ್ಪಂದಿಸದಿದ್ದರೆ
ಹಾವೇರಿ ಜಿಲ್ಲೆಯ ಮಾಸೂರು ಹಾಗೂ ಅಬಲೂರು ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ ಕುಂಬಾರ ಕುಲಬಾಂಧವರ ಚಿಂತನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ನಾಗರೀಕತೆಯ  ಮೊಟ್ಟಮೊದಲ ಕುರುಹು ಕಂಡುಬಂದಿದ್ದು ಕುಂಬಾರರಲಿ. ಅಂತಹ ನಾಗರೀಕತೆಯನ್ನು ಜಗತ್ತಿಗೆ ಕೊಟ್ಟ ಕುಂಬಾರರ ಇಂದಿನ ಸ್ಥಿತಿ ಶೋಚನೀಯವಾಗಿದೆ. ನಮ್ಮನ್ನು ಶೋಷಣೆ ಮಾಡುವವರ ವಿರುದ್ಧ ತಿರುಗಿ ಬೀಳಲು ಸಿದ್ಧರಿದ್ದೇವೆ ಎಂದರು.
ಕರ್ನಾಟಕ ಪ್ರದೇಶ ಕುಂಬಾರರ ಸಂಘದ ಅಧ್ಯಕ್ಷ ಇಳಕಲ್‌ನ ಲಿಂಗರಾಜ ಎಸ್ ಕುಂಬಾರ ಮಾತನಾಡಿ, ಸರ್ವಜ್ಞನ ಪ್ರಾಧಿಕಾರ ರಚನೆ, ಅದರ ಅನುಷ್ಠಾನದ ಜೊತೆಗೆ ಸರ್ವಜ್ಞನ ಸಾಹಿತ್ಯವನ್ನು ದೇಶದ ಮೂಲೆ ಮೂಲೆಗೆ ಪಸರಿಸುವಂತಹ ಕ್ರಮವನ್ನು ಸರಕಾರ ಕೈಗೊಳ್ಳಬೇಕು. ಎಲ್ಲ ಭಾಷೆಗಳಿಗೂ ತ್ರಿಪದಿಗಳನ್ನು ಭಾಷಾಂತರಿಸಬೇಕಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹಿರೇಕೆರೂರಿನ ಬಿ.ಸಿ.ಪಾಟೀಲ್ ಅವರನ್ನು ಭೇಟಿ ಮಾಡಿ ಸರಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ಸರ್ವಜ್ಞ ಪ್ರಾಧಿಕಾರಕ್ಕೆ ಶೀಘ್ರ ಚಾಲನೆ ನೀಡಲು ಕ್ರಮ ಕೈಗೊಳ್ಳುವಂತೆ  ಮನವಿ ಮಾಡಿಕೊಳ್ಳಲಾಯಿತು.
ಕರುನಾಡ ಕುಂಬಾರ ಪರಿವಾರದ ಅಧ್ಯಕ್ಷ ರಾಜು ಎಸ್ ಕುಂಬಾರ, ಹಾವೇರಿ ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ರೇವಣಪ್ಪ ಚಕ್ರಸಾಲಿ, ಹಿರೇಕೆರೂರು ತಾಲೂಕು ಕುಂಬಾರರ ಸಂಘದ ಅಧ್ಯಕ್ಷ ಚನ್ನಬಸಪ್ಪ ಚಕ್ರಸಾಲಿ, ಸಾಹಿತಿ ಹಳ್ಳಪ್ಪ ಮಾಸ್ತರ್, ಸಂಶೋಧಕ ಮಂಜಪ್ಪ ಕುಂಬಾರ. ಮಾಸೂರು-ಅಬಲೂರು ಪಂಚಾಯಿತಿ ಸದಸ್ಯರುಗಳು. ಕೊಪ್ಪಳ, ವಿಜಯಪುರ, ಬಾಗಲಕೋಟೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಕುಂಬಾರ ಸಮಾಜದ ಮುಖಂಡರು ಗ್ರಾಮಸ್ತರು ಇತರರು ಹಾಜರಿದ್ದರು.

ರಾಜ್ಯಾದ್ಯಾಂತ ಉಗ್ರ ಹೋರಾಟ ಮಾಡುವುದಾಗಿ ಕುಂಬಾರ ಗುಂಡಯ್ಯ ಶರಣರು ಎಚ್ಚರಿಸಿದರು.

Leave a Reply