ಕೊಪ್ಪಳ ವಿಧಾನಸಭಾ ಕ್ಷೇತ್ರದ ಅಲ್ಪಸಂಖ್ಯಾತರ ಬೃಹತ್ ಸಮಾವೇಶ

ಕೊಪ್ಪಳ :  ದಿನಾಂಕ ೨೩-೯-೨೦೧೧ರಂದು ಸಂಜೆ ೪ ಗಂಟೆಗೆ ಕೊಪ್ಪಳ ನಗರದ ಸರಕಾರಿ ಬಾಲಕೀಯರ ಕಾಲೇಜು ಹತ್ತಿರದ ಸಾರ್ವಜನಿಕ ಮೈದಾನದಲ್ಲಿ ನಮ್ಮ ಪಕ್ಷ ಜನತಾದಳ( ಜಾತ್ಯಾತೀತ)ದ ವತಿಯಿಂದ ಕೊಪ್ಪಳ ಕ್ಷೇತ್ರದ ಅಲ್ಪಸಂಖ್ಯಾತರ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶಕ್ಕೆ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಹಾಗೂ ಪಕ್ಷದ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಈ ಸಮಾವೇಶದಲ್ಲಿ ಜನತೆ  ಹೆಚ್ಚಿನ  ಸಂಖ್ಯೆಯಲ್ಲಿ ಆಗಮಿಸಿ ಸಮಾವೇಶ ಯಶಸ್ವಿಗೊಳಿಸಿ ಶೋಭೆ ತರಬೇಕೆಂದು ಕೆ.ಎಂ.ಸಯ್ಯದ್ ಜೆಡಿಎಸ್ ಮುಖಂಡರು ಕೋರಿದ್ದಾರೆ
ಜಾಹೀರಾತು : 
Please follow and like us:
error