ವಿವಿಧ ತರಬೇತಿ ಅರ್ಜಿ ಆಹ್ವಾನ.

ಕೊಪ್ಪಳ, ಜು.೧೪ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ
ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ
ಮೋಟಾರ್ ರಿವೈಂಡಿಂಗ್ ಮತ್ತು ಮೊಬೈಲ್ ರಿಪೇರಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು,
ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. 
     ವಿಶೇಷ ಘಟಕ ಯೋಜನೆಯಡಿ ಮೊಬೈಲ್
ರಿಪೇರಿ ತರಬೇತಿಗೆ ಕೊಪ್ಪಳ-೧೦, ಗಂಗಾವತಿ-೨೦, ಕುಷ್ಟಗಿ-೨೦, ಕನಕಗಿರಿ-೧೦ ಸೇರಿದಂತೆ
ಒಟ್ಟು-೬೦ ಜನರನ್ನು ಆಯ್ಕೆ ಮಾಡಲಾಗುವುದು. ಮೋಟಾರ್‌ರಿವೈಂಡಿಂಗ್ ತರಬೇತಿಗೆ
ಕೊಪ್ಪಳ-೧೦, ಯಲಬುರ್ಗಾ-೨೦, ಕನಕಗಿರಿ-೧೦ ಒಟ್ಟು-೪೦ ಅಭ್ಯರ್ಥಿಗಳನ್ನು ಆಯ್ಕೆ
ಮಾಡಲಾಗುವುದು. ಅದೇ ರೀತಿ ಗಿರಿಜನ ಉಪಯೋಜನೆಯಡಿ ಮೊಬೈಲ್ ರಿಪೇರಿ ತರಬೇತಿಗೆ
ಕೊಪ್ಪಳ-೦೪, ಗಂಗಾವತಿ-೦೪, ಕುಷ್ಟಗಿ-೦೪ ಸೇರಿದಂತೆ ಒಟ್ಟು-೧೨ ಜನರನ್ನು ಆಯ್ಕೆ
ಮಾಡಲಾಗುವುದು. ಮೊಟಾರ್‌ರಿವೈಂಡಿಂಗ್ ತರಬೇತಿಗೆ ಯಲಬುರ್ಗಾ-೦೪ ಮತ್ತು ಕನಕಗಿರಿ-೦೪
ಒಟ್ಟು-೦೮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ತರಬೇತಿ ಸಮಯದಲ್ಲಿ ೧೫೦೦ ರೂ.
ಶಿಷ್ಯವೇತನ ನೀಡಲಾಗುವುದು. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಂಟಿ
ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಕೊಪ್ಪಳ, ದೂ: ೦೮೫೩೯-೨೩೧೫೪೮, ಕೆ.ಭೀಮಪ್ಪ,
ಸಹಾಯಕ ನಿರ್ದೇಶಕರು, ಮೊ: ೯೪೮೧೬೬೪೪೦೧ ಅಥವಾ ಎಂ.ಡಿ.ಚಿನಿವಾರ, ಪ್ರಥಮ ದರ್ಜೆ
ಸಹಾಯಕರು, ಮೊ:೯೯೦೨೮೯೬೭೮೮ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು 
ತಿಳಿಸಿದೆ.
Please follow and like us:

Leave a Reply