ಗಂಗಾವತಿಯ ಸಾಹಿತ್ಯ ಪರಿಷತ್ನ ಭವನದಲ್ಲಿ ಕರೆಯಲಾಗಿದ್ದ
ಸಾಚಾರ್ ವರದಿ ಜಾರಿಗಾಗಿ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡುತ್ತ ಭಾರತದಲ್ಲಿ ಮುಸ್ಲಿಮರನ್ನು ಸಂಶಯದಿಂದ ನೋಡುವುದು ಮತ್ತು ಬದ್ದತೆಯನ್ನು ಪ್ರಶ್ನಿಸುವುದು ಸರ್ಕಾರದ ಮಟ್ಟದಲ್ಲಿ ಕೆಲವು ಸೂಕ್ಷ್ಮ ಹುದ್ದೆಗಳಿಂದ ದೂರ ಇಡುತ್ತಿರುವುದು ಪರಿಪಾಠವಾಗಿದೆ ಮತ್ತು ಮುಸ್ಮಿಮರೆಂದರೆ ಇನ್ನು ಪರಕಿಯರಂತೆ ನೋಡುವ ಸ್ಥಿತಿ ಭಾರತದ ಮೂಲಭೂತವಾದಿಗಳಲ್ಲಿ ಹೆಚ್ಚಾಗುತ್ತಿರುವುದು ವಿಷಾದಕರ ಸಂಗತಿಯೆಂದು ಹೇಳಿದರು. ಮತ್ತು ಕೇವಲ ಧಾರ್ಮಿಕತೆಯಿಂದ ಮುಸ್ಲಿಂರು ಬದಲಾಗುವುದರ ಜೊತೆಗೆ ಸಾಮಾಜಿಕ ವ್ಯವಸ್ಥೆಯಲ್ಲಿ ಕೂಡ ಬದಲಾಗಬೇಕಾಗಿದೆ ಅದಕ್ಕಾಗಿ ಸಾಚಾರ್ ವರದಿಯನ್ನು ಯಥಾವತ್ತಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಬೇಕು ಅದಕ್ಕಾಗಿ ಮುಸ್ಲಿಮರೊಂದಿಗೆ ಪ್ರಗತಿಪರ ಇತರ ಧರ್ಮಿಯರು ಕೈಜೋಡಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ಬರಹಗಾರ ವಿಠಪ್ಪ ಗೋರಂಟ್ಲಿಯವರು ಮಾತನಾಡಿ ಮುಸ್ಲಿಮರು ಭಾವನಾತ್ಮಕ ವಿಷಯಕ್ಕೆ ಬೆಲೆ ಕೊಟ್ಟಷ್ಟು ಬದುಕಿನ ಹಕ್ಕಿಗಾಗಿ ಹೆಚ್ಚು ಗಮನ ಕೊಡಬೇಕಾಗಿದೆ. ಮತ್ತು ಸಂಘಟಿತರಾಗಿ ಸಾಚಾರ್ ವರದಿ ಜಾರಿಗೆ ಪ್ರತಿಭಟಿಸಬೇಕಾಗಿದೆ ಎಂದು ಹೇಳಿದರು. ಬಿ.ಹೆಚ್. ಗುತ್ತಿ ಹಿರಿಯ ನ್ಯಾಯವಾಗಿದಳ ಅಧ್ಯಕ್ಷತೆಯಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಡಿ.ಹೆಚ್. ಪೂಜಾರ್, ಖಾಜಿ ಮೀರ್ ಇಬ್ರಾಹಿಮ್ ಅಲಿ, ಜೆ. ಭಾರದ್ವಾಜ್, ಸಯ್ಯದ್ ಹಾಷ್ಮುದ್ದೀನ್, ಸಿರಾಜ್ ಬಿಸರಳ್ಳಿ, ಅಲ್ಲಾಗಿರಿರಾಜ್, ಟಿ. ರಾಘವೇಂದ್ರ, ಡಾ. ರತಿರಾವ್ ಮೈಸೂರು, ಮಲ್ಲಯ್ಯ (ಐಸಾ) ಇನ್ನಿತರರು ಉಪಸ್ಥಿತರಿದ್ದರು. ರಾಜಾಭಕ್ಷಿ ಕೊಪ್ಪಳ ಇವರು ಸಾಚಾರ್ ವರದಿ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಸಮಿತಿ ರಚನೆ: ಸಾಚಾರ್ ವರದಿ ಜಾರಿಗಾಗಿ ಗಂಗಾವತಿ ತಾಲ್ಲೂಕು ಮಟ್ಟದ ಸಂಚಾಲನಾ ಸಮಿತಿಯನ್ನು ಹಿರಿಯ ನ್ಯಾಯವಾದಿ ಬಿ.ಹೆಚ್ ಗುತ್ತಿಯವರ ಅಧ್ಯಕ್ಷತೆಯಲ್ಲಿ ರಚನೆ ಮಾಡಲಾಯಿತು.
೦೧. ಗೌಸ್ ಪೀರ್ವಕೀಲರು
೦೨. ಮಹ್ಮದ್ ಇಸ್ಮಾಯಿಲ್
೦೩. ಅಜ್ಮೀರ್ ನಂದಾಪುರ
೦೪. ಇಮಾಮ್ ಹುಸೇನ್(ಬಾಷಾ)
೦೫. ಬಿ.ಕೆ. ಮಹ್ಮದ್ ಅಲ್ತಾಫ್
೦೬. ಜೆ. ಭಾರದ್ವಾಜ್
೦೭. ಸಯ್ಯದ್ ಹಾಷಮುದ್ದೀನ್ ವಕೀಲರು
೦೮. ಡಾ. ಅಬ್ದುಲ್ ರೆಹಮಾನ್
Please follow and like us: