ಉಚಿತ ಶ್ರವಣಯಂತ್ರ ವಿತರಣೆ.

ಸಂಸ್ಥಾನ ಶ್ರೀಗವಿಮಠದಲ್ಲಿ ಜರುಗಲಿರುವ ಶ್ರೀ ಮ.ನಿ.ಪ್ರ.ಜ.ಲಿಂ. ಶ್ರೀಶಿವಶಾಂತವೀರ ಮಹಾಶಿವಯೋಗಿಗಳ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಅಂಗವಾಗಿ ಇತ್ತೀಚಿಗೆ  ೨೦.೦೩.೨೦೧೬ ಶ್ರವಣದೋಷ (ಕಿವುಡುತನ) ವಿರುವ ರೋಗಿಗಳ ತಪಾಸಣಾ ಶಿಬಿರವು ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ನಡೆದಿತ್ತು. ಈ ಶಿಬಿರದಲ್ಲಿ ಕೊಪ್ಪಳ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಶ್ರವಣದೋಷ(ಕಿವುಡುತನ) ವಿರುವ ರೋಗಿಗಳು ಭಾಗವಹಿಸಿದ್ದರು. ಈ ಶಿಬಿರದಲ್ಲಿ ಆಯ್ಕೆಯಾದ
ಫಲಾನುಭವಿಗಳಿಗೆ ಇಂದು  ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದ
ಆಸ್ಪತ್ರೆಯಲ್ಲಿ ಉಚಿತ ಶ್ರವಣ ಯಂತ್ರವನ್ನು ವಿತರಿಸುವ ಕಾರ್ಯಕ್ರಮ ಜರುಗಿತು.  ಇದಲ್ಲದೇ
ಹೃದಯರೋಗ ಹಾಗೂ ಕ್ಯಾನ್ಸರ್ ತಪಾಸಣಾ ಶಿಬಿರವು ಸಹ ಜರುಗುತ್ತಿದೆ. ಪ್ರಾಚಾರ್ಯ
ಡಾ.ಬಸವರಾಜ ಸವಡಿ, ಡಾ.ಸುರೇಶ ಹಕ್ಕಂಡಿ, ಡಾ.ಕೆ.ಬಿ ಹಿರೇಮಠ, ಡಾ.ಬಸವರಾಜ ಕರಮುಡಿ
ಮೊದಲಾದ ವೈದ್ಯ ತಂಡ ಶಿಬಿರವನ್ನು ಯಶಸ್ವಿಯಾಗುವಂತೆ  ಶ್ರಮಿಸಿದ್ದಾರೆ.

Please follow and like us:
error