You are here
Home > Koppal News > ಗುತ್ತಿಗೆ ಪೌರ ಕಾರ್ಮಿಕರಿಂದ ಭಿಕ್ಷಾಟನೆ.

ಗುತ್ತಿಗೆ ಪೌರ ಕಾರ್ಮಿಕರಿಂದ ಭಿಕ್ಷಾಟನೆ.

ಗಂಗಾವತಿ 19- ೧೦ ತಿಂಗಳಿನಿಂದ ೧೪೦ ಜನ ಗುತ್ತಿಗೆ ಪೌರ ಕಾರ್ಮಿಕರಿಗೆ ವೇತನ ಕೊಡಲು ಸತಾಯಿಸುತ್ತಿರುವ ನಗರಸಭೆ ಆಡಳಿತ ಮತ್ತು ಜನಪ್ರತಿನಿಧಿಗಳ ವಿರುದ್ಧ ಸಿಡಿದೆದ್ದ ಪೌರ ಕಾರ್ಮಿಕರು ನಗರದಲ್ಲಿ ಭಿಕ್ಷಾಟನೆ ಮಾಡುವ ಮೂಲಕ ತಮ್ಮ ಧಿಕ್ಕಾರವನ್ನು ತೋರಿಸಿದ್ದಾರೆ ೧೦ ತಿಂಗಳಿನಿಂದ, ತಿಂಗಳಿಗೆ ರೂ. ೮,೦೦೦/- ರಂತೆ ಎಂಬತ್ತು ಸಾವಿರ ರೂಪಾಯಿ ಪ್ರತಿ ಕಾರ್ಮಿಕನಿಗೆ ಬಾಕಿಯಾದ ನಗರಸಭೆ ಒಟ್ಟು ರೂ. ೧,೧೨,೦೦,೦೦೦/- (ಒಂದು ಕೋಟಿ ಹನ್ನೆರಡು ಲಕ್ಷ) ಬಾಕಿಇದೆ. ನಗರಸಭೆಯಲ್ಲಿ ಜನಪ್ರತಿನಿಧಿಗಳಾಗಿ ಮೂವತ್ತೊಂದು ಜನ ಸದಸ್ಯರು ಇದ್ದಾರೆ. ಮತ್ತು ಇವರೊಂದಿಗೆ ಗಂಗಾವತಿ ಶಾಸಕ, ಸಂಸದ ಸ್ಥಳೀಯ ಸದಸ್ಯರ ಪ್ರತಿನಿಧಿಯಾಗಿರುವ ಮೇಲ್ಮನೆ ಸದಸ್ಯ ಇವರೆಲ್ಲರೂ ನಗರಸಭೆಯಲ್ಲಿ ಸದಸ್ಯರಾಗಿರುತ್ತಾರೆ. ಕಾರ್ಮಿಕರಿಗೆ ದೊಡ್ಡಮಟ್ಟದಲ್ಲಿ ಅನ್ಯಾಯವಾಗಿ ಶೋಷಣೆಯಾಗುತ್ತಿದ್ದರೂ ಜನಪ್ರತಿನಿಧಿಗಳು ಚಕಾರಶಬ್ಧವೆತ್ತದೇ ಇರುವುದು ಮತ್ತು ಕಾನೂನುಬಾಹಿರವಾಗಿ ೧೪೦ ಜನರನ್ನು ದುಡಿಸಿಕೊಳ್ಳುತ್ತಿರುವುದು ಗಮನಿಸಿದರೆ ನಗರಸಭೆ ಕಾರ್ಮಿಕರು ಈ ದೇಶದ ಎರಡನೇ ತರಗತಿಯ ಪೌರರಂತೆ ಸರಕಾರ ನೋಡುತ್ತಾ ಇದೆ ಎಂದು ಬಹಿರಂಗವಾಗಿದೆ.  ಕಂಗಾಲಾದ ಗುತ್ತಿಗೆ ಪೌರಕಾರ್ಮಿಕರು ಬೇರೆ ದಾರಿಯಿಲ್ಲದೇ ಭಿಕ್ಷಾಟನೆ ಕಾನೂನುಬಾಹಿರವಾಗಿದ್ದರೂ ಜನಪ್ರತಿನಿಧಿಗಳಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ  ಬಂಡೆದ್ದು ಭಿಕ್ಷಾಟನೆ ಮಾಡಿದ್ದಾರೆ. ಈ ಭಿಕ್ಷಾಟನೆಯಲ್ಲಿ ಎಂ.ಏಸಪ್ಪ, ಸುಂದರರಾಜ್, ಪರಶುರಾಮ, ನಾಗರಾಜ, ಮಾಯಮ್ಮ, ಗಿಡ್ಡಪ್ಪ, ಆಲಂ, ಗೋವಿಂದ, ಹುಸೇನಮ್ಮ, ಮುಮ್ತಾಜ್, ಬುಡ್ಡಪ್ಪ ಸೇರಿ ೧೪೦ ಜನ ಪೌರ ಕಾರ್ಮಿಕರು ಪಾಲ್ಗೊಂಡಿದ್ದರು. ಭಿಕ್ಷಾಟನೆಯಲ್ಲಿ ರೂ. ೫,೦೫೦/- ಗಳನ್ನು ಸಾರ್ವಜನಿಕರಿಂದ ಭಿಕ್ಷೆ ರೂಪದಲ್ಲಿ ಸಂಗ್ರಹವಾಯಿತು. ೨೦ ರಂದು ಪ್ರಗತಿಪರ ಸಂಘಟನೆಗಳ ಮುಖಂಡರು ಮತ್ತು ಕಾರ್ಮಿಕ ಸಂಘಟನೆಗಳ ಜಿಲ್ಲಾ ಮುಖಂಡರು ಸಭೆ ಸೇರಿ ಪೌರ ಕಾರ್ಮಿಕರಿಗೆ ನ್ಯಾಯ ಕೊಡಿಸಲು ಮುಂದೆ ನಡೆಸಬೇಕಾದ ಹೋರಾಟಗಳ ರೂಪುರೇಷೆಗಳನ್ನು ನಿರ್ಧರಿಸಲಿದ್ದಾರೆಂದು ಭಾರಧ್ವಾಜ್ ತಿಳಿಸಿದ್ದಾರೆ.

Leave a Reply

Top