fbpx

ಅರ್ಥಪೂರ್ಣ ಭಕ್ತ ಕನಕದಾಸರ ಜಯಂತಿ ಆಚರಣೆ- ಡಾ. ಪ್ರವೀಣಕುಮಾರ್ ಜಿ.ಎಲ್.

ಕೊಪ್ಪಳ, ನ.೧೭ (ಕ ವಾ) ಭಕ್ತ ಶ್ರೇಷ್ಠ ಕನಕದಾಸರ ಜಯಂತಿಯನ್ನು ನ. ೨೮ ರಂದು ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಸಡಗರ ಸಂಭ್ರಮದ ಜೊತೆಗೆ ಅರ್ಥಪೂರ್ಣ ರೀತಿಯಲ್ಲಿ ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲಾಗುವುದು ಎಂದು ಕೊಪ್ಪಳ ಪ್ರಭಾರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಹೇಳಿದರು.
     ಭಕ್ತ ಕನಕದಾಸರ ಜಯಂತಿ ಆಚರಣೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಭಕ್ತ ಶ್ರೇಷ್ಠ ಕನಕದಾಸರು ಇಡೀ ಜಗತ್ತಿಗೆ ಅನ್ವಯವಾಗುವ ತತ್ವ ಸಂದೇಶಗಳನ್ನು ನೀಡಿದ್ದಾರೆ.  ಅವರ ಆದರ್ಶ ಹಾಗೂ ಅವರು ನಡೆದುಕೊಂಡು ಬಂದ ರೀತಿ ನೀತಿಗಳನ್ನು ಸಾರ್ವಜನಿಕರಿಗೆ ಮುಟ್ಟಿಸುವ ರೀತಿಯಲ್ಲಿ ಅವರ ಜಯಂತಿ ಆಚರಣೆಯನ್ನು ಮಾಡಬೇಕಿದೆ.  ಕನಕದಾಸರ ಜಯಂತಿ ಅಂಗವಾಗಿ ನ. ೨೮ ರಂದು ಬೆಳಿಗ್ಗೆ ೯ ಗಂಟೆಗೆ ನಗರದ ಸಿರಸಪ್ಪಯ್ಯ ಮಠ ಆವರಣದಿಂದ ಕನಕದಾಸರ ಭಾವಚಿತ್ರ ಸಹಿತ ಮೆರವಣಿಗೆಯನ್ನು ಪ್ರಾರಂಭಿಸಲಾಗುವುದು.  ಇದಕ್ಕೂ ಪೂರ್ವದಲ್ಲಿ ಬಸ್‌ಸ್ಟ್ಯಾಂಡ್ ಬಳಿಯ ಕನಕದಾಸರ ವೃತ್ತದಲ್ಲಿನ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಗುವುದು.  ಮೆರವಣಿಗೆಯಲ್ಲಿ ಡೊಳ್ಳು ಕುಣಿತ ಸೇರಿದಂತೆ ಹಲವಾರು ಜಾನಪದ ಕಲಾ ತಂಡಗಳು ಪಾಲ್ಗೊಳ್ಳಲಿದ್ದು, ಮೆರವಣಿಗೆಯನ್ನು ಆಕರ್ಷಕಗೊಳಿಸಲಿದೆ.  ಮೆರವಣಿಗೆಯು ಸಿರಸಪ್ಪಯ್ಯನ ಮಠ ಬಳಿಯಿಂದ ಗಡಿಯಾರ ಕಂಬ, ಜವಾಹರ ರಸ್ತೆ, ಅಶೋಕ ವೃತ್ತ ಮೂಲಕ ಸಾಹಿತ್ಯ ಭವನ ತಲುಪಲಿದೆ.  ಅಂದು ಬೆಳಿಗ್ಗೆ ೧೧-೩೦ ಗಂಟೆಗೆ ಸಾಹಿತ್ಯ ಭವನದಲ್ಲಿ ಭಕ್ತ ಕನಕದಾಸರ ಜಯಂತಿ ಸಮಾರಂಭ ಜರುಗಲಿದ್ದು, ಗಣ್ಯಾತಿಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.  ಕನಕದಾಸರ ಜೀವನ ಹಾಗೂ ಅವರ ತತ್ವಾದರ್ಶಗಳ ಬಗ್ಗೆ ಇರಕಲ್ಲಗಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕ
     ಭಕ್ತ ಕನಕದಾಸರ ಜಯಂತಿ ಅಂಗವಾಗಿ ಅಂದು ಬೆಳಿಗ್ಗೆ ಜರುಗುವ ಮೆರವಣಿಗೆ ನಿಮಿತ್ಯ ರಸ್ತೆ ಸ್ವಚ್ಛತೆ, ಅಗತ್ಯ ಕುಡಿಯುವ ನೀರಿನ ವ್ಯವಸ್ಥೆ, ಹಾಗೂ ಕನಕದಾಸರ ವೃತ್ತದ ಬಳಿ ಸ್ವಚ್ಛತೆ ಕೈಗೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ನಗರಸಭೆ ಪೌರಾಯುಕ್ತರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
     ಸಭೆಯಲ್ಲಿ ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ, ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದಾರ್, ಡಿಡಿಪಿಐ ಶ್ಯಾಮಸುಂದರ್, ನಗರಠಾಣೆ ಪಿಐ ಸತೀಶ್ ಪಾಟೀಲ್, ವಿವಿಧ ಸಮಾಜದ ಮುಖಂಡರುಗಳಾದ ಜಡಿಯಪ್ಪ ಬಂಗಾಳಿ, ರಾಜಶೇಖರ ಹಿಟ್ನಾಳ್, ಶಿವಾನಂದ ಹೊದ್ಲೂರು, ಮಂಜುನಾಥ ಗೊಂಡಬಾಳ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ನ್ನಡ ಪ್ರಾಧ್ಯಾಪಕರಾದ ಡಾ. ಹುಲಿಗೆಮ್ಮ ಅವರು ವಿಶೇಷ ಉಪನ್ಯಾಸ ನೀಡುವರು.  ಕನಕದಾಸರ ಕುರಿತು ಏರ್ಪಡಿಸಲಾಗುವ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಸಲಾಗುವುದು.  ಎಲ್ಲ ಸಮುದಾಯದ ಮುಖಂಡರು, ಸಂಘಟನೆಗಳು ಭಕ್ತ ಕನಕದಾಸರ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡು, ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಮನವಿ ಮಾಡಿದರು.

Please follow and like us:
error

Leave a Reply

error: Content is protected !!