ವಿಶ್ವದಲ್ಲೇ ಮೋದಿಯವರು ಭಾರತವನ್ನು ಎತ್ತರಕ್ಕೆ ಬೆಳಸಲಿದ್ದಾರೆ – ಹಾಲಪ್ಪ ಆಚಾರ

 ಬಿಜೆಪಿಯೇತರ ಸರ್ಕಾರಗಳು ಇದುವರೆಗೂ ನೀಡಿದ ಆಡಳಿತವನ್ನು ಬೇಸತ್ತು ಜನರು ಕಳೆದ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಅಭೂತಪೂರ್ವ ಯಶಸ್ಸು ನೀಡಿ ಮೂರು ದಶಕಗಳ ನಂತರ ಏಕೈಕ ಆಡಳಿತ ಪಕ್ಷವಾಗಿ ಹೊರಹೊಮ್ಮಿಸಿದ್ದಾರೆ ಎಂದು ವಿದಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ ಹೇಳಿದರು.
ಅವರಿಂದು ನಗರದ ಜಿಲ್ಲಾ ಬಿಜೆಪಿ ಕಾರ್ಯಲಯದಲ್ಲಿ ಹಮ್ಮಿಕೊಂಡಿದ್ದ ೬೮ನೇ ಸ್ವಾತಂತ್ರೊತ್ಸವದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದರು. 
ಪ್ರಧಾನಿ ನರೇಂದ್ರ

ಮೋದಿಯವರು ದೇಶದ ಆಡಳಿತ ಚುಕ್ಕಾಣಿ ಹಿಡಿದು ೭೫ ದಿನಗಳಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡು ಭಾರತ ದೇಶವನ್ನು ಉಜ್ವಲದತ್ತಾ ಕೊಂಡೊಯ್ಯಲು ಪ್ರಯತ್ನಸುತ್ತಿದ್ದಾರೆ, ರಾಷ್ಟ್ರದ ಗಡಿ ದೇಶಗಳಿಗೆ ಭೇಟಿ ನೀಡಿ ಭಯೋತ್ಪಾದನೆ ಮಾಡುವ ದೇಶಗಳಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ, ಮೋದಿಯವರು ದೇಶದಲ್ಲಿ ಅಗತ್ಯ ವಸ್ತುಗಳ ಬೇಲೆ ಏರಿಕೆ ನಿಯಂತ್ರಣ ಮಾಡುವ ಮೂಲಕ ಬಡತನವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಔದ್ಯೊಗಿಕವಾಗಿ, ಆರ್ಥಿಕವಾಗಿ, ಕೃಷಿ, ಸಾಮಾಜಿಕವಾಗಿ ಮುನ್ನೆಡೆಯಲು ಅನೇಕ ಜನಪರ ಯೋಜನೆಗಳನ್ನು ಹಾಕಿಕೊಂಡು ವಿಶ್ವದಲ್ಲೇ  ಭಾರತವನ್ನು ಮಾದರಿ ದೇಶವನ್ನಾಗಿ ನಿರ್ಮಿಸಲು ಪಣ ತೊಟ್ಟದ್ದಾರೆ ಎಂದು ಹೇಳಿದರು

ಇಂದು ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರಾದ ಸಂಗಪ್ಪ ವಕ್ಕಳದ, ಡಾ|| ಮಲ್ಲಿಕಾರ್ಜುನ ರಾಂಪುರ, ರಾಘವೇಂದ್ರ ಪಾನಗಂಟಿ, ವಿ.ಎಮ್.ಭೂಸನೂರಮಠ, ಅಪ್ಪಣ್ಣ ಪದಕಿ, ಪೀರಾಹುಸೇನ ಹೊಸಳ್ಳಿ, ರಾಜು ಭಾಕಳೆ, ಡಾ|| ಕೊಟ್ರೇಶ ಶೇಡ್ಮಿ, ಗೀರಿಶ ಕಣವಿ, ದೇವರಾಜ ಹಾಲಸಮುದ್ರ, ಮಲ್ಲಪ್ಪ ಬೇಲೇರಿ, ಮುದಿಯಪ್ಪ ತಿಗರಿ, ಪರಮಾನಂದ ಯಾಳಗಿ, ವೀರುಪಾಕ್ಷಪ್ಪ ನವೋದಯ, ಗವಿಸಿದ್ದಪ್ಪ ಕಂದಾರಿ, ಈರಣ್ಣ ಸಂಕ್ಲಾಪುರ, ಮರಿಶಾಂತವೀರಸ್ವಾಮಿ ಚಕ್ಕಡಿ, ಹಾಲೇಶ ಕಂದಾರಿ, ನೀಲಪ್ಪ ಮೇಟಿ, ಗವಿಸಿದ್ದಪ್ಪ ಗಿಣಿಗೇರಿ, ನಗರಸಭಾ ಸದಸ್ಯರಾದ ವಿಜಯಾ ಹಿರೇಮಠ  ಶ್ಯಾಮಲಾ ಕೊನಾಪುರ, ಸುವರ್ಣ ನಿರಲಗಿ, ವಾಣಿಶ್ರೀ ಹಿರೇಮಠ ಶೋಭಾ ನಗರಿ, ಮಹಾದೇವಪ್ಪ ಜವಳಿ, ನಿರ್ಮಾಲಾ ಮಾರುತಿ ಕಾರಟಗಿ, ಜೀನಾಭಾಯಿ ಜಕ್ಕಲಿ, ಗವಿಸಿದ್ದಪ್ಪ ಚಿನ್ನೂರು, ಪ್ರಾಣೆಶ ಮಾದನೂರ, ಬಸವರಾಜ ನಿರಲಗಿ, ನಾಮದೇವ ಜಕ್ಕಲಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Please follow and like us:
error