ಜಿಲ್ಲಾ ಬಿಜೆಪಿ ಘಟಕಕ್ಕೆ ವಿವಿಧ ಪದಾಧಿಕಾರಿಗಳ ನೇಮಕ

 ಕೊಪ್ಪಳ ಜಿಲ್ಲಾ ಬಿಜೆಪಿ ಪಕ್ಷೆಕ್ಕೆ ಸೇವೆ ಸಲ್ಲಿಸಿದ  ಕಾರ್ಯಕರ್ತರನ್ನು ನೇಮಕಮಾಡಲಾಗಿದ್ದು ಮುಂಬರುವ ದಿನಗಳಲ್ಲಿ ಪಕ್ಷ ಸಂಘಟನೆಗೆ ಶಕ್ತಿ ತುಂಬುವಲ್ಲಿ ಹೆಚ್ಚಿನ ಸಮಯವನ್ನು ನೀಡಿ ಜಿಲ್ಲೆಯಲ್ಲಿ ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ಪದಾಧಿಕಾರಿಗಳನ್ನು ಆಯ್ಕೆಮಾಡಿ ನೇಮಕಾತಿ ಆದೇಶ ಪತ್ರವನ್ನು ಜಿಲ್ಲಾ ಅಧ್ಯಕ್ಷ ಸಂಸದ ಸಂಗಣ್ಣ ಕರಡಿ ನೀಡಿದ್ದಾರೆ
             ಪ್ರಶಿಕ್ಷಣ ಪ್ರಕೋಷ್ಠ ಜಿಲ್ಲಾ ಸಂಚಾಲಕರಾಗಿ ಅಪ್ಪಣ್ಣ ಪದಕಿ, ಜಿಲ್ಲಾ ಎಸ್.ಟಿ ಮೋರ್ಚಾ ಅಧ್ಯಕ್ಷರಾಗಿ ನಾಗರಾಜ ಬಿಲ್ಗಾರ, ಜಿಲ್ಲಾ ಎಸ್ ಟಿ. ಮೋರ್ಚಾ ಉಪಾಧ್ಯಾಕ್ಷರಾಗಿ ಮಲ್ಲಪ್ಪ ಬೇಲೇರಿ,ಎಸ್.ಟಿ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯರಾಗಿ ಮುಕುಂದರಾವ್ ಭವಾನಿಮಠ, ಜಿಲ್ಲಾ ಭಾರತೀಯ ಜನತಾ ಪಕ್ಷದ ಉಪಾಧ್ಯರಾಗಿ ಮಂಜುನಾಥ ಅಂಗಡಿ, ಜಿಲ್ಲಾ ಗೋ ಸಂರಕ್ಷಣಾ ಪ್ರಕೋಷ್ಠಕ ಸಂಚಾಲಕರಾಗಿ ಗೌತಮ ಕುಮಾರ್ ಮೋಹನಲಾಲ್ ಜೈನ್, ಕೊಪ್ಪಳ ಗ್ರಾಮಾಂತರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಬಸವರೆಡ್ಡಿ ನಿಂಗರಡ್ಡಿ ಶಿವನಗೌಡ್ರ ಸಾ|| ಬೆಳವಿನುಳ, ಇವರನ್ನು ಈಗಿನಿಂದಲೇ ಜಾರಿಗೆ ಬರುವಂತೆ ಜಿಲ್ಲಾ ಅಧ್ಯಕ್ಷರು ನೇಮಕ ಮಾಡಿದ್ದಾರೆ ಎಂದು ಮಾಧ್ಯಮ ಪ್ರತಿನಿಧಿ ಪರಮಾನಂದ ಯಾಳಗಿ  ಳಿಸಿದ್ದಾರೆ.
Please follow and like us:
error

Related posts

Leave a Comment