ಬೆಳಕಿನ ಹಬ್ಬ ದೀಪಾವಳಿಯನ್ನು ಮಾಲಿನ್ಯ ಮುಕ್ತತೆಯಿಂದ ಆಚರಿಸಿ

 ದೀಪಾವಳಿ ಬೆಳಕಿನ ಹಬ್ಬವಾಗಿದ್ದು ಇದು ಮನೆ ಮತ್ತು ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ನೀಡುವ ಹಬ್ಬ. ಈ ಹಬ್ಬವು ಮಕ್ಕಳ ನಲಿವಿನೊಂದಿಗೆ ಅವರು ಬಳಸುವ ವಿವಿ ರೀತಿಯ  ಪಟಾಕಿಗಳಿಂದ ಉಂಟಾಗುವ ಶಬ್ಧದಿಂದ ಹೆಚ್ಚಿನ ಆನಂದ ಸಂತೋಷವನ್ನು ಪಡುತ್ತಾರೆ. ಇದರ ಜೊತೆಯಲ್ಲಿಯೇ ಹಿರಿಯರಿಗೆ ಕಿರಿ ಕಿರಿಯಾದರೂ ಮಕ್ಕಳ ಸಂತೋಷಕ್ಕೆ ಅಡ್ಡಿ ಪಡಿಸದೇ ತಾವು ಪಾಲ್ಗೊಳುವುದು ಅನಾದಿಕಾಲದಿಂದಲೂ ಬಂದಂಥ ಸಂಪ್ರದಾಯವಾಗಿರುತ್ತದೆ. ಬೆಳಕಿನ ಹಬ್ಬವಾದ ದೀಪಾವಳಿಯನ್ನು ಮಾಲಿನ್ಯ ಮುಕ್ತತೆಯಿಂದ ಹಾಗೂ ಶಬ್ಧ ಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಬೇಕೆಂದು ಪರಿಸರ ಅಧಿಕಾರಿ ಬಿ.ರುದ್ರೇಶ ಅವರು ತಿಳಿಸಿದ್ದಾರೆ. 
    ಭಾರತೀಯರು ದೀಪಾವಳಿಯ ಹಬ್ಬವನ್ನು ದೇಶದಾದ್ಯಂತ ಅತೀ ವಿಜೃಂಭಣೆಯಿಂದ ಆಚರಿಸುತ್ತಾರೆ. ಆದರೆ ಸಂತೋಷದ ಸಮಯದಲ್ಲಿ ಉಂಟಾಗುವ ಶಬ್ಧ ಮಾಲಿನ್ಯ, ವಾಯು ಮಾಲಿನ್ಯ ಮತ್ತು ಘನ ತ್ಯಾಜ್ಯವು ವರ್ಷದಿಂದ ವರ್ಷಕ್ಕೂ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರವು ವಿವಿಧ ರೀತಿಯ ಕಾನೂನುಗಳನ್ನು ಹೊರಡಿಸಿರುತ್ತದೆ ಮತ್ತು ಪೂರಕವಾಗಿ ಮಂಡಳಿಯು ಸಾರ್ವಜನಿಕರಲ್ಲಿ  ಅದರಲ್ಲಿಯೂ ಮುಖ್ಯವಾಗಿ ಮಕ್ಕಳಿಗೆ ಅರಿವು ಮೂಡಿಸುವ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತದೆ.
    ಬೆಳಕಿನ ಹಬ್ಬವಾದ ದೀಪಾವಳಿಯು ಪ್ರತಿ ವರ್ಷದಂತೆ ಈ ವರ್ಷವು ಆಚರಣಿಗೊಳ್ಳುತ್ತದೆ, ಕಳೆದ ಐದು ವರ್ಷಗಳ ದೀಪಾವಳಿ ಹಬ್ಬಗಳ ಆಚರಣಿಗಳ ಸಮಯದಲ್ಲಿ ಉಂಟಾಗುವ ಅವಘಡಗಳನ್ನು  ಅವಲೋಕಿಸಿದಾಗ ಒಂದಿಲ್ಲ ಒಂದು ಪ್ರದೇಶದಲ್ಲಿ ಪಟಾಕಿಗಳ ಸುಡುವಿಕೆಯಿಂದಾಗಿ ಅನೇಕರ ಬಾಳು ಅಂಧಕಾರವಾಗಿರುವುದಲ್ಲದೇ ಸಮೀಕ್ಷೆಯನ್ವಯ ಇಂತಹ ಅವಘಡಗಳ ಪ್ರಮಾಣವು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು ನೋವಿನ ಸಂಗತಿಯಾಗಿರುತ್ತದೆ. ಇಂತಹ ಅಬ್ಬರದ ಅಪಾಯಕಾರಿ ಪಟಾಕಿಗಳು ನಾಗರೀಕರ ಶಾಂತಿ ಕದಡುವುದರೊಂದಿಗೆ  ಪರಿಸರ ಮಾಲಿನ್ಯ ಹಾಗೂ ವಿಷಕಾರಿ ರಸಾಯನಿಕ ತ್ಯಾಜ್ಯದ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ.
ಇದರ ಜೊತೆಯಲ್ಲಿಯೇ ಶಬ್ಧ ಮಾಲಿನ್ಯವನ್ನು ನಿಯಂತ್ರಿಸಲು ಪರಿಸರ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪಟಾಕಿಗಳಿಗೆ ಸಂಬಂಧಿಸದಂತೆ ಹೊರಡಿಸಿದ ಮಾರ್ಗಸೂಚಿಯಂತೆ ೧೨೫ ಡೆಸಿಬಲ್ಸ ಅಥವಾ ೧೪೫ ಡೆಸಿಬಲ್ಸ ಗಿಂತ ಹೆಚ್ಚು ಶಬ್ಧ ಮಾಲಿನ್ಯ ಉಂಟುಮಾಡುವ ಅದರಲ್ಲಿಯೂ ೪ ಮೀಟರ್ ಅಂತರದಲ್ಲಿ ಬಳಸುವುದನ್ನು ನಿಷೇಧಿಸಲಾಗಿರುತ್ತೆ. ಇದನ್ನು ಕಟ್ಟು ನಿಟ್ಟಾಗಿ ಪಾಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ.
     ಸರ್ವೋಚ್ಛ ನ್ಯಾಯಾಲಯವು ಪಟಾಕಿಗಳಿಗೆ ಸಂಬಂಧಿಸಿದಂತೆ  ಹಲವಾರು ನಿರ್ದೇಶನಗಳನ್ನು ಸಹ ನೀಡಿರುತ್ತದೆ. ಸದರಿ ಆದೇಶದನ್ವಯ ರಾತ್ರಿ ೧೦ ಘಂಟೆಯಿಂದ ಬೆಳಿಗ್ಗೆ ೬ ಘಂಟೆಯೊಳಗೆ ಪಟಾಕಿಗಳ ಸ್ಪೋಟವನ್ನು ಸಂಪೂರ್ಣವಾಗಿ ನಿಷೇಧಿಸಿರುತ್ತದೆ. ದೀಪಾವಳಿ ಹಬ್ಬವನ್ನು ಸಡಗರ ಸಂಭ್ರಮ ಸಂತೋಷದಿಂದ ಆಚರಿಸುವಾಗ ಅಬ್ಬರದ ಅಪಾಯಕಾರಿ ಪಟಾಕಿಗಳನ್ನು ಬಳಸದೇ ನಾಗರೀಕರ ಹಾಗೂ ಸುತ್ತಮುತ್ತಲಿನ ಪರಿಸರದ ಶಾಂತತೆಯನ್ನು ಕದಡದೆ ಸರ್ಕಾರವು ಸಾರ್ವಜನಿಕ ಹಿತದೃಷ್ಟಿಯಿಂದ ನಿಗದಿ ಪಡಿಸಿದ ೧೨೫  ಡೆಸಿಬಲ್ಸ್ ಗಳಿಗಿಂತ ಕಡಿಮೆ ಪ್ರಮಾಣದ ಶಬ್ದದಿಂದ ಶಬ್ದದಿಂದ ಕೂಡಿದ ಪಟಾಕಿಗಳ ಬಳಕೆಯನ್ನು  ಮಾತ್ರ ಮಾಡುವುದಲ್ಲದೇ ಕೇವಲ ಬೆಳಕು ಚೆಲ್ಲುವ ಮಿತಕಾರಿ ಪಟಾಕಿಗಳನ್ನು ಬಳಸಿ ಕುಟುಂಬದವರೊಂದಿಗೆ ಸಂತೋಷ ಹಚ್ಚಿಕೊಳ್ಳಬೇಕೆಂದು ಮತ್ತೊಮ್ಮೆ ವಿನಂತಿಸುತ್ತಾ ಪ್ರಸ್ತುತ ಆಚರಿಸುವ ದೀಪವಳಿ ಹಬ್ಬವು ಎಲ್ಲರ ಬಾಳಿನ ಅಂಧಕಾರವನ್ನು ಹೊಡೆದೋಡಿಸಿ ಬೆಳಕನ್ನು ಚೆಲ್ಲಲಿ ಎಂದು ಶುಭ ಹಾರೈಸಲಾಗಿದೆ.

Leave a Reply