You are here
Home > Koppal News > ಕನ್ನಡ ನಾಡಿನ ಸಂಸ್ಕೃತಿ ವಿಶ್ವಕ್ಕೆ ಮಾದರಿಯಾಗಿದೆ: ಅಲ್ಲಮಪ್ರಭ ಬೆಟ್ಟದೂರ

ಕನ್ನಡ ನಾಡಿನ ಸಂಸ್ಕೃತಿ ವಿಶ್ವಕ್ಕೆ ಮಾದರಿಯಾಗಿದೆ: ಅಲ್ಲಮಪ್ರಭ ಬೆಟ್ಟದೂರ

ಕೊಪ್ಪಳ: ಕನ್ನಡ ನಾಡಿನ ಸಂಸ್ಕೃತಿಯು ವಿಶ್ವಕ್ಕೆ ಮಾದರಿಯಾಗಿದೆ ಎಂದು ಹಿರಿಯ ಬಂಡಾಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರ ಹೇಳಿದರು.
    ಅವರು ನಗರದ ಬಾಲಕಿಯ ಮೈದಾನದಲ್ಲಿ ತಾಂಡವ ಕಲಾನಿಕೇತ ಹಾಗೂ ಬೈರವಿ ಕಲಾನಿಕೇತನ ಸಂಸ್ಥೆ ಬೆಂಗಳೂರು ವತಿಯಿಂದ ಹಮ್ಮಿಕೊಂಡಿರುವ ೫ ದಿನಗಳ ಸಂಸ್ಕೃತಿ-ದರ್ಪಣ ಜಿಲ್ಲಾ ಉತ್ಸವ ಕಾರ್ಯಕ್ರದ ಎರಡನೇಯ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ,ಕನ್ನಡ ನಾಡು ಹಲವು ರೀತಿಯ ಸಂಸ್ಕೃತಿಯ ಪ್ರಕಾರಗಳನ್ನು ಒಳಗೊಂಡ ಬಿಡಾಗಿದೆ.ಇಂತಹ ವಿಭಿನ್ನ ಸಂಸ್ಕೃತಿಯ ಬಿಡಾದ ಕರ್ನಾಟಕವು ತನ್ನ ಸಂಸ್ಕೃತಿಯ ವೈವಿಧ್ಯತೆಯಿಂದ ಇಡಿ ವಿಶ್ವಕ್ಕೆ ಮಾದರಿಯಾಗಿದೆ.ನಾಡಿನ ಸಂಸ್ಕೃತಿಯನ್ನು ಉಳಿಸುವ ಕಾರ್ಯವು ಕೇವಲ ಸಂಘ-ಸಂಸ್ಥೆಗಳದಲ್ಲಾ ಅದು ನಾಡಿನ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.ನಾಡಿನ ವಿಚಾರ ಬಂದಾಗ ಎಲ್ಲರೂ ಬಗ್ಗಟ್ಟನ್ನು ಪ್ರದರ್ಶಿಸಬೇಕಿದೆ.ಅಲ್ಲದೆ ಕನ್ನಡ ನಾಡಿನ ಬಗ್ಗೆ ಕೇವಲ ನವೇಂಬರ್ ತಿಂಗಳುಗಳಲ್ಲಿ ಮಾತ್ರ ನೆನೆಯದೆ ಪ್ರತಿದಿನ ಅದರ ಯಶಸ್ವಿಗೆ ಶ್ರಮಿಸಬೇಕಿದೆ ಎಂದು ಹೇಳಿದರು.
    ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಈ.ಟಿ.ವಿ.ಯ ಜಿಲ್ಲಾ ವರದಿಗಾರಾದ ಶರಣಪ್ಪ ಬಾಚಲಾಪುರ ಮಾತನಾಡುತ್ತ,ಇಂದಿನ ಆಧುನಿಕತೆಯ ಬರಾಟೆಯಲ್ಲಿ ಯುವ ಪೀಳಿಗೆಗಳಿಗೆ ಜಾನಪದ ವಿವಿಧ ಪ್ರಕಾರಗಳ ಪರಿಚಯವೇ ಇಲ್ಲದಂತಾಗಿದೆ.ಪ್ರಾಚೀನ ಕಾಲದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕುಟ್ಟುವ ಹಾಗೂ ಬೀಸುವ ಚಟುವಟಿಕೆಗಳಲ್ಲಿ ಅನೇಕ ರೀತಿಯ ಜಾನಪದ ಹಾಡುಗಳನ್ನು ಹೇಳುತ್ತಿದ್ದರು.ಆದರೆ ಅಂತಹ ಹಾಡುಗಳು ಇಂದು ಮಾಯವಾಗಿವೆ.ಮಾದ್ಯಮಗಳು ನಮ್ಮ ನಾಡಿನ ಸಂಸ್ಕೃತಿ,ಕಲೆ ಹಾಗೂ ಸಾಹಿತ್ಯಗಳಿಗೆ ಹೆಚ್ಚು ಒತ್ತು ನೀಡದೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಹೆಚ್ಚಿನ ಒತ್ತು ನೀಡುತ್ತಿರುವುದು ವಿಷಾದನೀಯ ಸಂಗತಿಯಾಗಿದೆ.ಆದರಿಂದ ಮಾದ್ಯಮಗಳು ಕೂಡಾ ನಮ್ಮ ಕಲೆ-ಸಂಸ್ಕೃತಿಯ ಕಾರ್ಯಗಳಿಗೆ ಹೆಚ್ಚು ಒತ್ತು ನೀಡಿ.ಅವುಗಳ ಉಳುವಿಗಾಗಿ ಪ್ರಯತ್ನಿಸಬೇಕಿದೆ ಎಂದು ಹೇಳಿದರು.
   ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ ಮಾತನಾಡುತ್ತ,ಜಿಲ್ಲೆಯಲ್ಲಿ ಸ್ಥಳೀಯವಾಗಿ ಯಾವುದೇ ರೀತಿಯ ಆರ್ಥಿಕ ಸಹಾಯವನ್ನು ಪಡೆಯದೆ ಮಾಡುತ್ತಿರುವ ಪ್ರಥಮ ಬೃಹತ ಕಾರ್ಯಕ್ರಮವಾಗಿದೆ.ಕೊಪ್ಪಳ ಜಿಲ್ಲೆಯ ಜನತೆಗೆ ಗವಿಸಿದ್ದೇಶ್ವರ ಜಾತ್ರೆಯ ರೀತಿಯ ವಾತಾವರಣವನ್ನು ಸೃಷ್ಟಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ.ಇಂತಹ ಕಾರ್ಯಕ್ರಮಗಳಿಗೆ ಸದಾ ನನ್ನ ಸಹಕಾರ ಇರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿಗಳಾದ ರಾಘವೇಂದ್ರ ಪಾನಘಂಟಿ,ತಾಂಡವ ಕಲಾನಿಕೇತನ ಸಂಸ್ಥೆಯ ಅಧ್ಯಕ್ಷರಾದ ಮಂಜುನಾಯ್ಕ ನಾಯ್ಕ,ಭೈರವಿ ಕಲಾನಿಕೇತನ ಸಂಸ್ಥೆಯ ಅಧ್ಯಕ್ಷರಾದ ಕೆ.ಎನ್.ಶಾರದಮ್ಮ,ಉತ್ಸವ ಸಮಿತಿಯ ಸದಸ್ಯರಾದ ಸಾಹೇಬಗೌಡ್ರ ಹಳೇಮನಿ,ಸುಭಾಸ ಕಲಾಲ ಮುಂತಾದವರು ಹಾಜರಿದ್ದರು.
ಕಾರ್ಯಕ್ರಮವನ್ನು ಉತ್ಸವ ಸಮಿತಿಯ ಸಂಚಾಲಕರಾದ ಬೀರಪ್ಪ ಅಂಡಗಿ ಚಿಲವಾಡಗಿ ನಿರೂಪಿಸಿದರು.
 ಉತ್ಸವ ಸಮಿತಿಯ ಸದಸ್ಯರಾದ ಸುರೇಶ ಕುಂಬಾರ ಸ್ವಾಗತಿಸಿ,ಆನಂದ ಹಳ್ಳಿಗುಡಿ ವಂದಿಸಿದರು.
ಇದೇ ಸಂದರ್ಭದಲ್ಲಿ ನಿವೃತ್ತ ವೈಧ್ಯಾಧಿಕಾರಿಗಳಾದ ಆರ್.ಎಂ.ಪಾಟೀಲ,ಭಾಗ್ಯನಗರ ಭಜನಾ ಕಲಾವಿದರಾದ ತಿಮ್ಮಣ್ಣ ಹಳೇಪೇಟೆ,ಮುಸಲಾಪುರದ ವಿಕಲಚೇತನ ಕಲಾವಿದರಾದ ಪ್ರಭಾಕರ ಪತ್ತಾರ,ಸಂಗೀತ ಶಿಕ್ಷಕರಾದ ಅಂಬಣ್ಣ ಕೊಪ್ಪಳದರವನ್ನು ಸನ್ಮಾನಿಸಲಾಯಿತು.

Leave a Reply

Top