You are here
Home > Koppal News > ಡಿ.೦೮ ರಿಂದ ಕ್ರೀಡಾ ವಸತಿ ಶಾಲೆಯ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ಪ್ರಾರಂಭ

ಡಿ.೦೮ ರಿಂದ ಕ್ರೀಡಾ ವಸತಿ ಶಾಲೆಯ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ಪ್ರಾರಂಭ

 ಜಿಲ್ಲಾ ಪಂಚಾಯತಿ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ೨೦೧೫-೧೬ನೇ ಸಾಲಿಗೆ ಕ್ರೀಡಾ ವಸತಿ ಶಾಲೆ ಮತ್ತು ಕ್ರೀಡಾ ವಸತಿ ನಿಲಯಗಳಿಗೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಯನ್ನು ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಡಿ.೦೮ ರಿಂದ ೨೦ ರವರೆಗೆ ಪ್ರಾರಂಭಿಸಲಾಗುವುದು ಎಂದು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಕುಷ್ಟಗಿ ತಾಲೂಕಿನಲ್ಲಿ ಡಿ.೦೮ ರಂದು ಹನುಮಸಾಗರ ಹಾಗೂ ಡಿ.೦೯ ರಂದು ತಾವರಗೇರಾದ ಸರಕಾರಿ ಪದವಿ ಪೂರ್ವ ಕಾಲೇಜು ಆವರಣ, ಯಲಬುರ್ಗಾ ತಾಲೂಕಿನಲ್ಲಿ ಡಿ.೧೦ ರಂದು ಮಂಗಳೂರು ಹಾಗೂ ಡಿ.೧೧ ರಂದು ಹಿರೇವಂಕಲಕುಂಟಾದ ಸರಕಾರಿ ಪದವಿ ಪೂರ್ವ ಕಾಲೇಜು ಆವರಣ, ಗಂಗಾವತಿ ತಾಲೂಕಿನಲ್ಲಿ ಡಿ.೧೨ ರಂದು ಕನಕಗಿರಿಯ ಸರಕಾರಿ ಪದವಿ ಪೂರ್ವ ಕಾಲೇಜು ಆವರಣ ಹಾಗೂ ಡಿ.೧೩ ರಂದು ಕಾರಟಗಿಯ ಶರಣಬಸವೇಶ್ವರ ಕನ್ನಡ ಮತ್ತು ಇಂಗ್ಲೀಷ್ ಶಾಲಾ ಆವರಣ, ಕೊಪ್ಪಳ ತಾಲೂಕಿನಲ್ಲಿ ಡಿ.೧೫ ರಂದು ಹಿರೇಸಿಂದೋಗಿ, ಡಿ.೧೬ ರಂದು ಮುನಿರಾಬಾದ್‌ನ ಸರಕಾರಿ ಪದವಿ ಪೂರ್ವ ಕಾಲೇಜು ಆವರಣ, ಡಿ.೨೦ ರಂದು ಕೊಪ್ಪಳ ಜಿಲ್ಲಾ ಕ್ರೀಡಾಂಗಣ ಆವರಣದಲ್ಲಿ ಆಯ್ಕೆ ಪ್ರಕ್ರಿಯೆ ಜರುಗಲಿದೆ.
ವಿಶೇಷ ಸೂಚನೆ : ಒಂದು ವೇಳೆ ಕ್ರೀಡಾಪಟುಗಳಿಗೆ ಒಂದು ಕೇಂದ್ರದಲ್ಲಿ ಭಾಗವಹಿಸಲು ಅವಕಾಶ ಸಿಗದೇ ಇದ್ದ ಪಕ್ಷದಲ್ಲಿ ಬೇರೆ ಕೇಂದ್ರದಲ್ಲಿ ಭಾಗವಹಿಸುವ ಅವಕಾಶವಿರುತ್ತದೆ. ತಮ್ಮ ಶಾಲೆಯಿಂದ ಜನ್ಮದಿನಾಂಕ ಹಾಗೂ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ದೃಢೀಕರಣ ಸರ್ಟಿಫಿಕೇಟ್ ನೊಂದಿಗೆ ಹಾಜರಾಗಿರಬೇಕು. 
ಆಯ್ಕೆಗೆ ಅರ್ಹತೆ : ಕ್ರೀಡಾ ಶಾಲೆಗಳಿಗೆ ೧೪ ವರ್ಷದ ಒಳಗಿನವರು (ಕಿರಿಯರು) ದಿನಾಂಕ : ೦೧/೦೬/೨೦೦೧ ರ ನಂತರ ಜನಿಸಿದವರು ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ. ದಿನಾಂಕ : ೦೧/೦೬/೨೦೧೫ ಕ್ಕೆ ೧೪ ವರ್ಷದವರಾಗಿರಬೇಕು. ಪ್ರಸ್ತುತ ೭ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಮುಂದಿನ ೨೦೧೫-೧೬ ನೇ ಶೈಕ್ಷಣಿಕ ವರ್ಷದಲ್ಲಿ ೮ ನೇ ತರಗತಿಗೆ ಸೇರಲು ಅರ್ಹತೆ ಹೊಂದಿರಬೇಕು.(೭ ನೇ ತರಗತಿ ಉತ್ತೀರ್ಣರಾಗಿರಬೇಕು) ಕ್ರೀಡಾ ವಸತಿ ಶಾಲೆಗಳಿಗೆ ಈ ಕೆಳಕಂಡ ಕ್ರೀಡೆಗಳಿಗೆ ಮಾತ್ರ ಆಯ್ಕೆ : ಬಾಲಕ / ಬಾಲಕಿಯರಿಗೆ ಮಾತ್ರ ಅಥ್ಲೆಟಿಕ್ಸ್, ವಾಲಿಬಾಲ್, ಬಾಸ್ಕೇಟ್‌ಬಾಲ್,ಕುಸ್ತಿ,ಸೈಕ್ಲಿಂಗ್, ಜೂಡೊ,ಹಾಕಿ. ಆಯ್ಕೆಗೆ ಅರ್ಹತೆ : ಕ್ರೀಡಾ ವಸತಿನಿಲಯಗಳಿಗೆ ೧೮ ವರ್ಷದ ಒಳಗಿನವರು (ಹಿರಿಯರು) ದಿನಾಂಕ : ೦೧/೦೬/೧೯೯೭ ರ ನಂತರ ಜನಿಸಿದವರು ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ. ದಿನಾಂಕ:೦೧/೦೬/೨೦೧೫ ಕ್ಕೆ ೧೮ ವರ್ಷದವರಾಗಿರಬೇಕು. ಪ್ರಸ್ತುತ ೧೦ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಮುಂದಿನ ೨೦೧೫-೧೬ ನೇ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ಪಿಯುಸಿಗೆ  ಸೇರಲು ಅರ್ಹತೆ ಹೊಂದಿರಬೇಕು.(೧೦ ನೇ ತರಗತಿ ಉತ್ತೀರ್ಣರಾಗಿರಬೇಕು) 
ಕ್ರೀಡಾ ವಸತಿ ಶಾಲೆಗಳಿಗೆ ಈ ಕ್ರೀಡೆಗಳಿಗೆ ಮಾತ್ರ ಆಯ್ಕೆ : ಬಾಲಕ / ಬಾಲಕಿಯರಿಗೆ ಮಾತ್ರ ಅಥ್ಲೆಟಿಕ್ಸ್, ವಾಲಿಬಾಲ್, ಬಾಸ್ಕೇಟ್‌ಬಾಲ್,ಕುಸ್ತಿ,ಸೈಕ್ಲಿಂಗ್, ಜೂಡೊ,ಹಾಕಿ. ಕ್ರೀಡಾಶಾಲೆಗೆ ವಾಲಿಬಾಲ್ ಮತ್ತು ಬಾಸ್ಕೆಟ್ ಬಾಲ್ ಗೆ ಕನಿಷ್ಟ ಎತ್ತರ ಬಾಲಕಿಯರಿಗೆ ೧೬೫ ಬಾಲಕರಿಗೆ ೧೭೫ ಸೆಂ ಮೀ ಎತ್ತರ ಕಡ್ಡಾಯ ಕ್ರೀಡಾವಸತಿನಿಲಯಕ್ಕೆ ವಾಲಿಬಾಲ್‌ಗೆ ಕನಿಷ್ಟ ಎತ್ತರ ಬಾಲಕಿಯರಿಗೆ ೧೭೫ ಮತ್ತು ಬಾಲಕರಿಗೆ ೧೮೫ ಸೆಂ ಮೀ ಎತ್ತರ ಕಡ್ಡಾಯ. ಆಯ್ಕೆಯ ನಾರ್ಮ್ಸನಲ್ಲಿ ಶೇ೫೦% ಮೇಲ್ಪಟ್ಟು ಅಂಕಗಳಿಸಿದವರಿಗೆ ಮಾತ್ರ ರಾಜ್ಯ ಮಟ್ಟದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಕ್ರೀಡಾ ವಸತಿ ನಿಲಯಗಳಿಗೆ ಆಯ್ಕೆ ಬಯಸುವವರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿದ ಅನುಭವವಿರಬೇಕು. ವಿವಿಧ ಕೇಂದ್ರಗಳಲ್ಲಿ ಆಯ್ಕೆಗೆ ಬರುವ ಕ್ರೀಡಾಪಟುಗಳಿಗೆ ಯಾವುದೇ ದಿನಭತ್ಯೆ ಮತ್ತು ಪ್ರಯಾಣ ಭತ್ಯೆ ನೀಡಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ದೂ.ಸಂಖ್ಯೆ : ೦೮೫೩೯-೨೦೧೪೦೦, ಸಿ. ಎ. ಪಾಟೀಲ್ ವಾಲೀಬಾಲ್ ತರಬೇತಿದಾರರು, ಕೊಪ್ಪಳ  ಮೊ.೯೩೪೨೩೮೭೯೩೫, ಎ.ಎನ್ ಯತಿರಾಜು ಖೊ-ಖೋ ತರಬೇತಿದಾರರು, ಮೊ.೯೪೪೮೬೩೩೧೪೬, ಎನ್.ಎಸ್. ಪಾಟೀಲ್, ಸ.ಯು ಸೇವಾ ಹಾಗೂ ಕ್ರೀಡಾಧಿಕಾರಿಗಳು ಕೊಪ್ಪಳ ಮೊ.೯೯೮೦೮೫೨೭೩೫, ತಿಪ್ಪೇಸ್ವಾಮಿ, ಸ. ಯು ಸೇವಾ ಹಾಗೂ ಕ್ರೀಡಾಧಿಕಾರಿಗಳು ಗಂಗಾವತಿ ಮೊ.೯೦೦೮೩೬೩೬೭೦, ಮಲ್ಲಿಕಾರ್ಜುನ, ಸ. ಯು ಸೇವಾ ಹಾಗೂ ಕ್ರೀಡಾಧಿಕಾರಿಗಳು ಕುಷ್ಟಗಿ ಮೊ.೯೬೬೩೦೫೮೬೬೦, ಹನುಮಂತಪ್ಪ, ಸ. ಯು ಸೇವಾ ಹಾಗೂ ಕ್ರೀಡಾಧಿಕಾರಿಗಳು ಯಲಬುರ್ಗಾ  ಮೊ. ೮೯೭೦೨೮೮೮೫೭ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

Leave a Reply

Top