ಕನ್ನಡ ಚಿತ್ರರಂಗ ಮತ್ತು ಕಾದಂಬರಿ : ವಿಚಾರ ಸಂಕಿರಣ

  ಕರ್ನಾಟಕ ಚಲನಚಿತ್ರ ಅಕಾಡೆಮಿ, ಕರ್ನಾಟಕ ಮಾಧ್ಯಮ ಅಕಾಡೆಮಿ, ಕಂಠೀರವ ಸ್ಟುಡಿಯೋಸ್ ಮತ್ತು ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಫೆಬ್ರವರಿ 11 ರಂದು ಮೈಸೂರಿನ ರಾಣಿ ಬಹದ್ದೂರ್ ಸಭಾಂಗಣದಲ್ಲಿ “ಕನ್ನಡ ಚಿತ್ರರಂಗ ಮತ್ತು ಕಾದಂಬರಿ” ಕುರಿತ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ.
ಫೆಬ್ರವರಿ 11 ರಂದು ಬೆಳಿಗ್ಗೆ 10-30 ಗಂಟೆಗೆ ವಿಚಾರ ಸಂಕಿರಣವನ್ನು ಕಂದಾಯ ಸಚಿವ  ವಿ. ಶ್ರೀನಿವಾಸ್ ಪ್ರಸಾದ್, ಲೋಕೋಪಯೋಗಿ ಸಚಿವ  ಹೆಚ್. ಸಿ. ಮಹಾದೇವಪ್ಪ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಹಜ್ ಮತ್ತು ವಾರ್ತಾ ಸಚಿವ  ರೋಷನ್ ಬೇಗ್ ಅವರು ಉದ್ಫಾಟಿಸುವರು.  ಶಾಸಕ  ವಾಸು ಅಧ್ಯಕ್ಷತೆ ವಹಿಸುವರು.  ಮುಖ್ಯ ಅತಿಥಿಗಳಾಗಿ ವಿಧಾನಸಭಾ ಸದಸ್ಯರಾದ ಡಾ. ಜಯಮಾಲಾ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ  ಎಂ.ಎ. ಪೊನ್ನಪ್ಪ, ಕಂಠೀರವ ಸ್ಟುಡಿಯೋಸ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಅರಸು,  ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ, ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕಿ ಇಲಾಖೆಯ ನಿರ್ದೇಶಕ  ಎನ್. ಆರ್. ವಿಶುಕುಮಾರ್ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ   ಥಾಮಸ್ ಡಿಸೋಜ್ ಅವರು ಉಪಸ್ಥಿತರಿರುವರು.ವಿಚಾರ ಸಂಕಿರಣದ ಅಂಗವಾಗಿ ಮೂರು ಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಸಂಜೆ 4-00 ಗಂಟೆಗೆ  ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಗಿದೆ.
Please follow and like us:
error