ಬಡವರಿಗೆ ಅನ್ನ ಸಿಗುವುದು ಈ ಯೋಜನೆ ಉದ್ದೇಶ-ಹೊನ್ನೂರುಸಾಬ ಭೈರಾಪೂರು

ಕೊಪ್ಪಳ  : ರಾಜ್ಯದಲ್ಲಿ ಬಡವರಿಗೆ ಹಸಿವುನಿಂದ ಮುಕ್ತಗೊಳಿಸಲು ಬಿಪಿಎಲ್ ಕಾರ್ಡ್‌ದಾರ ಎಲ್ಲಾ ಬಡವರಿಗೆ ಮೇ ೦೧ ರಿಂದ ೫ಕೆ.ಜಿ ಉಚಿತ ಅಕ್ಕಿ, ರಿಯಾಯತಿ ದರದಲ್ಲಿ ೨೫ ರೂ.ಗೆ ೧ ಲೀಟರ್ ತಾಳೆ ಎಣ್ಣೆ, ೨ ರೂಗೆ ಅಯೋಡಿನ್ ಉಪ್ಪುನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರಕಾರ ನೀಡುತ್ತಿದೆ ಅನ್ನ ಭಾಗ್ಯ ಯೋಜನೆಯಡಿ ಬಡವರಿಗೆ ಹೊಟ್ಟೆ ತುಂಬಾ ಅನ್ನ ಸಿಗುವಂತೆ ಮಾಡುವುದು ಈ ಯೋಜನೆಯ ಉದ್ದೇಶ ಎಂದು ಭಾಗ್ಯನಗರ ಗ್ರಾ.ಪಂ ಅಧ್ಯಕ್ಷ ಹೊನ್ನೂರುಸಾಬ ಭೈರಾಪುರು ಹೇಳಿದರು.
ಅವರು ರವಿವಾರದಂದು ವಾರ್ಡ್ ೯ ರಲ್ಲಿ ನ್ಯಾಯಬೆಲೆ ಅಂಗಡಿ ಮುಂಭಾಗ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ ಉಚಿತ ಅಕ್ಕಿ ವಿತರಣೆ ಕಾರ‍್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಬಿಪಿಎಲ್ ಕಾರ್ಡ್ ಹೊಂದಿದವರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಅಂದಾಗ ರಾಜ್ಯಸರಕಾರ ಉದ್ದೇಶ ಈಡೇರಿದಂತೆಯಾಗುತ್ತದೆ, ಈ ಆಹಾರಧಾನ್ಯಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಬೇಡಿ ಅಂತವರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ ಈಗಾಗಿ ಈ ಆಹಾರಧಾನ್ಯಗಳನ್ನು ನ್ಯಾಯಬೆಲೆ ಅಂಗಡಿಯಿಂದ ಪಡೆದು ನಿಮ್ಮ ಕುಟುಂಬದ ಹಸಿವು ಮುಕ್ತಗೊಳಿಸಿ ಹೊಟ್ಟೆ ತುಂಬಾ ಊಟ ಮಾಡಿ ನೆಮ್ಮದಿ ಜೀವನ ಸಾಗಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಶಂಕ್ರಪ್ಪ ಕುರಹಟ್ಟಿ, ಮಲ್ಲೇಶ ಬುಲ್ಟಿ, ಜಗದೀಶ ಮಾಲಗಿತ್ತಿ, ಗ್ಯಾನಪ್ಪ ಕುರಹಟ್ಟಿ, ಸುರೇಶ ದರಗದಕಟ್ಟಿ, ಚಂದ್ರು ಉಂಕಿ, ಶಿವರಾಮ ಮ್ಯಾಗಳಮನಿ, ನ್ಯಾಯಬೆಲೆ ಅಂಗಡಿ ಮಾಲೀಕ ಮಲ್ಲಪ್ಪ ತುಬಾಕಿ, ವಾರ್ಡಿನ ಗುರು ಹಿರಿಯರು, ಮಹಿಳೆಯರು ಉಪಸ್ಥಿತರಿದ್ದರು.
Please follow and like us:
error