ಶರಣ ಹುಣ್ಣಿಮೆ.

ಕೊಪ್ಪಳ, ವಿಶ್ವಗುರು ಬಸವೇಶ್ವರ ಟ್ರಸ್ಟ್, ಕದಳಿ ಮಹಿಳಾ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ ೫೮ನೇ ಶರಣ ಹುಣ್ಣಿಮೆ ಮತ್ತು ಶಿವಶರಣ ಹಡಪದ ಅಪ್ಪಣ್ಣ, ಶರಣೆ ನಿಜಮುಕ್ತೆ ಲಿಂಗಮ್ಮ ಹಾಗೂ ವಚನ ಪಿತಾಮಹ ಡಾ. ಫಕೀರಪ್ಪ ಹಳಕಟ್ಟಿ ಇವರ ಜಯಂತಿ ಆಚರಣೆ ಕಾರ್ಯಕ್ರಮ ನಗರದ ಹುಡ್ಕೋ ಕಾಲೋನಿಯಲ್ಲಿ ದಿನಾಂಕ ೦೨-೦೭-೨೦೧೫ ಗುರುವಾರ ಸಂಜೆ ೬-೩೦ಕ್ಕೆ ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ನಿರ್ಮಲಾ.ವಿ.ಬಳ್ಳೊಳ್ಳಿ, ಜಿಲ್ಲಾ ಅಧ್ಯಕ್ಷರು ಕದಳಿ ಮಹಿಳಾ ವೇದಿಕೆ ಕೊಪ್ಪಳ ಇವರು ವಹಿಸಲಿದ್ದಾರೆ. ಮುಖ್ಯ ಅತಿಥಿ ಉಪನ್ಯಾಸಕರಾಗಿ ಶ್ರೀ ಶಂಕ್ರಣ್ಣ ಅಂಗಡಿ,  ಬಸವತತ್ವ ಪ್ರವಚನಕಾರರು ಗದಗ ಇವರು ಆಗಮಿಸಿಲಿದ್ದಾರೆ.  ಅತಿಥಿಗಳಾಗಿ ಶ್ರೀ ನಾಗರಾಜ ನರೆಗಲ್  ಉಪಾಧ್ಯಕ್ಷರು ಹಡಪದ ಅಪ್ಪಣ್ಣ ಸಮಾಜ ಭಾಗ್ಯನಗರ ಇವರು ಆಗಮಿಸಲಿದ್ದಾರೆ. ಶ್ರೀ ಎಸ್.ಬಿ.ಶಾಂತಪ್ಪನವರು ಪ್ರಾಚಾರ್ಯರು ಸರಕಾರಿ ಪದವಿ ಕಾಲೇಜು ಕೊಪ್ಪಳ  ಇವರು ಪ್ರಸಾದ ದಾಸೋಹ ವಹಿಸಿಕೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತ ಕೋರಲಾಗಿದೆ. ಎಂದು ಟ್ರಸ್ಟ್ ಕಾರ್ಯದರ್ಶಿ ರಾಜೇಶ ಸಸಿಮಠ ತಿಳಿಸಿದ್ದಾರೆ.
Please follow and like us:
error