ಇಹ-ಪರ ಸಾಧನೆಗೆ ರಂಜಾನ್‌ಮಾಸಾಚರಣೆ ಉತ್ತಮ ಅವಕಾಶ ಸಯ್ಯದ್.

ಕೊಪ್ಪಳ,ಜು,೧೦-

ಪ್ರತಿಯೊಬ್ಬ ಮುಸ್ಲಿಮನು ತನ್ನ ಜೀವನದಲ್ಲಿ ಹೆಚ್ಚು ಪುಣ್ಯಗಳಿಸಿಕೊಳ್ಳಲು ರಂಜಾನ್ ಮಾಸಾಚರಣೆಯಲ್ಲಿ ಉಪವಾಸ ವೃತ ಆಚರಣೆ ಮಾಡುವುದುರ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಿ ತನ್ನ ಇಹ ಪರ ಸಾಧನೆಗೆ ಈ ಪವಿತ್ರ ರಂಜಾನ್ ಮಾಸಾಚರಣೆ ಉತ್ತಮ ಅವಕಾಶವಾಗಿದೆ ಎಂದು ಕೊಪ್ಪಳ ಮುಸ್ಲಿಂ ಒಕ್ಕೂಟ ಸಮಿತಿ ಅಧ್ಯಕ್ಷ ಹಾಗೂ ಸಮಾಜ ಸೇವಕ ಕೆ.ಎಂ.ಸಯ್ಯದ್ ಅಭಿಪ್ರಾಯ ಪಟ್ಟರು.ಅವರು ಶ್ರುಕ್ರವಾರ ಬೆಳಿಗ್ಗೆ ಸರ್ದಾರ ಗಲ್ಲಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕರ್ನಾಟಕ ಉರ್ದುಅಕ್ಯಾಡಮಿ ವತಿಯಿಂದ ಆಮದೇ ರಂಜಾನ್ ಅಂಗವಾಗಿ ಏರ್ಪಡಿಸಿದ ರಂಜಾನ್, ರೋಜಾ ಮತ್ತು ನಾವು ಎಂಬ ವಿಷಯದ ಕುರಿತು ನಡೆದ ವಿಚಾರ ಸಂಕೀರ್ಣ ಹಾಗೂ ಇಫ್ತಾರ ಕೂಟದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು  ಇಸ್ಲಾಂ ಧರ್ಮದ ಪವಿತ್ರ ರಂಜಾನ್ ಮಾಸಾಚರಣೆಯಲ್ಲಿ ಉಪವಾಸ ಆಚರಣೆ ಮಾಡುವುದರ ಮೂಲಕ ಮನಶುದ್ಧಿಗೊಳಿಸುತ್ತದೆ. ರಂಜಾನ್ ಉಪವಾಸ ಆಚರಣೆಯಿಂದ ಮನಸ್ಸಿಗೆ ಶಾಂತಿ, ನೆಮ್ಮದಿ, ಆರೋಗ್ಯ ಭಾಗ್ಯ ದೊರೆಯಲಿದೆ ಎಂದ ಅವರು ಹಸಿವು ಅಂದರೇನು ಎಂಬುವುದರ ಪರಿಕಲ್ಪನೆ ಈ ಉಪವಾಸ ಆಚರಣೆಯಿಂದ ಅರ್ಥವಾಗುತ್ತದೆ. ಮಾನಸಿಕ, ದೈಹಿಕ, ಸದೃಢತೆ ಮನುಷ್ಯನಲ್ಲಿ ಮೂಡುತ್ತದೆ. ಮನಶಾಂತಿ, ಅಂತರಾತ್ಮ ಶುದ್ಧೀಕರಣಗೊಳ್ಳುತ್ತದೆ.  ರಂಜಾನ ಮಾಸಾಚರಣೆಯಲ್ಲಿ ಉಪವಾಸ ಆಚರಣೆ ಮಾಡುವುದರ ಮೂಲಕ ಮನುಷ್ಯ ತನ್ನ ಮುಂದಿನ ಆರೋಗ್ಯ ಪೂರ್ಣ ಜೀವನ ನಡೆಸಲು ಈ ಮಾಸಾಚರಣೆ ಸಹಕಾರಿಯಾಗಲಿದೆ ಕೊಪ್ಪಳ ಮುಸ್ಲಿಂ ಒಕ್ಕೂಟ ಸಮಿತಿ ಅಧ್ಯಕ್ಷ ಹಾಗೂ ಸಮಾಜ ಸೇವಕ ಕೆ.ಎಂ.ಸಯ್ಯದ್ ಹೇಳಿದರು.

ಮುಫ್ತಿ ಮೊಹ್ಮದ್ ನಜೀರ ಅಹ್ಮದ್ ತಸ್ಕೀನ್ ಉಲ್ಲ್ ಖಾದ್ರಿಯವರು ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಎಂ.ಪೂಜಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಉರ್ದು ಪ್ರಾಧ್ಯಾಪಕ ಅನ್ವರ ಹುಸೇನ್, ಉರ್ದು ಹಿರಿಯ ಕವಿ ಅಲ್ಲಂ ಸಾಬ್ ಚೌದರಿ, ಉರ್ದು ಮಾನೇಜಮೆಂಟ್ ಕಮೀಟಿ ಅಧ್ಯಕ್ಷ ಎಂ.ಎ.ಮಾಜೀದ್ ಸಿದ್ದಿಕಿ, ಪತ್ರಕರ್ತ ಎಂ.ಸಾದಿಕ ಅಲಿ, ಉರ್ದು ಶಿಕ್ಷಣ ಸಂಯೋಜಕ ಮೈನುದ್ದೀನ್, ಸಯ್ಯದ್ ಅಬ್ದುಲ್ ರಹೇಮಾನ್, ಅಬ್ದುಲ್ ವಹಾಬ್ ಸೇರಿಒದಂತೆ ಅನೇಕರು ಕಾರ್ಯಕ್ರಮದಲ್ಲಿ ಪಲ್ಗೊಂಡಿದ್ದು ಇದೇ ಸಂದರ್ಭದಲ್ಲಿ ಅತಿಥಿಗಣ್ಯರೆಲ್ಲರಿಗೆ ಸನ್ಮಾನಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಗೆ ಇಫ್ತಾರ ಕೂಟದ ಪ್ರಯುಕ್ತ ಹಣ್ಣು ಹಂಪಲು ವಿತರಿಸಲಾಯಿತು.

Leave a Reply